೧.
ಲೋಕದ ಡೊಂಕನು
ತಿದ್ದಲು ಹೋಗಬೇಡಿರಯ್ಯ,
ಎಂದರು ಭಕ್ತಿ ಭಂಡಾರಿ,
ಬಸವಣ್ಣನವರು,
ನಾವು ಅದನ್ನೇ ಮಾಡುತ್ತೇವೆ,
ಎನ್ನುತ್ತಿರುವರಲ್ಲ ಆಧುನಿಕರು!
ಎಂದ ಶಿವ ಶಿವಾ!
೨.
ಸಿಕ್ಕಿರುವ ಈ ಜನುಮವನು
ವ್ಯರ್ಥವಾಗಿ ಕಳೆಯದೇ
ನೀ ಮುಂದೆ ಸಾಗಯ್ಯ,
ಸಾವಿನ ನಂತರವೂ
ನಿನ್ನ ನೆನಪು ಹಸಿರಾಗಿರುವಂತೆ, ಇರಲಯ್ಯ,
ನಿನ್ನ ಸಾಧನೆ,
ಎಂದ ಶಿವ ಶಿವಾ!
ಶಿವಪ್ರಸಾದ್ ಹಾದಿಮನಿ.
ಕೊಪ್ಪಳ. 583231.



















