ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಳೆರಾಯನ ಹೊಡೆತಕ್ಕೆ ನಲುಗಿದ ರೈತರು : ಗೋಳು ಕೇಳುವವರು ಯಾರು?

ಬಳ್ಳಾರಿ / ಕಂಪ್ಲಿ : ಕಳೆದ ಮೂರು ದಿನಗಳಿಂದ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಗೆ ತಾಲೂಕಿನ ವಿವಿಧೆಡೆ ಕಟಾವಿಗೆ ಬಂದಿದ್ದ ಭತ್ತ ನೆಲಕಚ್ಚಿ ಮೊಳಕೆ ಬಂದಿದೆ. ತಾಲೂಕಿನ ಅನೇಕ ರೈತರ ಭತ್ತ ಬೆಳೆದ ಗದ್ದೆಗಳಲ್ಲಿ ನೀರು ನಿಂತುಕೊಂಡಿದೆ ಭತ್ತ ನೆಲಕ್ಕುರುಳಿ ಸಣಾಪುರದ 12 ಎಕರೆ ಭೂಮಿಯನ್ನು ಗುತ್ತಿಗೆ ಪಡೆದು 1638 ಸ್ಥಳೀಯ ಭತ್ತ ಬೆಳೆದಿದ್ದು ಕೆಲ ದಿನಗಳ ಹಿಂದೆ ಕೊಯ್ಲು ಆರಂಭಿಸಿದ್ದೆ ಇದ್ದಕ್ಕಿದ್ದಂತೆ ಮಳೆ ಶುರುವಾದ ಕಾರಣ ಕೊಯ್ಲು ನಿಲ್ಲಿಸಿದೆ ಮೂರು ದಿನಗಳ ಮಳೆಗೆ ಮೊಳಕೆ ಹೊಡೆದಿದೆ ಸಸಿ ನಾಟಿ ಗೊಬ್ಬರ ಕ್ರಿಮಿನಾಶಕ ಸಿಂಪಡನೆ ಕೃಷಿ ಕಾರ್ಮಿಕರ ವೆಚ್ಚ ಸೇರಿ ಎಕ್ಕರೆಗೆ 40,000 ಖರ್ಚಾಗಿದೆ ಒಟ್ಟಾರೆಯ 12 ಎಕರೆಗೆ 4.80.ಲಕ್ಷದವರೆಗೂ ವೆಚ್ಚ ಮಾಡಿರುವೆ, ಸದ್ಯ 4 ಎಕರೆಯನ್ನು ಮಾತ್ರ ಭತ್ತ ಕಟಾವು ಮಾಡಲಾಗಿದ್ದು ಉಳಿದ 8 ಎಕರೆಗಳನ್ನು ಭತ್ತ ಮಳೆಗೆ ನೆಲಕ್ಕೊರಗಿ ಮೊಳಕೆ ಬಂದಿದೆ ಸಾಲ ಮಾಡಿ ಭೂಮಿ ತಾಯಿಯನ್ನು ನಂಬಿ ಭತ್ತ ಹಾಕಿದ್ದೆ ಇಳುವರಿಯೋ ಅಂದುಕೊಂಡಂತೆ ಬಂದಿತ್ತು, ಇನ್ನೇನು ಕಟಾವು ಮಾಡಿ ಭತ್ತವನ್ನು ಮಾರಿ ಸಾಲ ಎಲ್ಲಾ ತೀರಿಸೋಣ ಅಂದುಕೊಂಡಿದ್ದೆ ಅಷ್ಟರಲ್ಲಿ ಮಳೆ ಎಲ್ಲದನ್ನೂ ಕಸಿದುಕೊಂಡು ಬಿಡ್ತು, ಮಳೆರಾಯನ ಅಟ್ಟಹಾಸದ ಮುಂದೆ ನಾವೆಲ್ಲಾ ರೈತರು ನಲುಗಿ ಬಿಟ್ಟಿದ್ದೀವಿ, ಇನ್ನು ನಮಗೆ ಏನೂ ದಿಕ್ಕು ತೋಚದಂತಾಗಿದೆ ಹೀಗೆ ಆದರೆ ರೈತರು ಮಣ್ಣು ತಿನ್ನುವ ಪರಿಸ್ಥಿತಿ ಬರುತ್ತೆ ಎಂದು ಸಣಾಪುರದ ಗ್ರಾಮದ ರೈತರದ ಕೆ. ಎಸ್. ದೊಡ್ಡಬಸಪ್ಪ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಅಲ್ಲದೆ ಇದರ ಬಗ್ಗೆ ಸರಕಾರ ಎಚ್ಚೆತ್ತು ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!