ಯಾದಗಿರಿ/ ಗುರುಮಠಕಲ್: ಅ.25 ಸಂಘದ ಶತಾಬ್ದಿ ಪ್ರಯುಕ್ತ ಪಟ್ಟಣದಲ್ಲಿ ಇಂದು ಜರುಗಬೇಕಿದ್ದ ಪಥ ಸಂಚಲನಕ್ಕೆ ಜಿಲ್ಲಾಡಳಿತದಿಂದ ಅನುಮತಿ ಸಿಗದ ಕಾರಣ ಮುಂದೂಡಲಾಗಿದೆ.
ಗುರುಮಠಕಲ್ ಆರ್. ಎಸ್. ಎಸ್ ವತಿಯಿಂದ ತಾಲೂಕಿನ ತಹಸೀಲ್ದಾರ್ ರಿಗೆ ಅನುಮತಿ ಕೋರಿ ಕಳೆದ ಮಂಗಳವಾರ ಅ. 21 ಅರ್ಜಿ ನೀಡಲಾಗಿತ್ತು. ಆದರೆ ಅರ್ಜಿಗೆ ಸಂಬಂಧಿಸಿದಂತೆ ಗುರುವಾರದ ವರೆಗೆ ತಹಸೀಲ್ದಾರ್ ಕಚೇರಿಯಿಂದ ಯಾವುದೇ ಹಿಂಬರಹ ಬಂದಿರುವದಿಲ್ಲ. ಇದರಿಂದಾಗಿ ಸಂಘದ ಪ್ರಮುಖರು ತಹಸೀಲ್ದಾರ್ ರನ್ನು ಗುರುವಾರ ಭೇಟಿಯಾಗಲು ಕಚೇರಿಗೆ ತೆರಳಿದರು.
ಸಂಘದ ಪ್ರಮುಖರನ್ನು ಒಂದು ಗಂಟೆಗೂ ಅಧಿಕ ಕಾಲ ಕಾಯಿಸಿದ ನಂತರ ತಹಸೀಲ್ದಾರ್ ಶಾಂತಗೌಡ ಬಿರಾದಾರ್ ‘ಅನುಮತಿ ನೀಡಲು ನಮಗೆ ಅಧಿಕಾರ ವಿಲ್ಲ ನೀವು ಸಕ್ಷಮ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ’
ಎಂದು ತಿಳಿಸಿದ್ದಾರೆ.
ತಕ್ಷಣಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಸಂಜೆ ವೇಳೆಗೆ ದೌಡಾಯಿಸಿದ ಸಂಘದ ಮುಖಂಡರು ಅನುಮತಿಗೆ ಅರ್ಜಿ ನೀಡಿದರು. ಶುಕ್ರವಾರ ಅನುಮತಿ ಸಿಗುವ ಭರವಸೆಯಲ್ಲಿ ಸಂಜೆ 8 ಗಂಟೆ ವರೆಗೂ ಕಾದಿದ್ದರು.
ಏಕಾಏಕಿ ಅನುಮತಿ ನೀಡಲು ಅವಕಾಶವಿಲ್ಲ ಎಂದು ಹೇಳಿ ಮತ್ತೊಂದು ದಿನಾಂಕ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಹರ್ಷಲ್ ಬೋಯಾರ್ ಸಂಘದ ಪ್ರಮುಖರಿಗೆ ತಿಳಿಸಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ.



















