
ಬಳ್ಳಾರಿ/ ಕಂಪ್ಲಿ : ಪಟ್ಟಣದಲ್ಲಿ ರಾಜ್ಯ ಷಾಮಿಯನ್ ಡೆಕೋರೇಟರ್ಸ್ ಧ್ವನಿ ಬೆಳಕು ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಪದಕಾರಿಗಳ ಸಂಘಟನಾ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಮೆಹಬೂಬ್ ಮುಲ್ಲಾ ಮಾತನಾಡಿ ಷಾಮಿಯಾನ ಡೆಕೋರೇಟರ್ ಹಾಗೂ ದ್ವನಿ ಬೆಳಕು ಕಾರ್ಮಿಕರನ್ನು ಸರ್ಕಾರವು ಅಧಿಕೃತವಾಗಿ ಶ್ರಮಿಕರೆಂದು ಪರಿಗಣಿಸಿರುವುದು ಮಹತ್ವದ ಹೆಜ್ಜೆ, ಆದರೆ ಈ ವರ್ಗದ ಶ್ರಮೀಕರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳು ವಾಸ್ತವದಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ ಕಾರ್ಯಕ್ರಮಗಳ ವೇಳೆ ಅಥವಾ ಸೇವಾ ಸಂದರ್ಭದಲ್ಲಿ ಶ್ರಮಿಕರ ಪ್ರಾಣ ಹಾನಿ ಅಥವಾ ಆಸ್ತಿ ನಷ್ಟವಾದಲ್ಲಿ ಸರ್ಕಾರದಿಂದ ಸೂಕ್ತ ಪರಿಹಾರ ದೊರೆಯಬೇಕು ಹಾಗೂ ಸರಂಜಾಮು ಸಂಗ್ರಹಣೆಗಾಗಿ ಸ್ಥಳೀಯ ಆಡಳಿತ ಉಚಿತವಾಗಿ ಗೋದಾಮು ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು. ಸಂಘದ ರಾಜ್ಯ ಪ್ರತಿನಿಧಿ ಹಾಗೂ ಹಿರಿಯ ಡಕೋರೆಟರ್ ಹೆಚ್. ನಾಗರಾಜ್ ಮಾತನಾಡಿ ಪಟ್ಟಣದ ಡೆಕೋರೇಟರ್ಸ್ ಗಳು ಸಾಮಾಜಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ ಇವರಿಗೆ ಸಮುದಾಯ ಭವನದ ಅಗತ್ಯ ಇದೆ ಪುರಸಭೆ ನಿವೇಶನ ನೀಡಬೇಕು ಕಟ್ಟಡ ನಿರ್ಮಾಣಕ್ಕೆ ಶಾಸಕರು ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ ಹೆಚ್. ನಾಗರಾಜ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹೊಸ ಜಿಲ್ಲಾ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಕುರುಗೋಡು ಟಿ. ಮೌಲಾಲಿ ಅವರನ್ನು ಜಿಲ್ಲಾಧ್ಯಕ್ಷರಾಗಿ ಸಣಾಪುರ ವೀರೇಶ ಅವರನ್ನು ಕಂಪ್ಲಿ ತಾಲೂಕ ಅಧ್ಯಕ್ಷರಾಗಿ ಕಂಪ್ಲಿಯ ರವಿಕಿರಣ್ ಸಪ್ಲೈಯರ್ ಹಾಗೂ ಸಿರುಗುಪ್ಪದ ವಿದ್ಯಾನಂದ ಅವರನ್ನು ರಾಜ್ಯದ ಪ್ರತಿನಿಧಿಗಳಾಗಿ ಆಯ್ಕೆ ಮಾಡಲಾಯಿತು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂತಿಯಾಜ್ ತಾಲೂಕು ಮಾಜಿ ಅಧ್ಯಕ್ಷ ರಾಘವೇಂದ್ರ, ಹಾಗೆದಾಳ್ ವೀರೇಶ್, ಲೈಟಿಂಗ್ ನಾಗರಾಜ್, ಇಟ್ಟಗಿ ಮರೆಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















