ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಗ್ರಾಮದ ಶ್ರೀ ಜಡೆಸಿದ್ದೇಶ್ವರ ಎಜುಕೇಶನಲ್ ಟ್ರಸ್ಟ್ ವತಿಯಿಂದ ರಂಗಾಯಣದ ನಿರ್ದೇಶಕ ಮತ್ತು ರಂಗಭೂಮಿ ನಟ ತಾಳಿಕೋಟೆ ರಾಜು ಅವರ ನಿಧನಕ್ಕೆ ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ರಾಮು ಶಿವನೇಗೌಡ ಮಾತನಾಡಿ ಹಲವಾರು ನಾಟಕ ಮತ್ತು ಚಲನಚಿತ್ರರಂಗದಲ್ಲಿ ಅಭಿನಯಿಸಿ ತಮ್ಮದೇ ಆದ ಛಾಪು ಮೂಡಿಸಿದ್ದು ಅಲ್ಲದೆ ಹಲವಾರು ಸುಂದರವಾದ ನಾಟಕಗಳ ರಚನೆ ಮೂಲಕ ಸಮಾಜವನ್ನು ತಿದ್ದಲು ಪ್ರಯತ್ನಿಸಿದರು ಮತ್ತು ಉತ್ತರ ಕರ್ನಾಟಕದ ಭಾಷೆಯ ಸೊಗಡನ್ನು ನಾಡಿಗೆ ಪರಿಚಯಿಸಿದ ಮಹಾನ್ ಚೇತನ ಇವರ ಅಗಲಿಕೆ ರಂಗಭೂಮಿ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಡಿಗೇರ್ ವೀರೇಶ್ ಹಂಚಿನಾಳ್, ಪೀರಸಾಬ್ ಸೇರಿದಂತೆ ಟ್ರಸ್ಟಿನ ಪದಾಧಿಕಾರಿಗಳು ಮಕ್ಕಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















