೧.
ಕಾಯವನು ದಂಡಿಸಿ
ಕಾಯಕವ ಮಾಡಿರೆಂದರು,
ಬಸವಾದಿ ಪ್ರಮಥರು ಅಂದು,
ಕಾಯವನು ದಂಡಿಸದೇ
ಕೈಲಾಸವ ಬಯಸುತಿರುವರು
ಆಧುನಿಕರು, ಇಂದು,!
ಎಂದ ಶಿವ ಶಿವಾ!
೨.
ಶರಣು ಎಂದವರಿಗೆ
ಶರಣು ಶರಣಾರ್ಥಿ ಎಂದರು,
ಬಸವಾದಿ ಪ್ರಮಥರು,(ಶರಣರು).ಅಂದು,
ಮಾತಾಡಿಸಿದರೆ ಮೈ ಮೇಲೇ
ಬೀಳುತ್ತಿರುವರಲ್ಲ, ಆಧುನಿಕರು
ಅಣ್ಣ ಹೇಳಿಲ್ಲವೇ,
ಏನ ಬಂದಿರಿ, “ಹದುಳವಿದ್ದಿರೇ,
ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”
ಹೌದು ಅನ್ನುತ್ತಿರುವರಲ್ಲ
ಆಧುನಿಕರು, ಎಂದ ಶಿವ ಶಿವಾ!
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.,
ಕೊಪ್ಪಳ. 583231.




















