
ಮಂಗಳೂರು : ಸತತ ಐದು ವರ್ಷಗಳ ಪ್ರಯತ್ನದಿಂದ ಸರಕಾರದ ಮತ್ತು ಊರ ಪರ ಊರ ದಾನಿಗಳಿಂದ ಧನ ಸಂಗ್ರಹಿಸಿ ನಿರ್ಮಿಸಲಾದ ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯ ಭವನವನ್ನು ಶ್ರೀ ಶ್ರೀ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಯವರ ದಿವ್ಯ ಪಾದಾರ್ಪಣೆ ಮೂಲಕ ಲೋಕಾರ್ಪಣೆ ಮಾಡಲಾಯಿತು. ಶ್ರೀ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಸಮಸ್ತ ಭಕ್ತರಿಗೆ ಆಶೀರ್ವಚನ ಗೈದರು ಸಭೆಯ ಅಧ್ಯಕ್ಷತೆ ಕ್ಷೇತ್ರದ ಶಾಸಕ ಶ್ರೀ ಉಮಾನಾಥ ಕೋಟ್ಯಾನ್ ವಹಿಸಿ ತಮ್ಮ ಭಾಷಣದಲ್ಲಿ ಸಮಾಜಕ್ಕೆ ಮುಂದೆಯೂ ಸಾಧ್ಯವಾದಷ್ಟು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಮಾನ್ಯ ಲೋಕಸಭಾ ಸದಸ್ಯ ಶ್ರೀ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ಸಮಾಜಕ್ಕೆ ತಮ್ಮಿಂದಾಗುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ಇತ್ತರು. ಈ ಸಭೆಗೆ ಆಕರ್ಷಕ ಬಿಂದುವಾಗಿ ಸಾಗರ ಕ್ಷೇತ್ರದ ವಿಧಾನ ಸಭಾ ಸದಸ್ಯ ಶ್ರೀ ಬೇಳೂರು ಗೋಪಾಲಕೃಷ್ಣ ಮಿಂಚಿದರು , ತಮ್ಮ ಭಾಷಣದಲ್ಲಿ ಸಮಾಜ ಬಾಂಧವರು ಯಾವುದೇ ಪಕ್ಷದಲ್ಲಿರಲಿ, ಸಮಾಜಕ್ಕಾಗಿ ಕೆಲಸ ಮಾಡಲು ಸದಾ ಸಿದ್ಧರಾಗಿರಬೇಕಾಗಿ ಕರೆ ನೀಡಿದರು. ಸಭೆಯಲ್ಲಿ ಇನ್ನೊಬ್ಬ ಯುವ ನಾಯಕ , ಕರ್ನಾಟಕ ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀ ಮಿಥುನ್ ರೈ ಅವರ ಉಪಸ್ಥಿತಿ ಮೆರುಗು ನೀಡಿತು , ತಮ್ಮ ಭಾಷಣದಲ್ಲಿ ಸಮಾಜದಲ್ಲಿ ಸೌಹಾರ್ದತೆಗೆ ಕರೆ ನೀಡಿದರು. ಮಹಿಳಾ ನಾಯಕಿ , ರಾಜ್ಯ ಹಿಂದುಳಿದ ವರ್ಗಗಳ ನಿರ್ದೇಶಕಿ ಶ್ರೀಮತಿ ಪ್ರತಿಭಾ ಕುಳಾಯಿ ಹಿತ ನುಡಿಗಳನ್ನಾಡಿದರು.

ಮಹಾ ನಗರ ಪಾಲಿಕೆಯ ಮಾಜಿ ಸದಸ್ಯೆ ಕುಮಾರಿ ಶ್ವೇತ ಪೂಜಾರಿ ಸಮಾಜದಲ್ಲಿ ಒಗ್ಗಟ್ಟಿಗೆ ಕರೆ ನೀಡಿದರು. ಶ್ರೀ ಚಂದ್ರಶೇಖರ ನಾನಿಲ್ ತಮ್ಮ ಭಾಷಣದಲ್ಲಿ ದಶಕದ ಹಿಂದೆ ತಾನು ಈ ಊರಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಸಲಹೆ ನೀಡಿದ್ದು, ಈಗ ಅದು ನೆರವೇರಿದೆ ಎಂದು ಸಂತಸ ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ಶ್ರೀ ಸೂರ್ಯಕಾಂತ ಜಯ ಸುವರ್ಣ, ಅಧ್ಯಕ್ಷರು ಭಾರತ್ ಬ್ಯಾಂಕ್ ಮುಂಬೈ , ಶ್ರೀ ಪದ್ಮರಾಜ ಪೂಜಾರಿ,ಕೋಶಾಧಿಕಾರಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಶ್ರೀ ಚಿತ್ತರಂಜನ್ ಗರೋಡಿ , ಶ್ರೀ ಮಹೇಶ್ , ಅಧ್ಯಕ್ಷರು ಕಟಪಾಡಿ ವಿಶ್ವನಾಥ ಕ್ಷೇತ್ರ , ಶ್ರೀ ಜಯಂತ ಸಾಲ್ಯಾನ್ , ಜೋಕಟ್ಟೆ , ಶ್ರೀ ಶ್ರೀನಿವಾಸ ಅಮೀನ್ ಅಧ್ಯಕ್ಷರು ನಾರಾಯಣ ಗುರು ಸೇವಾ ಸಂಘ , ಶ್ರೀ ಜಯಾನಂದ , ಅಧ್ಯಕ್ಷರು ಗ್ರಾಮ ಪಂಚಾಯತ್ ಚೇಳಾರು , ಶ್ರೀ ರಮೇಶ್ ಪೂಜಾರಿ , ಕಟ್ಟಡ ಸಮಿತಿ ಹಾಗೂ ಸಮಿತಿಯಿ ಸರ್ವ ಸದಸ್ಯರು , ಊರ, ಪರ ಊರ ಗಣ್ಯರು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಹೆಬ್ಬಾರ್ ಕೊಲ್ಯ



















