
ಯಾದಗಿರಿ/ಗುರುಮಠಕಲ್ : ತಾಲೂಕಿನ ಚಂಡರಿಕಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಅ.11 ಶನಿವಾರ ಆಕರ್ಷಕ ಪಥ ಸಂಚಲನ ಜರುಗಿತು. ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರಕ್ಕೂ ಅಧಿಕ ಗಣವೇಷಧಾರಿಗಳಿಂದ ಗ್ರಾಮದ ಪ್ರಮುಖ ಬೀದಿಗಳ ಮೂಲಕ ನಾವೆಲ್ಲ ಹಿಂದು, ನಾವೆಲ್ಲಾ ಒಂದು ಎಂಬ ಧ್ಯೇಯ ವಾಕ್ಯ ಹಾಗೂ ಸಂಘ ಗೀತೆ ಹಾಡುವ ಮುಖಾಂತರ ಆಕರ್ಷಕ ಪಥ ಸಂಚಲನ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಐ.ಕೆ.ರೆಡ್ಡಿ ವಹಿಸಿದ್ದರು, ಜಾತಿ ಜಾತಿಗಳಲ್ಲಿ ವಿಷ ಬೀಜ ಬಿತ್ತಿ ಹಿಂದು ಸಮಾಜವನ್ನು ಒಡೆಯುವ ಸಮಾಜ ಘಾತುಕ ಶಕ್ತಿಗಳ ನಡುವೆ ಹಿಂದುಗಳು ಒಗ್ಗಟ್ಟಾಗಿ ಜಾಗೃತಗೊಳ್ಳಬೇಕು, ಸಂಘ ಆಪತ್ಕಾಲದಲ್ಲಿ ಸಮಾಜ ಹಾಗೂ ಜನರ ರಕ್ಷಣೆಯೊಂದಿಗೆ ದೇಶದ ರಕ್ಷಣೆಯಲ್ಲಿ ಪಾಲ್ಗೊಳ್ಳುತ್ತದೆ, ಕುಟುಂಬ ವರ್ಧನೆ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಆಂದೋಲನ, ನಾಗರಿಕ ಶಿಷ್ಟಾಚಾರ ಹಾಗೂ ಪರಿಸರ ಕಾಳಿಜಿಯ ಧ್ಯೇಯವನ್ನಿಟ್ಟು ಕೊಂಡಿದೆ, ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಆರ್.ಎಸ್.ಎಸ್ ಗೆ ಸೇರ್ಪಡೆಯಾಗಬೇಕು ಎಂದು ಆರ್.ಎಸ್.ಎಸ್ ನ ತಾಲೂಕಿನ ನಿರ್ವಾಹಕ ನಿತಿನ್ ತಿವಾರಿ ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ಹಾಗೂ ವಿಜಯದಶಮಿ ನಿಮಿತ್ಯ ಚಂಡರಿಕಿ ಗ್ರಾಮದಲ್ಲಿ ಆಯೋಜಿಸಲಾದ ಆರ್.ಎಸ್.ಎಸ್. ಪಥ ಸಂಚಲನದಲ್ಲಿ ಸಂಘದ ಹಿತೈಷಿಗಳು, ಸ್ವಯಂ ಸೇವಕರು ಭಾಗವಹಿಸಿದರು.
ವರದಿ: ಜಗದೀಶ್ ಕುಮಾರ್ ಭೂಮಾ



















