ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಹನೀಯರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ : ಪರಶುರಾಮ್ ಕೆರಳ್ಳಿ

ಕೊಪ್ಪಳ/ ಕನಕಗಿರಿ : ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ. ಬಿ. ಆರ್. ಅಂಬೇಡ್ಕವರ ಆದರ್ಶ ಜೀವನವನ್ನು ಪ್ರತಿಯೊಬ್ಬರೂ ಪ್ರೇರಣೆ ಪಡೆದು ಮುನ್ನೆಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ. ಬಿ. ಕೃಷ್ಣಪ್ಪ ಸ್ವಾಭಿಮಾನಿ ಸಂಘಟನೆ ಜಿಲ್ಲಾಧ್ಯಕ್ಷ ಪರಶುರಾಮ್ ಕೆರಳ್ಳಿ ಕರೆ ನೀಡಿದರು.

ಅವರು ಕನಕಗಿರಿ ಎಪಿಎಂಸಿ ಸಮುದಾಯ ಭವನ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ. ಕೃಷ್ಣಪ್ಪ ಸ್ಥಾಪಿತ ಸ್ವಾಭಿಮಾನಿ ಸಂಘಟನೆ ಆಯೋಜಿಸಿದ್ದ ಶ್ರೀ ಛತ್ರಪತಿ ಶಾಹೋ ಮಹಾರಾಜ್ ಅವರ 151ನೇ ಜಯಂತೋತ್ಸವ ಮತ್ತು ಕನಕಗಿರಿ ತಾಲೂಕು ಕೆ ಡಿ ಎಸ್ ಎಸ್ ಪದಾಧಿಕಾರಿಗಳ ಆಯ್ಕೆ ಸಮಾರಂಭದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಆಚಾರ ವಿಚಾರಗಳಿಂದ ಬೆಳೆಸಲು ಮುಂದಾಗಬೇಕು, ಮಕ್ಕಳಿಗೆ ಆಸ್ತಿ ಮಾಡದೇ, ಉತ್ತಮ ಶಿಕ್ಷಣ ನೀಡಿ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಕಿವಿ ಮಾತು ಹೇಳಿದರು.

ಸಂಘಟನೆಗಳು ಕೇವಲ ತಮ್ಮ ವಯಕ್ತಿಕ ಹಿತಾಸಕ್ತಿಗಳಿಗೆ ಉಪಯೋಗಿಸದೇ ತುಳಿತಕ್ಕೊಳಗಾದ ವ್ಯಕ್ತಿಗಳ ಹಿಂದೆ ನಿಲ್ಲುವ ಕೆಲಸ ಮಾಡಬೇಕು ಎಂದರು.

ನಮ್ಮ ಸಮಾಜ ಆರ್ಥಿಕವಾಗಿ ಶೈಕ್ಷಣಿಕವಾಗಿ ಬಲಿಷ್ಠರಾಗಲು ಶಿಕ್ಷಣದೊಂದಿಗೆ ಹೋರಾಟ ಮನೋಭಾವನೆ ಒಂದು ಬೇಕು ಎಂದು ಹೇಳಿದರು.

ನಂತರ ಪಂಪಾಪತಿ ಸಿದ್ದಾಪುರ ಮಾತನಾಡಿ ಶ್ರೀ ಛತ್ರಪತಿ ಶಾಹೂ ಮಹಾರಾಜರವರು ಶೋಷಿತರ, ಬಡವರ ಪರ ಧ್ವನಿ ಎತ್ತಿ ನಿಲ್ಲುವ ಮೂಲಕ ಕೃಷಿ ಮತ್ತು ಆರ್ಥಿಕ ಸುಧಾರಣೆಯ ಜೊತೆಗೆ ಸಮಾಜದಲ್ಲಿ ಸಮಾನತೆ ತರುವಲ್ಲಿ ಶ್ರಮಿಸಿದವರು ಇಂತಹ ಮಹನೀಯರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನ ಸಾಗಿಸಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಂತಹ ಮಹನೀಯರ ಜೀವನ ಚರಿತ್ರೆಗಳ ಬಗ್ಗೆ ಪ್ರತಿಯೊಬ್ಬರಿಗೂ ಮನಮುಟ್ಟುವಂತಾಗಿ ಅವರ ಆದರ್ಶಗಳು ದಾರಿದೀಪವಾಗಬೇಕು ಎಂದು ಹೇಳಿದರು.

ನಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಯಡ್ರಾಮಿ ಮಾತನಾಡಿ ತಮ್ಮ ಜೀವನವನ್ನೇ ಪರರಿಗೆ ಮುಡುಪಾಗಿಟ್ಟ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅವರೇ ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರು, ಬೌದ್ಧ ಬಸವ ತತ್ವ ಆದರ್ಶ ಪರಿಪಾಲನೆ ಮಾಡುವ ಮೂಲಕ ದೇಶಕ್ಕೆ ಮಹಾನ್ ಸಂವಿಧಾನವನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಅದಲ್ಲದೇ ನಮ್ಮ ಭಾಗದಲ್ಲಿ ಹಂಪೇಶ ಹರಿಗೋಲ್ ಅವರು ಯಾವುದೇ ಒಬ್ಬ ವ್ಯಕ್ತಿಗೆ ಅನ್ಯಾಯವಾದಲ್ಲಿ, ಬಡವರ ಶೋಷಿತರ ಪರವಾಗಿ ಸಮಯ ಸಂದರ್ಭವನ್ನು ಲೆಕ್ಕಿಸಿದೆ ಅವರ ಸಹಾಯಕ್ಕೆ ನಿಲ್ಲುತ್ತಾರೆ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು.

ನಂತರ ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕ ಹಂಪೇಶ್ ಹರಿಗೋಲ ಮಾತನಾಡಿ ಮಹಾನ್ ನಾಯಕರ ಜಯಂತಿಗಳು ಆಚರಣೆಗೆ ಸೀಮಿತವಾಗದೇ ಅವರ ಆದರ್ಶ ಪ್ರತಿಯೊಬ್ಬರಿಗೂ ದಾರಿ ದೀಪವಾಗಬೇಕು, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಉನ್ನತ ವ್ಯಾಸಂಗಕ್ಕೆ ಶ್ರೀ ಛತ್ರಪತಿ ಶಾಹೂ ಮಹಾರಾಜ ಅವರು ಬೆನ್ನೆಲುಬಾಗಿ ನಿಂತು ಸಹಾಯ ಸಹಕಾರ ನೀಡಿದವರು ಅಂತವರ ಆದರ್ಶ ಪರಿಪಾಲನೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದರು.

ಇಂದಿನ ಯುವಕರು ದುಶ್ಚಟಕ್ಕೆ ಬಲಿಯಾಗದೇ ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆ ಹಾದಿಯೊಂದಿಗೆ ಮುನ್ನೆಡೆದು, ಸಮಾಜದ ಬಗ್ಗೆ ಕಳಕಳಿ ಹೊಂದಿದವರಾಗಬೇಕು ಮತ್ತು ಸಮಾಜದ ಯುವಕರನ್ನು ಒಳ್ಳೆಯ ನಾಗರಿಕರನ್ನಾಗಿ ಮಾಡಲು ಮುಂದಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ. ಕ. ವಿಭಾಗೀಯ ಉಪಾಧ್ಯಕ್ಷ ಹನುಮಂತಪ್ಪ ನಾಯಕ ವಡ್ಡರಹಟ್ಟಿ, ಯಮನೂರಪ್ಪ ನಾಯಕ ಹುಲಿಹೈದರ, ದುರ್ಗೇಶಪ್ಪ ಐಹೊಳಿ, ವೆಂಕಟೇಶ ಕನಕಗಿರಿ, ದುರ್ಗಪ್ಪ ಹೊಸಳ್ಳಿ, ಸಣ್ಣದುರ್ಗಪ್ಪ ಕನಕಗಿರಿ, ಹನುಮ ಗೌಡ ವಿಠಲಾಪುರ, ಘಟ್ಟೆಪ್ಪ ಹಿರೇಕುರುಬರ, ವೀರಪ್ಪ ನಾಯಕ ಗಟಾರಿ, ರಾಘವೇಂದ್ರ ಭಂಡಾರಿ ಸೇರಿದಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನ ಸಂಘಟನೆ ಜಿಲ್ಲಾ, ಹಾಗೂ ತಾಲೂಕ ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು, ಮುಖಂಡರು ಉಪಸ್ಥಿತರಿದ್ದರು.

ಶ್ರೀ ಛತ್ರಪತಿ ಶಾಹು ಮಹಾರಾಜರ ಜಯಂತಿಯನ್ನು ಕೇವಲ ಸಮಾಜ ಒಂದೇ ಆಚರಣೆ ಮಾಡದೇ ಶಾಹು ಮಹಾರಾಜರ ಜಯಂತಿಯು ಸರಕಾರಿ ಜಯಂತಿಯಾಗಬೇಕು.

  • ಪಂಪಾಪತಿ ಸಿದ್ದಾಪೂರ ಭಾರತೀಯ ಸೇನೆ ಅಧ್ಯಕ್ಷ

ಮೀಸಲಾತಿ ಕ್ಷೇತ್ರದಿಂದ ಸಚಿವ ಶಿವರಾಜ ತಂಗಡಗಿಯವರೇ ಮೂರು ಬಾರಿ ಶಾಸಕರಾಗಿ, ಮೂರು ಬಾರಿ ಸಚಿವರಾಗಿ ಆಯ್ಕೆಯಾಗಿದ್ದೀರಿ.
ಮುಂದಿನ ದಿನಗಳಲ್ಲಿ ಸಚಿವರ ಇಲ್ಲವೇ ಶಾಸಕರ ಅನುದಾನದಲ್ಲಿ ಕನಕಗಿರಿ ಮತ್ತು ಕಾರಟಗಿಯಲ್ಲಿ ಡಾ. ಬಿ. ಆರ್ ಅಂಬೇಡ್ಕರವರ ಪುತ್ಥಳಿಯನ್ನು ನಿರ್ಮಾಣ ಮಾಡಲು ಮುಂದಾಗಬೇಕು ಎನ್ನುವುದು ಸಂಘಟನೆಯ ಮೂಲಕ ಆಗ್ರಹವಾಗಿದೆ.

  • ಕಲ್ಯಾಣ ಕರ್ನಾಟಕ ವಿಭಾಗೀಯ ಸಂಚಾಲಕರು ಹಂಪೇಶ ಹರಿಗೋಲ.

ವರದಿ ಕರುನಾಡ ಕಂದ ಪತ್ರಿಕೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!