ಬಳ್ಳಾರಿ/ ಕಂಪ್ಲಿ : ಪಟ್ಟಣದಲ್ಲಿ ಬಹು ನಿರೀಕ್ಷಿತ ಸಿವಿಲ್ ನ್ಯಾಯಾಲಯದ ಆರಂಭಕ್ಕೆ ಜಾಗೃತಿ ವಹಿಸಬೇಕು ಎಂದು ಒತ್ತಾಯಿಸಿ ಕಂಪ್ಲಿ ವಕೀಲರ ಬಳಗದ ಪದಾಧಿಕಾರಿಗಳು ಸೋಮವಾರ ಶಾಸಕ ಜೆ.ಎನ್. ಗಣೇಶ, ಪುರಸಭಾ ಅಧ್ಯಕ್ಷ ಭಟ್ಟ ಪ್ರಸಾದ್ ಹಾಗೂ ಮುಖ್ಯ ಅಧಿಕಾರಿ ಬಿ. ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು. ಸಿವಿಲ್ ನ್ಯಾಯಾಲಯವನ್ನು ಶೀಘ್ರ ಆರಂಭಿಸುವಂತೆ ಒತ್ತಾಯಿಸಿದರು. ವಕೀಲರ ಬಳಗದ ಕಾರ್ಯಾಧ್ಯಕ್ಷ ಕೆ. ಪ್ರಭಾಕರ್ ಮಾತನಾಡಿ ಕಂಪ್ಲಿಯಲ್ಲಿ ಸಿವಿಲ್ ನ್ಯಾಯಾಲಯ ಆರಂಭಿಸಲು ಸರ್ಕಾರದಿಂದ ಆದೇಶ ಹೊರ ಬಂದಿದ್ದು ಒಂದುವರೆ ವರ್ಷ ಕಳೆದರೂ ಇನ್ನೂ ಪ್ರಾರಂಭವಾಗಿಲ್ಲದಿರುವುದು ಇದರಿಂದ ಪಟ್ಟಣದ ಜನತೆಗೆ ಹಾಗೂ ವಕೀಲ ಸಮುದಾಯಕ್ಕೆ ಇದು ಅನ್ಯಾಯವಾಗಿದೆ ಸಿವಿಲ್ ನ್ಯಾಯಾಲಯಕ್ಕೆ ಅಗತ್ಯ ಕಟ್ಟಡ ಒದಗಿಸುವ ಸಂಬಂಧ ಪುರಸಭೆಯು ಈಗಾಗಲೇ ಠರಾವನ್ನು ಅಂಗೀಕರಿಸಿದೆ ಆದರೆ ಅದರ ಅನುಮೋದನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಕಿ ಉಳಿದಿದೆ ಅವರು ಬೆಂಗಳೂರಿನ ಫೌರಾಡಳಿತ ನಿರ್ದೇಶಕರೊಂದಿಗೆ ಪತ್ರ ವ್ಯವಹಾರ ನಡೆಸಿ ತುರ್ತು ಕ್ರಮ ಕೈಗೊಂಡರೆ ನ್ಯಾಯಾಲಯ ಆರಂಭ ಸಾಧ್ಯವಾಗುತ್ತದೆ ಪುರಸಭೆ ಮತ್ತೊಮ್ಮೆ ಠರಾವು ಪಾಸ್ ಮಾಡಿ ಸರ್ಕಾರದ ಮೇಲೆ ಒತ್ತಾಯ ತರುವಂತೆ ಕ್ರಮವಹಿಸಬೇಕು ಎಂದರು 2024ರಂದು ಕಂಪ್ಲಿಯಲ್ಲಿ ಸಿವಿಲ್ ನ್ಯಾಯಾಲಯ ಆರಂಭಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದರು ಇದುವರೆಗೆ ಯಾವುದೇ ಕ್ರಮ ಕೈಗೊಳ್ಳುವ ಕೈಗೊಳ್ಳುವುದಿಲ್ಲ ವಕೀಲರು ಹಾಗೂ ಸಾರ್ವಜನಿಕರು ನ್ಯಾಯಕ್ಕಾಗಿ 50 ಕಿಲೋಮೀಟರ್ ದೂರದ ಬಳ್ಳಾರಿ ನ್ಯಾಯಾಲಯಕ್ಕೆ ತೆರಳ ಬೇಕಾಗುತ್ತಿದೆ ಇದು ಸಮಯ ಮತ್ತು ಹಣ ವ್ಯಯವಾಗುವ ಪರಿಸ್ಥಿತಿ ಉಂಟಾಗಿದೆ ಕಂಪ್ಲಿ ವೇಗವಾಗಿ ಅಭಿವೃದ್ಧಿಯ ದಾರಿಯಲ್ಲಿ ಸಾಗುತ್ತಿರುವ ಪ್ರಮುಖ ತಾಲೂಕು ಕೇಂದ್ರವಾಗಿದೆ ಜನಸಂಖ್ಯೆ ಆಡಳಿತಾತ್ಮಕ ವಿಸ್ತರಣೆ ಹಾಗೂ ಕಾನೂನು ವಿವಾಹಗಳ ಪ್ರಮಾಣವನ್ನು ಪರಿಗಣಿಸಿದಾಗ ಇಲ್ಲಿಗೆ ಪ್ರತ್ಯೇಕ ಸಿವಿಲ್ ನ್ಯಾಯ ಅತ್ಯಾವಶ್ಯಕ ಸರ್ಕಾರ ಮತ್ತು ಆಡಳಿತದ ಅಧಿಕಾರಿಗಳು ಇದನ್ನ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಕೀಲರ ಬಳಗದ ಪದಾಧಿಕಾರಿಗಳಾದ ರಘುನಾಥರಾವ ಹೆಚ್. ನಾಗರಾಜ, ಹರೀಶ ಅಯೋಧಿ, ಮರಿ ಶೆಟ್ರ ವಿಜಯಲಕ್ಷ್ಮಿ, ಅಯ್ಯಪ್ಪ, ರುದ್ರಪ್ಪ, ಜಗದೀಶ್ ಟಿ. ಶಿವಪ್ಪ, ಹೆಚ್. ಹುಲಗಪ್ಪ ನಟರಾಜ್ ಸೇರಿದಂತೆ ಇತರರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















