ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾಮಫಲಕಗಳನ್ನು ಮಾತೃಭಾಷೆಯಲ್ಲಿ ಅಳವಡಿಸುವಂತೆ ಆಗ್ರಹಿಸಿ ಮನವಿ ಸಲ್ಲಿಕೆ.

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಎಲ್ಲಾ ರೀತಿಯ ನಾಮಫಲಕಗಳನ್ನು ಕನ್ನಡ ಭಾಷೆಯಲ್ಲಿ ಬರೆಯಿಸಿ ಪರಿಣಾಮಕಾರಿಯಾಗಿ ಬಳಸಲು ಒತ್ತಾಯಿಸುವುದರ ಜೊತೆಗೆ ಎಲ್ಲಾ ಬಗೆಯ ಅಂಗಡಿಗಳ ನಾಮಫಲಕಗಳನ್ನು ವ್ಯಾಪಾರಸ್ಥರು ಮಾತೃಭಾಷೆಯಲ್ಲಿ ಅಳವಡಿಸಬೇಕೆಂದು ಆಗ್ರಹಿಸಿ ವಿಜಯ ಕರುನಾಡ ರಕ್ಷಣಾ ವೇದಿಕೆ ಪದಾಧಿಕಾರಿಗಳು ಪುರಸಭೆಯ ಕಿರಿಯ ಅಭಿಯಂತರರಾದ ಜೆ. ತೇಜಸ್ವಿನಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ವೇದಿಕೆಯ ರಾಜ್ಯ ಕಾರ್ಯಧ್ಯಕ್ಷ ಬಿ.ವಿರೂಪಾಕ್ಷಿ ಯಾದವ್ ಮಾತನಾಡಿ ಪಟ್ಟಣದ ಎಲ್ಲಾ ವ್ಯಾಪಾರಸ್ಥರು ರಾಜ್ಯ ಸರ್ಕಾರದ ನಿಯಮದಂತೆ ತಮ್ಮ ಅಂಗಡಿಗಳಿಗೆ ಕನ್ನಡ ಭಾಷಾ ನಾಮಫಲಕಗಳನ್ನು ಅಳವಡಿಸಬೇಕು. ಕನ್ನಡ ಭಾಷೆಯ ರಸೀದಿಗಳನ್ನು ಗ್ರಾಹಕರಿಗೆ ನೀಡಬೇಕು. ನಾಮಫಲಕಗಳು ಕಡ್ಡಾಯವಾಗಿ ಶೇ.60 ರಷ್ಟು ಪ್ರಮಾಣದಲ್ಲಿರಬೇಕು. ಪಟ್ಟಣದ ಕೆಲವು ವ್ಯಾಪಾರಸ್ಥರು ನಿಯಮಗಳನ್ನು ಉಲ್ಲಂಘಿಸಿ ಕನ್ನಡೇತರ ಭಾಷೆಯ ನಾಮಫಲಕಗಳನ್ನು ಅಳವಡಿಸಿದ್ದಾರೆ. ಕಿರಾಣಿ, ಬಟ್ಟೆ ಇತರೆ ವರ್ತಕರು ಗ್ರಾಹಕರಿಗೆ ತಿಳಿಯದ ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ಬರೆದುಕೊಡುವುದನ್ನು ಕೈಬಿಟ್ಟು ಕಡ್ಡಾಯವಾಗಿ ಕನ್ನಡದಲ್ಲಿ ಬರೆದ ಪಟ್ಟಿ, ರಸೀದಿ ಒದಗಿಸಬೇಕು, ಕನ್ನಡಪರವಾಗಿರುವ ಈ ಮೂರು ಬೇಡಿಕೆಗಳನ್ನು ನ.01ರೊಳಗೆ ಈಡೇರಿಸದಿದ್ದಲ್ಲಿ, ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ಕಿರಿಯ ಅಭಿಯಂತರರಾದ ತೇಜಸ್ವಿನಿ ಅವರು ಸಂಘಟಕರ ಮನವಿ ಪತ್ರವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಂತೋಷ್, ಬಿ.ರಮೇಶ್, ಎಂ.ಶಿವಪ್ರಕಾಶ್, ಬಿ.ಮಂಜುಳಾ, ಗೋಪಾಲ್ ಯಾದವ್, ಕೆ.ಶಬ್ಬೀರ್, ಜಿ.ಶಿವಕುಮಾರ್, ಹುಲಿಗೆಮ್ಮ, ಎನ್.ಗಂಗಮ್ಮ, ಕೆ.ಈರಮ್ಮ, ರೇಣುಕಮ್ಮ, ವೈ. ಯಲ್ಲಪ್ಪ, ಎ.ಪ್ರವೀಣ, ಸಂತೋಷ್ ಕುಮಾರ್ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!