ಬಳ್ಳಾರಿ / ಕಂಪ್ಲಿ : ಟಚ್ ಫಾರ್ ಲೈಫ್ ಸಂಸ್ಥಾಪಕ ಹಾಗೂ ಬಳ್ಳಾರಿ ನಗರದ ಜನಪ್ರಿಯ ಶಾಸಕರಾದ ನಾರಾ ಭರತ್‌ರೆಡ್ಡಿ ಅವರ ಜನ್ಮದಿನದ ಅಂಗವಾಗಿ ವೀರಶೈವ ಲಿಂಗಾಯತ ಮಹಾ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಅಭಿಮಾನಿಗಳು ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ಶನಿವಾರ ವಿತರಿಸಿದರು.
ನಂತರ ಹೊಸಕೋಟೆ ಜಗದೀಶ್ ಮಾತನಾಡಿ, ಯುವಕರ ಕಣ್ಮಣಿ ಶಾಸಕ ನಾರಾ ಭರತ್‌ರೆಡ್ಡಿ ಅವರು ಸಮಾಜ ಸೇವೆ ಮಾಡಿಕೊಂಡು ಬರುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನರ ಸಂಕಷ್ಟದಲ್ಲಿ ಭಾಗಿಯಾಗುವುದು ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದರಿಂದ ಜನರ ಮನಸ್ಸಿನಲ್ಲಿ ಹಚ್ಚಹಸುರಾಗಿ ಉಳಿದಿದ್ದಾರೆ. ಜನರ ಪ್ರೀತಿ, ವಿಶ್ವಾಸ ಗಳಿಸಿದ ಹಿನ್ನಲೆ ಬಳ್ಳಾರಿ ನಗರ ಶಾಸಕರಾಗಿ ಹೊರ ಹೊಮ್ಮಿದ್ದಾರೆ. ಶಾಸಕ ಭರತ್‌ರೆಡ್ಡಿ ಅವರು ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯುವ ಜತೆಗೆ ಒಳ್ಳೆಯ ಸ್ಥಾನಗಳು ಒಲಿದು ಬರಲಿ ಮತ್ತು ಅವರ ಆರೋಗ್ಯ, ಆಯಸ್ಸು, ಸಂಪತ್ತು ಸದಾ ಸಮೃದ್ಧಿಯಾಗಿರಲಿ ಎಂದರು.
ಈ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಕರವೇ ಕಂಪ್ಲಿ ಕ್ಷೇತ್ರ ಅಧ್ಯಕ್ಷ ಬಳೆ ಮಲ್ಲಿಕಾರ್ಜುನ, ಮುಖಂಡರಾದ ಅರವಿ ಬಸವನಗೌಡ, ಕರಿಬಸವನಗೌಡ, ಕೇಶವರೆಡ್ಡಿ, ಆನಂದರೆಡ್ಡಿ, ಕರೇಕಲ್ ಮನೋಹರ, ಸಣಾಪುರ ಈಶಣ್ಣ, ವಿ.ಬಿ.ನಾಗರಾಜ, ಆರ್.ಪಿ.ಶಶಿಕುಮಾರ, ಬಳ್ಳಾಪುರ ಲಿಂಗಪ್ಪ, ಕುಂಬಾರ ರಾಜ, ತಿಮ್ಮಪ್ಪ, ರಾಜಾಭಕ್ಷಿ ಸೇರಿ ಅನೇಕರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















