ಕೊಪ್ಪಳ : ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನವಂಬರ್ ೯ ರಂದು ರಂದು ಹಮ್ಮಿಕೊಂಡಿರುವ ೧೧ನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಮೂಲಕ ಸಹಸ್ರಾರು ಜನರಿಗೆ ಜಾಗೃತಿ ಆಂದೋಲನ ಮೂಲಕ ತಿಳುವಳಿಕೆ ನೀಡಲು ಎಲ್ಲಾ ಕನ್ನಡಿಗರು ಕೈಜೋಡಿಸಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ ಹೇಳಿದರು. ಅವರು ಶನಿವಾರ ಕೊಪ್ಪಳದಲ್ಲಿ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ೧೧ನೆಯ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಅನುದಾನವಿಲ್ಲದೇ ನಿರಂತರ ಚಟುವಟಿಕೆ ಮೂಲಕ ಜನರಿಗೆ ಅಕ್ಷರದ ಬೀಜ ಬಿತ್ತುವ ಪರಿಷತ್ ಕಾಯ೯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಸಾಹಿತ್ಯ ಕೆಲಸಗಳಿಗೆ ಪ್ರತಿಯೊಬ್ಬರೂ
ಪ್ರೋತ್ಸಾಹ ಬೆಂಬಲ ನೀಡಿ ಸಮ್ಮೇಳನ ಯಶಸ್ವಿಗೆ ಸರ್ವರೂ ಶ್ರಮಿಸಬೇಕೆಂದು ತಿಳಿಸಿದರು.
ಈ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ್ ನೆಲಾಗಣಿ, ಕೊಪ್ಪಳ ತಾಲೂಕು ಅಧ್ಯಕ್ಷ ಸಾಹಿತಿಗಳಾದ ಮೈಲಾರಪ್ಪಉ೦ಕಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಹಾದಿಮನಿ, ಹಿರಿಯ ಕವಯಿತ್ರಿ ಪುಷ್ಪಲತಾ ಯೊಳುಭಾವಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
– ಕರುನಾಡ ಕಂದ ಪತ್ರಿಕೆ




















