ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗದುಗಿನ ತೋಂಟದ ಸಿದ್ಧರಾಮ ಶ್ರೀಗಳನ್ನು ಹೆದರಿಸುವುದು ಬಿಟ್ಟು ಬಿಡಿ: ಸಂಗಮೇಶ ಎನ್ ಜವಾದಿ.

ಬೀದರ /ಚಿಟಗುಪ್ಪ:ಒಂದು ದೂರದರ್ಶನದ ಸಂದರ್ಶನದಲ್ಲಿ ಮಹಾರಾಷ್ಟ್ರ ಕನ್ನೇರಿ ಮಠದ ಕಾಡಸಿದ್ದೇಶ್ವರ ಶ್ರೀಗಳು ದೇಶದ ಭಾವೈಕ್ಯತೆಯ ಮಠ ಎಂದೆ ಪ್ರಸಿದ್ಧಿ ಪಡೆದ ಗದುಗಿನ ತೋಂಟದ ಸಿದ್ಧರಾಮ ಶ್ರೀಗಳ ಪೂರ್ವಾಶ್ರಮದ ಸಂಬಂಧಿಗಳಿಗೆ ಸಿದ್ಧರಾಮ ಶ್ರೀಗಳು 20 ತೊಲೆ ಬಂಗಾರ ಕೊಟ್ಟಿರುವುದಾಗಿ ಹೇಳಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಈ ಆರೋಪ ಅತ್ಯಂತ ಶುದ್ಧ
ಸುಳ್ಳು ಎಂದು ಸಾಹಿತಿ, ಹೋರಾಟಗಾರರಾದ ಸಂಗಮೇಶ ಎನ್. ಜವಾದಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ ಎನ್. ಜವಾದಿ ರವರು ಹಸಿ ಹಸಿ ಸುಳ್ಳು ಆರೋಪಗಳನ್ನು ಮಾಡುವ ಮುಖಾಂತರ ಬಸವ ಸಂಸ್ಕೃತಿ ಅಭಿಯಾನದ ಮುಂಚೂಣಿಯಲ್ಲಿರುವ ಗದುಗಿನ ತೋಂಟದ ಸಿದ್ಧರಾಮ ಶ್ರೀಗಳನ್ನು ಹೆದರಿಸಿ ಹಿಂದೆ ಸರಿಸುವ ಪ್ರಯತ್ನ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಜಿಗಳು ಮಾಡುತ್ತಿದ್ದಾರೆ. ಇದು ಅಕ್ಷರಶಃ
ಖಂಡನೀಯ ನಡೆಯಾಗಿದೆ.

ಯಾವುದೇ ಮದುವೆಯೆಲ್ಲಾಗಲಿ ಅಥವಾ ಯಾರಿಗೆ ಆಗಲಿ ಇಲ್ಲಿಯತನಕ ಬಂಗಾರ ಕೊಟ್ಟಿರುವುದಿಲ್ಲ, 20 ತೊಲಿ ಬಂಗಾರ ಹಾಕಿದರು ಎಂದು ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಜಿಗಳು
ಹೇಳಿರುವುದು ತೋಂಟದ ಸಿದ್ಧರಾಮ ಶ್ರೀಗಳ ಚಾರಿತ್ರ್ಯಹರಣದ ಭಾಗವಾಗಿದೆ. ಇದು ಪ್ರತಿಯೊಬ್ಬ ಬಸವಾಭಿಮಾನಿಗಳು ಉಗ್ರವಾಗಿ ಖಂಡಿಸುತ್ತೇವೆ ಎಂದರು.

ತೋಂಟದ ಸಿದ್ಧರಾಮ ಶ್ರೀಗಳು ಇಲ್ಲಿಯವರೆಗೂ ಅವರ ಪೂರ್ವಾಶ್ರಮ ಸಂಬಂಧಿಗಳ ಯಾವುದೇ ಮದುವೆಗೆ ಹೋದ ಉದಾಹರಣೆ ಇಲ್ಲ ಎಂದು ಈಗಾಗಲೇ ಸಿದ್ದರಾಮ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.

ಅಭಿಯಾನದಲ್ಲಿ ಭಾಗವಹಿಸಿದ ತೋಂಟದ ಸಿದ್ಧರಾಮ ಶ್ರೀಗಳು ಸೇರಿದಂತೆ ಇನ್ನಿತರರು ಸ್ವಾಮಿಗಳು ದಾರು ಕುಡಿಯುತ್ತಾರೆ. ಮಾಂಸ ಭಂಜಕರಾಗಿದ್ದಾರೆ. ಕ್ರಾಪು ಬಿಟ್ಟು ಮೇಲೆ ಪೇಟಾ ಸುತ್ತುತ್ತಾರೆ ಎಂಬಂತಹ ಕನ್ನೇರಿ ಶ್ರೀಗಳ ಚಾರಿತ್ರ್ಯಹರಣ ಮಾಡುವ ಸುಳ್ಳು ಮಾತುಗಳು ಯಾವ ಉದ್ದೇಶ ಹೊಂದಿವೆ ಎಂಬುದು ಇಡೀ ನಾಡಿನ ಜನತೆಗೆ ತಿಳಿದ ವಿಷಯವಾಗಿದೆ.

ಲಿಂಗಾಯತ ಸ್ವತಂತ್ರ ಧರ್ಮವಾದರೆ ಲಿಂಗಾಯತರು ಧಾರ್ಮಿಕ ಅಲ್ಪಸಂಖ್ಯಾತರಾಗುವ ಮೂಲಕ ಸಂವಿಧಾನದತ್ತವಾದ ಅನೇಕ ಸೌಲಭ್ಯಗಳನ್ನು ಪಡೆಯುತ್ತಾರೆ. ಇದು ಲಿಂಗಾಯತರ ಭವಿಷ್ಯದ ಹಿತದೃಷ್ಟಿಯಿಂದ ನಡೆದ ಹೋರಾಟ. ಇದರಿಂದ ದೇಶ ಹಾಳಾಗುತ್ತದೆ ಎಂದು ಹೇಳುವುದು ಸರಿಯಲ್ಲ.

ಈ ಮೊದಲು ಭಾರತೀಯರೇ ಆಗಿರುವ ಬೌದ್ಧ ಧರ್ಮೀಯರಿಗೆ, ಸಿಖ್‌ ಧರ್ಮದವರಿಗೆ ಮತ್ತು ಇತ್ತೀಚೆಗೆ ಜೈನಧರ್ಮದವರಿಗೆ ಸ್ವತಂತ್ರ ಧರ್ಮದ ಸ್ಥಾನ ನೀಡಲಾಗಿದೆ. ಇದರಿಂದ ದೇಶದ ಭದ್ರತೆಗೆ ಯಾವ ಹಾನಿಯಾಗಿದೆ? ಅದೇ ಮಾದರಿಯಲ್ಲಿ ದೇಶಪ್ರೇಮಿಗಳಾಗಿರುವ ಲಿಂಗಾಯತರ ಸಾಂವಿಧಾನಿಕ ಹಕ್ಕುಗಳನ್ನು ಪಡೆಯುವುದು ಲಿಂಗಾಯತ ಹೋರಾಟದ ಪ್ರಮುಖ ಉದ್ದೇಶವಾಗಿದೆ. ಇದರಲ್ಲಿ ಯಾವುದೇ ರೀತಿಯ ಸ್ವಾರ್ಥ ಇಲ್ಲವೇ ಇಲ್ಲ.

ಹೋರಾಟದ ಮುಂಚೂಣಿಯಲ್ಲಿರುವ ತೋಂಟದ ಸಿದ್ಧರಾಮ ಶ್ರೀಗಳನ್ನು ಗುರಿ ಮಾಡಿಕೊಂಡು ಸುಳ್ಳು ಆರೋಪ ಹೊರಿಸುವುದು ಎಷ್ಟು ಸರಿ? ಸಿದ್ಧರಾಮ ಶ್ರೀಗಳ ಮಠದ ಆಡಳಿತ ಅತ್ಯಂತ ಪಾರದರ್ಶಕವಾಗಿದೆ.
ಮಠದ ಎಲ್ಲಾ ವ್ಯವಹಾರಗಳನ್ನು ವ್ಯವಸ್ಥಾಪಕರು,
ವಿದ್ಯಾಸಂಸ್ಥೆಗಳ ವ್ಯವಹಾರಗಳನ್ನು ಆಡಳಿತಾಧಿಕಾರಿಗಳು ಮೊದಲಿನಿಂದಲೂ
ನೋಡಿಕೊಂಡು ಬರುತ್ತಿದ್ದಾರೆ. ಇದು ಪ್ರತಿಯೊಬ್ಬರಿಗೂ ತಿಳಿದ ವಿಚಾರವಾಗಿದೆ.

ತೋಂಟದ ಸಿದ್ಧರಾಮ ಶ್ರೀಗಳು ಅವರಿಗೆ ಬೇಕಾದವರನ್ನು ನೇಮಿಸಿಕೊಂಡು ಯಾವುದೇ ರೀತಿಯ ಭ್ರಷ್ಟ ವ್ಯವಹಾರ ಮಾಡಿಲ್ಲ ಎಂದು ಕನ್ನೇರಿ ಶ್ರೀಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಕಾರಣ ಈಗಲಾದರೂ ಹಸಿ ಹಸಿ ಸುಳ್ಳುಗಳನ್ನು ಹೇಳಿ ಜನರನ್ನು ಏಮಾರಿಸುವುದನ್ನು ಕನ್ನೇರಿ ಕಾಡಸಿದ್ದೇಶ್ವರ ಶ್ರೀಗಳು ಈ ತಕ್ಷಣವೇ ಬಿಟ್ಟುಬಿಡಬೇಕು. ಇನ್ನು ಮೇಲಾದರೂ ಧರ್ಮಕ್ಕೆ ಧರ್ಮಾಧಿಕಾರಿಗಳಿಗೆ ಸಂಬಂಧಿಸಿದ ವಿಷಯವನ್ನು ತಾತ್ವಿಕ ನೆಲೆಯಲ್ಲಿ ಖಂಡಿಸಲಿ ಅದಕ್ಕೆ ಸ್ವಾಗತವಿದೆ. ಆದರೆ ಸುಳ್ಳು ಆರೋಪಗಳ ಮೂಲಕ ಚಾರಿತ್ರ್ಯಹನನ ಮಾಡುವ ಕೆಲಸ ಕನ್ನೇರಿ ಕಾಡಸಿದ್ದೇಶ್ವರ ಸ್ವಾಮಿಜಿಗಳು ಯಾವತ್ತೂ ಮಾಡಬಾರದು, ಇದು ಅವರಿಗೆ ಖಂಡಿತವಾಗಿಯೂ ಶೋಭೆ ತರುವಂತಹದ್ದಲ್ಲ.

ತೋಂಟದ ಸಿದ್ಧರಾಮ ಶ್ರೀಗಳು ಸೇರಿದಂತೆ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಲಿಂಗಾಯತ ಮಠಾಧೀಶರನ್ನು ಹಸಿ ಹಸಿ ಸುಳ್ಳುಗಳನ್ನು ಹೇಳಿ ಹೆದರಿಸುವುದು ಬಿಟ್ಟು ಬಿಡಬೇಕೆಂದು ಕನ್ನೇರಿ ಕಾಡಸಿದ್ದೇಶ್ವರ ಶ್ರೀಗಳಲ್ಲಿ ಸಂಗಮೇಶ ಎನ್. ಜವಾದಿ ವಿನಂತಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!