ಕಾನೂನು ಕ್ರಮಕ್ಕೆ ಒತ್ತಾಯ ಕಾಳಗಿಯಲ್ಲಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಕಾಳಗಿ : ಇಡೀ ದೇಶವು ಸಂವಿಧಾನ ಹಾಗೂ ಕಾನೂನಿಗೆ ಗೌರವವನ್ನು ಕೊಡುತ್ತದೆ. ಆರೋಪಿ ವಕೀಲ ರಾಕೇಶ್ ಕಿಶೋರ್ ಕಿಶೋರ್ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಸೂಕ್ತವಾಗಿ ಕ್ರಮ ಕೈಗೊಳ್ಳಬೇಕೆಂದು ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ಕಾಳಗಿ ಪಟ್ಟಣದ ಅಂಬೇಡ್ಕರ್ ಸರ್ಕಲನಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು
ದಿ 06. 10. 2025 ರಂದು ನಡೆದಿದ್ದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಅವರ ಮೇಲೆ ಅದೇ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ರಾಕೇಶ್ ಕಿಶೋರ್ ಎಂಬ ಕಿಡಿಗೇಡಿ ತನ್ನ ಕಾಲಲ್ಲಿರುವ ಶೂ ಅನ್ನು ತೆಗೆದು ಅವರ ಮೇಲೆ ಎಸೆಯಲು ಯತ್ನಿಸಿ ಧರ್ಮದ ಪರ ಘೋಷಣೆ ಕೂಗುತ್ತಾ ಅವಮಾನಿಸಿರುತ್ತಾನೆ. ಈ ಘಟನೆ ಇಡೀ ದೇಶವೇ ತಗ್ಗಿಸುವ ಹೀನಾಯ ಕೃತ್ಯವಾಗಿದ್ದುದ್ದು ಭಾರತೀಯರೆಲ್ಲರಿಗೂ ಮಾಡಿದ ಅವಮಾನವಾಗಿದೆ. ಆದರಿಂದ ರಾಕೇಶ್ ಕಿಶೋರ್ ಎಂಬ ದೇಶದ್ರೋಹಿ ಮೂಲಭೂತವಾದಿಯನ್ನು ದೇಶದ್ರೋಹ ಅಡಿಯಲ್ಲಿ ಬಂಧಿಸಿ ಅವನ ಪರವಾನಿಗೆ ರದ್ದುಗೊಳಿಸಿ ಆಸ್ತಿ ಮುಟ್ಟುಗೋಲು ಮಾಡಿ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನೆ ಉದ್ದೇಶಿಸಿ ವಿವಿಧ ಸಂಘಟನೆಗಳು, ಪ್ರಮುಖರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರಮುಖರು ಕಲ್ಯಾಣ್ ರಾವ್ ಡೊಣ್ಣುರು, ಭರತ ಬುಳಾ, ಶಂಕರ್ ಹೇರೂರು, ಕಾಶಿನಾಥ್ ಶೆಳಗಿ, ಅವಿನಾಶ್ ಕೊಡದೂರ, ಪ್ರದೀಪ್ ಡೊಣ್ಣೂರ್, ಗುರು ಕೋಣಿಗ, ಖತಲಪ್ಪ ಅಂಕನ, ಮಾರುತಿ ತೇಗಲ್ ತಿಪ್ಪಿ, ಮಲ್ಲಿಕಾರ್ಜುನ್ ಗವಾರ್, ಬಸವರಾಜ್ ವಜೀರ್ ಗಾವ್, ಮೋಹನ್ ಚಿನ್ನ ರಮೇಶ್ ಕುಡ್ಡಹಳ್ಳಿ, ಮಹೇಂದ್ರ ಕೊಳ್ಳಿ, ಅರ್ಜುನ್ ಎನ್, ಕೆ, ಹಣಮಂತ್ ಕುಡ್ಹಳ್ಳಿ, ಸುನಿಲ್ ಕೋರವಾರ, ಬಸವರಾಜ್ ಮೇಲ್ಕೇರಿ, ಅಶೋಕ್ ಬೆಡಸೂರ್, ಬಾಬುರಾವ್ ಡೊಣ್ಣೂರ್, ಕಾಶಿನಾಥ್ ವಚ್ಚಾ, ಸುಬ್ಬಣ್ಣ ಸಾಲಹಳ್ಳಿ, ಸೂರ್ಯಕಾಂತ್ ಶರ್ಮಾ, ಅಶೋಕ್ ದೊಡ್ಮನಿ ಸೇರಿದಂತೆ ಇತರರು ಭಾಗಿಯಾಗಿದ್ದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















