
ಕೊಪ್ಪಳ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕೊಪ್ಪಳ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಇವರ ಸಹಯೋಗದಲ್ಲಿ ಕೊಪ್ಪಳದಲ್ಲಿ ನಡೆದ 2025-26 ನೇ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ಯುವ ಜನೋತ್ಸವ ಅಂಗವಾಗಿ ಶುಕ್ರವಾರದಂದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಜಾನಪದ ನೃತ್ಯದಲ್ಲಿ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜಾನಪದ ನೃತ್ಯ ತಂಡವು ದ್ವಿತೀಯ ಸ್ಥಾನ ಪಡೆದಿರುತ್ತದೆ. ಕಾಲೇಜಿನ ಜಾನಪದ ನೃತ್ಯ ಸ್ಪರ್ಧೆ ಯಲ್ಲಿ ಬಾಗಿಯಾದ ವಿದ್ಯಾರ್ಥಿನಿಯರಾದ
ದುರುಗಮ್ಮ, ವೈಷ್ಣವಿ, ಭವ್ಯ, ಶಾಹಿನ್, ಸರಸ್ವತಿ, ಶಾಮಲಾ, ಗಂಗಾ, ಕೌಸರ್ ಬಾನು, ರಾಜೇಶ್ವರಿ ಮತ್ತು
ಅಕ್ಕಮಹಾದೇವಿ.
ಈ ವಿದ್ಯಾರ್ಥಿನಿಯರ ಸಾಧನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿ ಜಾನಪದ ನೃತ್ಯಕ್ಕೆ ಮಾರ್ಗದರ್ಶನ ಮಾಡಿದ ಕಾಲೇಜಿನ ಸಾಹಾಯಕ ಪ್ರಾಧ್ಯಾಪಕರಾದ ಶುಭ, ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕರು, ಭೋಧಕ ಮತ್ತು ಭೋದಕೇತರ ಸಿಬ್ಬಂದಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
- ಕರುನಾಡ ಕಂದ




















