ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಹಾಯಧನ ಚೆಕ್ ಮತ್ತು ಸಾಮಗ್ರಿಗಳ ವಿತರಣೆ

ಬೆಳಗಾವಿ /ಬೈಲಹೊಂಗಲ :
ಪುರಸಭೆಯ ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಸನ್ ೨೦೨೫-೨೬ನೇ ಸಾಲಿನ ಶೇ.೨೪.೧೦, ಶೇ.೭.೨೫ ಮತ್ತು ಶೇ.೫ ಯೋಜನೆ ಫಲಾನಭವಿಗಳಿಗೆ ಸಹಾಯಧನ ಚೆಕ್ ಮತ್ತು ಸಾಮಗ್ರಿಗಳ ವಿತರಣೆ ಹಾಗೂ ನಮಸ್ತೆ ಯೋಜನೆಯಡಿ ನೋಂದಾಯಿತ ಕಾರ್ಮಿಕರಿಗೆ ಸುರಕ್ಷಾ ಕಿಟ್ ವಿತರಣೆೆ ಮತ್ತು ಸ್ವಚ್ಛ ಭಾರತ ಮಿಷನ್ ೨.೦ ಯೋಜನೆಯ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ವಿತರಣೆ ಹಾಗೂ ವಿಶೇಷಚೇತನರಿಗೆ ತ್ರಿ-ಚಕ್ರ ವಾಹನಗಳನ್ನು ವಿತರಿಸುವ ಕಾರ್ಯಕ್ರಮವನ್ನು ಪುರಸಭೆಯ ಅಧ್ಯಕ್ಷರಾದ ಶ್ರೀ ವಿಜಯ ಶ್ರೀಶೈಲ ಬೋಳನ್ನವರ ರವರ ಅಧ್ಯಕ್ಷತೆ ಮತ್ತು ಸನ್ಮಾನ್ಯ ಶ್ರೀ ಮಹಾಂತೇಶ ಶಿವಾನಂದ ಕೌಜಲಗಿ ಹಾಗೂ ಪುರಸಭೆ ಸರ್ವಸದಸ್ಯರ ಘನಉಪಸ್ಥಿತಿಯಲ್ಲಿ ನೆರವೇರಿಸಲಾಯಿತು.

ಯೋಜನೆಯ ಕುರಿತು ಸಮುದಾಯ ಸಂಘಟನಾಧಿಕಾರಿ ಶ್ರೀ ರಮೇಶ ಎಸ್. ಹಿಟ್ಟಣಗಿ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಶಾಸಕರಾದ ಶ್ರೀ ಮಹಾಂತೇಶ ಎಸ್. ಕೌಜಲಗಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸರ್ಕಾರದಿಂದ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಇನ್ನಿತರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಬಡಕುಟುಂಬಗಳ ಆರ್ಥಿಕ ಅಭಿವೃದ್ಧಿಗಾಗಿ ಅವಶ್ಯಕವಾಗಿರುವ ಅಡುಗೆ ಅನಿಲ, ಶೌಚಾಲಯ ನಿರ್ಮಾಣ, ಸೋಲಾರ ಅಳವಡಿಕೆ, ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಸಹಾಯಧನ ಇಂತಹ ಯೋಜನೆಗಳನ್ನು ಪುರಸಭೆಯಿಂದ ಜಾರಿಗೆ ತಂದಿದ್ದು, ಸದರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀಮತಿ ವಾಣಿಶ್ರೀ ವಿಜಯ ಪತ್ತಾರ ಇವರು ಮಾತನಾಡಿ ನಗರದ ಸ್ವಚ್ಛತೆಗೆ ಪೌರಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿ ಸಾಕಷ್ಟು ಶ್ರಮಿಸುತ್ತಿದ್ದು, ಅವರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಸ್ವಚ್ಛತೆ ಬಗ್ಗೆ ಈಗಾಗಲೇ ಬೈಲಹೊಂಗಲ ಪುರಸಭೆಯು ರಾಜ್ಯಮಟ್ಟದಲ್ಲಿ ೩ನೇ ಸ್ಥಾನ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿರುತ್ತದೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ತಿಳಿಸಿದರು.
ಅಧ್ಯಕ್ಷರಾದ ಶ್ರೀ ವಿಜಯ ಶ್ರೀಶೈಲ ಬೋಳನ್ನವರ ಇವರ ಮಾತನಾಡಿ ಶಾಸಕರು ಈಗಾಗಲೇ ಬೈಲಹೊಂಗಲ ಪುರಸಭೆಗೆ ಸಾಕಷ್ಟು ಅನುದಾನಗಳನ್ನು ಒದಗಿಸಿದ್ದು, ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸಲು ಸಾಕಷ್ಟು ಶ್ರಮವಹಿಸುತ್ತಿದ್ದು, ಈಗಾಗಲೇ ನಗರದ ಸೌಂದರೀಕರಣಗೊಳಿಸಿದ್ದಾರೆ. ಕಾರಣ ಸಾರ್ವಜನಿಕರು ಪುರಸಭೆಯೊಂದಿಗೆ ಸಹಕರಿಸಲು ತಿಳಿಸಿದರು. ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಶ್ರೀ ವಿರಪ್ಪ ಹಸಬಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಗರೋತ್ಥಾನದ ಯೋಜನೆ ಅಡಿ ಸ್ವಯಂ ಉದ್ಯೋಗದ ೧೨ ಜನ ಫಲಾನುಭವಿಗಳಿಗೆ ಒಟ್ಟು ರೂ.೧೩.೬೭ ಲಕ್ಷಗಳ ಮೊತ್ತದ ಚೆಕ್ ಹಾಗೂ ಶೇ.೭.೨೫ರಡಿ ಇತರೇ ಬಡಜನರ ೧೫೦ ವಿದ್ಯಾರ್ಥಿಗಳಿಗೆ ರೂ.೬.೯೦ ಲಕ್ಷಗಳ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೩೭ ವಿದ್ಯಾರ್ಥಿಗಳಿಗೆ ರೂ.೦.೮೫ ಲಕ್ಷಗಳ ಶೈಕ್ಷಣಿಕ ಪ್ರೋತ್ಸಾಹಧನ ಚೆಕ್ ಹಾಗೂ ಶೇ.೫ ರಡಿ ರೂ.೨೧.೨೫ ಲಕ್ಷಗಳಲ್ಲಿ ವಿಶೇಷಚೇತನರಿಗೆ ೧೪ ಎಲೆಕ್ಟ್ರಿಕಲ್ ತ್ರಿ-ಚಕ್ರ ವಾಹನಗಳನ್ನು ಹಸ್ತಾಂತರ ಮಾಡಲಾಯಿತು.

ನಮಸ್ತೆ ಯೋಜನೆಯಡಿ ನೋಂದಾಯಿತ ೧೩ಜನ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛತಾ ಕಾರ್ಮಿಕರಿಗೆ ಸುರಕ್ಷಾ ಸಾಮಗ್ರಿ ಕಿಟ್ ವಿತರಣೆ ಸ್ವಚ್ಛ ಭಾರತ ಮಿಷನ್ (ನಗರ) ೨.೦ ಯೋಜನೆಯ ಸ್ವಚ್ಛತಾ ಹೀ ಸೇವಾ ಅಭಿಯಾನದಡಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ವಿತರಣೆಯನ್ನು ಮಾಡಲಾಯಿತು.

ಕಛೇರಿ ವ್ಯವಸ್ಥಾಪಕ ಶ್ರೀ ಎಮ್. ಆಯ್. ಕುಟ್ರಿ ಇವರು ಸ್ವಾಗತಿಸಿ, ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿತಿ ಸಮಿತಿ ಚೇರಮನ್ನರಾದ ಶ್ರೀಮತಿ ಹೇಮಲತಾ ಮ. ಹಿರೇಮಠ, ಸದಸ್ಯರಾದ ಶ್ರೀ ಅರ್ಜುನ ಕಲಕುಟಕರ, ಶ್ರೀ ಶಿವಬಸಪ್ಪ ಕುಡಸೋಮನ್ನವರ, ಶ್ರೀ ಗುರಪ್ಪ ಮೆಟಗುಡ್ಡ, ಶ್ರೀಮತಿ ಅಂಬಿಕಾ ಕೊಟಬಾಗಿ, ಶ್ರೀಮತಿ ದಿಲಶಾದ ನದಾಫ, ಶ್ರೀಮತಿ ಶ್ರೀದೇವಿ ದೇವಲಾಪೂರ, ಶ್ರೀಮತಿ ಪ್ರೇಮಾ ಪಾಂಡಪ್ಪ ಇಂಚಲ ಹಾಗೂ ಸಿಬ್ಬಂದಿಗಳಾದ ಶ್ರೀ ಗೌರಿಶಂಕರ ಮಹಾಳಂಕ, ಶ್ರೀ ಬಸನಗೌಡ ಪಾಟೀಲ, ಶ್ರೀ ಎಸ್. ಆರ್. ಹಳ್ಳೂರ, ಶ್ರೀ ಬಿ. ಆಯ್. ಗುಡಿಮನಿ, ಶ್ರೀ ಎಸ್. ಎನ್. ಪಾಟೀಲ ಹಾಗೂ ಇತರರು ಇದ್ದರು.

ವರದಿ ಮಂಜು .ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!