ಕಲಬುರಗಿ/ ಚಿಂಚೋಳಿ: ನವಂಬರ್ 9 ರಂದು ನಡೆಯುವ ಕಲಬುರಗಿ ಮತ್ತು ಯಾದಗಿರಿ ಡಿಸಿಸಿ ಬ್ಯಾಂಕ್‌ಗೆ ನಡೆಯುವ ನಿರ್ದೇಶಕ ಚುನಾವಣೆಯಲ್ಲಿ ಚಿಂಚೋಳಿ ತಾಲೂಕಿನಿಂದ ರಟಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರೇವಣಸಿದ್ದಪ್ಪ ಬಡಾ ಅವರಿಗೆ ಬಿಜೆಪಿಯಿಂದ ಅವಕಾಶ ನೀಡಬೇಕು ಎಂದು ರಟಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಾಶಿನಾಥ ಚೌಕಾ ಬಿಜೆಪಿ ಪ್ರಮುಖರಲ್ಲಿ ಮನವಿ ಮಾಡಿದ್ದಾರೆ.
ಹಲವು ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿ, ಎಲ್ಲಾ ಜವಾಬ್ದಾರಿ ನಿರ್ವಹಿಸಿದ್ದಾರೆ. ಮಾಜಿ ಸಂಸದ ಹಾಗೂ ಶಾಸಕ ಜಾಧವ ಅವರ ಕಟ್ಟಾ ಬೆಂಬಲಿಗನಾಗಿ ಕೆಲಸ ಮಾಡಿದ್ದು, ಸ್ಥಳೀಯ ಮಟ್ಟದಲ್ಲಿ ಪಕ್ಷದ ಸಂಘಟನೆ ಗಟ್ಟಿಯಾಗಿ ಕಟ್ಟುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದಾರೆ. 20 ವರ್ಷಗಳಿಂದ ಕಾಂಗ್ರೆಸ್ ನಾಯಕ ಕಪಿಮುಷ್ಟಿಯಲ್ಲಿ ಇದ್ದ ರಟಕಲ್ ಸೊಸೈಟಿಯನ್ನು ಸ್ಥಳೀಯವಾಗಿ ಪಕ್ಷಾತೀತವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬದಲಾವಣೆ ಮಾಡಿ, ಪ್ರಸ್ತುತ ವರ್ಷದಿಂದ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಹಳೆಯದಾದ ಸೊಸೈಟಿ ಕಟ್ಟಡದ ರಿಪೇರಿಗಾಗಿ ಸ್ಥಳೀಯ ಬ್ಯಾಂಕ್ ಅನುದಾನಕ್ಕಾಗಿ ಮನವಿ ಸಲ್ಲಿಸಲಾಗಿದ್ದು, ಚುನಾವಣೆಯ ನಂತರ ಕಟ್ಟಡ ಪ್ರಾರಂಭಿಸಲಾಗುವುದು. ಸ್ಥಳೀಯ ಮಟ್ಟದಲ್ಲಿ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಹಾಗೂ ಸರಳವಾಗಿ ಪ್ರತಿದಿನ ಸಾಲ ತೀರಿಸುವ ಕೆಲಸ ಮಾಡಿ, ರೈತರು, ವ್ಯಾಪಾರಸ್ಥರಿಗೆ ಅನುಕೂಲ ಕೊಡಲಾಗುತ್ತಿದೆ. ಹಲವಾರು ಜನರಿಗೆ ಹೊಸ ಸದಸ್ಯತ್ವ ಕೊಟ್ಟಿರುತ್ತಾರೆ ಮುಂಬರುವ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಸ್ಥಳೀಯ ಚಿಂಚೋಳಿ ಬಿಜೆಪಿ ನಾಯಕರು ಇವೆಲ್ಲ ಸೇವೆಗಳನ್ನು ಪರಿಗಣಿಸಿ ಪಕ್ಷದ ಬೆಂಬಲದಿಂದ ಸ್ಪರ್ಧಿಸಲು ಅವಕಾಶ ನೀಡುತ್ತಾರೆ ಎನ್ನುವ ನಂಬಿಕೆ ಇದೆ. ಈಗಾಗಲೇ ತಾಲೂಕಿನ ಹೆಚ್ಚಿನ ಪ್ರತಿನಿಧಿಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಪಕ್ಷಾತೀತವಾಗಿ ಎಲ್ಲರ ವಿಶ್ವಾಸ ಪಡೆದಿರುತ್ತಾರೆ.
ಪಕ್ಷವು ಅವಕಾಶ ಕೊಟ್ಟಲ್ಲಿ ಖಂಡಿತ ಗೆದ್ದು ಒಂದು ತಾಲೂಕಿನ ರೈತರ ಪರವಾಗಿ ಪ್ರಾಮಾಣಿಕ ಕೆಲಸ ಮಾಡುತ್ತಾರೆ. ಈ ಬಾರಿ ಹೊಸ ಮುಖಕ್ಕೆ ಅವಕಾಶ ಸಿಗುತ್ತೆ ಅನ್ನುವ ಭರವಸೆಯೊಂದಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ಎದುರಿಸುವ ಸಂಪೂರ್ಣ ತಯಾರಿ ಮಾಡಿದ್ದಾರೆ. ಸಂಘದ ನಿರ್ದೇಶಕರುಗಳಾದ ಚಂದ್ರಕಾಂತ ಸೀಗಿ, ಗುಂಡಯ್ಯ ಮಠಪತಿ, ಮಲ್ಲಿಕಾರ್ಜುನ ಬುಳ್ಳಾ, ಕಮಲಬಾಯಿ ಚೆಂಗಟಿ, ಸುರತಬಾಯಿ ಚಿಕ್ಕಾಗಸಿ ಅವರು ಪಕ್ಷದ ಹಿರಿಯರಿಗೂ. ಮುಖಂಡರಿಗೂ ಡಿಸಿಸಿ ಬ್ಯಾಂಕ್ ಚುನಾವಣೆಗೆ ಮತದಾರರಿಗೂ ಅರ್ಹತೆ ಪಡೆದಿರುವ ಎಲ್ಲಾ ಪ್ರತಿನಿಧಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವರದಿ: ಎಸ್. ವಿ. ಗಂಗಾಣಿ.



















