ಬೀದರ್ :ಇಂದು ಕಾರ್ಮೆಲ್ ವೃತಿಪರ ತರಬೇತಿ ಸಂಸ್ಥೆಯಲ್ಲಿ ವಿಜೃಂಭಣೆಯಿಂದ ಮಕ್ಕಳ ಮೇಳವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಸಂಸ್ಥೆಯ ಘಟಕ ನಿರ್ದೇಶಕಿ ಭಗಿನಿ ಮರಿಯ ರೀತಾ ರವರು ಉದ್ಘಾಟಿಸಿ, ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಕಾರ್ಯಕ್ರಮ ಮಕ್ಕಳಲ್ಲಿ “ ಪ್ರತಿಭೆ, ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರಲ್ಲಿದ್ದ ಪ್ರತಿಭೆಗಳನ್ನು ಹೊರತರುವ ಒಂದು ಸುಂದರ ವೇದಿಕೆಯಾಗಿದೆ, ಇಂತಹ ಕಾರ್ಯಕ್ರಮಗಳು ಮಕ್ಕಳ ಸಲುವಾಗಿ ನಡೀತಾ ಇರಬೇಕು ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮಾನ್ ಅವಿನಾಶ್ ಹಾಗೂ ಶ್ರೀಮತಿ ಶರ್ಲಿನ್ ಅವರು ಕ್ರಮವಾಗಿ ಮಕ್ಕಳಲ್ಲಿ “ಸ್ವಯಂ ವಿಶ್ವಾಸದ ಶಕ್ತಿ” ಮತ್ತು “ಡಿಜಿಟಲ್ ಯುಗದಲ್ಲಿ ಸಮಯದ ಮೌಲ್ಯ” ಈ ವಿಷಯಗಳ ಮೇಲೆ ಪಾಠ ಮಾಡುವದರ ಜೊತೆಗೆ ಮಾರ್ಗದರ್ಶನ ನೀಡಿದರು.
ಒಟ್ಟು 10 ಹಳ್ಳಿಗಳಿಂದ 310 ಮಕ್ಕಳು ಭಾಗವಹಿಸಿದ್ದರು.ಮಕ್ಕಳು ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಮಕ್ಕಳ ಮೇಳದ ಪ್ರಯೋಜನವನ್ನು ಪಡೆದರು.
ಕಾರ್ಯಕ್ರಮದಲ್ಲಿ ಭಗಿನಿ ಕ್ರಿಸ್ಟಿನ ಮಿಸ್ಕಿತ ,ಭಗಿನಿ ಶ್ವೇತಾ ಹಾಗೂ ಕಾರ್ಮೆಲ್ ಸೇವಾ ಟ್ರಸ್ಟ್ನ ಸಿಬ್ಬಂದಿ ವರ್ಗ ಮತ್ತು ಬೋಧನಾ ಕೇಂದ್ರಗಳ ಶಿಕ್ಷಕರು ಉಪಸ್ಥಿತರಿದ್ದರು.
ವರದಿ : ರೋಹನ್ ವಾಘಮಾರೆ



















