ಹಾಲುಮತ ಸಮಾಜದ ಹೆಸರಿನಲ್ಲಿ ಪ್ಲಾಟುಗಳು ಗುಳುಂ
ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಮಲಕ ಸಮುದ್ರ ರಸ್ತೆಗೆ ಇರುವ ಶ್ರೀ ಸಿದ್ದರಾಮಯ್ಯ ನಗರದ ಸರ್ವೇ ನಂಬರ ೨೨೨ ಮತ್ತು ಸರ್ವೆ ನಂಬರ್ ೨೨೪ ರಲ್ಲಿ ಹಾಲುಮತ ಸಮಾಜದ ಹೆಸರಿನಲ್ಲಿದ್ದ ಪ್ಲಾಟುಗಳು ಮಾಯವಾಗಿವೆ ಭ್ರಷ್ಟಾಚಾರದಲ್ಲಿ ಭಾಗಿಯಾದ ತಪ್ಪಿತಸ್ಥರ ಮೇಲೆ ಬೆಂಗಳೂರಿನ ಉಪ ಲೋಕಯುಕ್ತರು ದಾಳಿ ನಡೆಸಿ ತನಿಖೆ ಮಾಡಿ ಹಾಲುಮತ ಸಮಾಜದ ಸಂಘ, ಸಂಸ್ಥೆಗಳಿಗೆ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘ ( ವಾಸುದೇವ ಮೇಟಿ ಬಣದ ) ಯಲಬುರ್ಗಾ ತಾಲೂಕಾ ಅಧ್ಯಕ್ಷ ಶರಣಬಸಪ್ಪ ದಾನಕೈ ಅವರು ಅ.೩೦ ರಂದು ಉಪ ಲೋಕಾಯುಕ್ತರಿಗೆ ದೂರನ್ನು ಸಲ್ಲಿಸಿದ್ದಾರೆ. ದೂರಿನಲ್ಲಿ ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಮತ್ತು ಸಮಾಜದ ಸಂಘ ಸಂಸ್ಥೆಗಳಿಗೆ ಪ್ಲಾಟುಗಳನ್ನು ವಿತರಿಸಿ ಉಳಿದ ಸದಸ್ಯರಿಗೆ ಹಣ ಕೊಟ್ಟಿರುವ ಸದಸ್ಯರಿಗೆ ೩೦×೪೦ ಸೈಜ್ ಪ್ಲಾಟುಗಳನ್ನು ಹಂಚಿಕೆ ಮಾಡಿಕೊಡಬೇಕು ಎಂದು ನಿರ್ಧಾರ ಮಾಡಲಾಗಿತ್ತು, ಈ ವ್ಯವಹಾರದಲ್ಲಿ ಭಾಗವಹಿಸಿದ ಹನುಮಂತಪ್ಪ ಕೊಂಡಗುರಿ ಶಿಕ್ಷಕರು ಸಾ. ಹಿರೇಅರಳಿಹಳ್ಳಿ ಇವರು ತಮ್ಮ ಸಹೋದರ ಶರಣಪ್ಪ ಕೊಂಡುಗುರಿ ಇವರ ಹೆಸರಿಗೆ ೨೨೨ ರ ಸರ್ವೇ ನಂಬರ ಜಮೀನು ಮತ್ತು ೨೨೪ ರ ಸರ್ವೇ ನಂಬರ ಜಮೀನನ್ನು ಕೆರಿಬಸಪ್ಪ ನಿಡುಗುಂದಿ ಇವರ ಹೆಸರಿಗೆ ಖರೀದಿ ಮಾಡಿ ಎನ್. ಎ ಮಾಡಿಸಿ ಪ್ಲಾಟುಗಳನ್ನು ವಿತರಿಸಬೇಕೆಂದು ತೀರ್ಮಾನಿಸಿ, ಇದರ ಮುಂದಾಳತ್ವವನ್ನು ಸೋಮಶೇಖರ ಹರ್ತಿ ನಿವೃತ್ತ ಶಿಕ್ಷಕರು ಭಾಗ್ಯನಗರ ಹಾಗೂ ಮಲ್ಲಪ್ಪ ಜೋಗಿನ ಇವರು ವಹಿಸಿದ್ದರು. ಆದರೆ ಫ್ಲಾಟುಗಳನ್ನು ಸರಿಯಾಗಿ ವಿತರಣೆ ಮಾಡಲಾರದೆ ಭ್ರಷ್ಟಾಚಾರ ಮಾಡಿದ್ದಾರೆ.
ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಪೊಲೀಸ ಪಾಟೀಲ ಇವರು ಬಗೆ ಹರಿಸುವುದಾಗಿ ಹೇಳಿ ತಾವು ಈಗ ನೂತನ ಮನೆ ನಿರ್ಮಿಸಿಕೊಂಡಿದ್ದಾರೆ ಆದರೆ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ ಏಕೆ? ಭ್ರಷ್ಟಚಾರ ಯಾರಿಂದ ಆಗಿದೆ ಎಂಬುದನ್ನು ತನಿಖೆ ನಡೆಸಬೇಕು. ಇದರಲ್ಲಿ ಶ್ರೀ ಕನಕದಾಸ ಯುವಕ ಮಂಡಳ, ಶ್ರೀ ಕನಕದಾಸ ಪತ್ತಿನ ಸಹಕಾರ ಸಂಘ, ಯಲಬುರ್ಗಾ ತಾಲೂಕು ಕುರುಬರ ಸಂಘ, ಕನಕ ಭವನ ಹಾಗೂ ಪ್ಲಾಟುದಾರರಾದ ಶರಣಬಸಪ್ಪ ದಾನದಕೈ ಯಲಬುರ್ಗಾ, ದೇವಪ್ಪ ಭೀಮಪ್ಪ ಬಾವಿಕಟ್ಟಿ, ಪುಷ್ಪಲತಾ ಹನುಮಂತಪ್ಪ ದಾನಕೈ ಯಲಬುರ್ಗಾ ಹಾಗೂ ಇತರ ಜನರಿಗೆ ಮೋಸ ಮಾಡಿದ್ದಾರೆ , ತಿಳಿದು ಬದುಕಬೇಕಾದವರು ತುಳಿದು ಬದುಕುತ್ತಿದ್ದಾರೆ, ಬೇಲಿಯೆ ಎದ್ದು ಹೊಲವನ್ನು ಮೇದಂತೆ ಆಗಿದೆ, ಕುರುಬ ಸಮಾಜದ ಮುಖಂಡರಿಂದ ಕುರುಬರಿಗೆ ಅನ್ಯಾಯವಾಗಿದೆ ಇವರು ಹಾಲುಮತ ಸಮಾಜದ ಸಂಘ ಸಂಸ್ಥೆಗಳ ಪ್ಲಾಟುಗಳನ್ನು ಗುಳುಂ ಮಾಡಿದ್ದಾರೆ ,ಸಮಾಜಕ್ಕಾಗಿ ಉಳಿಸಿದ ಪ್ಲಾಟುಗಳನ್ನು ಬೇರೆಯವರಿಗೆ ಮಾರಿ ಹಂಚಿಕೆ ಮಾಡಲಾರದೆ ಮೋಸ ಮಾಡಿದ್ದಾರೆ, ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಂಡು ತನಿಖೆ ಮಾಡಿ ನಮ್ಮ ಸಮಾಜಕ್ಕೆ ಹಾಗೂ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಉಪ ಲೋಕಾಯುಕ್ತರಲ್ಲಿ ಶರಣಬಸಪ್ಪ ಕಲ್ಲಪ್ಪ ದಾನಕೈ ಅವರು ದೂರು ಸಲ್ಲಿಸಿ ಮನವಿ ಸಲ್ಲಿಸಿದ್ದಾರೆ.
ಹಿನ್ನಲೆ ಏನು?
ಹಾಲುಮತ ಸಮಾಜದ ಅಭಿವೃದ್ಧಿಗಾಗಿ ಸರ್ವೆ ನಂಬರ ೨೨೪ ರ ಪೂಜಾರಪ್ಪ ಬಂಡಿಹಾಳ ಇವರ ಜಮೀನು ಒಂದು ಎಕರೆ ಹನ್ನೊಂದು ಗುಂಟೆ ಜಮೀನು ಹಾಗೂ ಸರ್ವೆ ನಂಬರ ೨೨೨ ರ ರೇವಣೆಪ್ಪ ಹಿರೇಕುರಬರ ಇವರ ಒಂದು ಎಕರೆ ಜಮೀನು ಖರೀದಿ ಮಾಡಿ ,ಎನ್.ಎ.ಮಾಡಿಸಿ ಅದರಲ್ಲಿ ಸಮಾಜಕ್ಕೆ ಪ್ರಥಮ ಪ್ರಾಮುಖ್ಯತೆ ಕೊಟ್ಟು ಇತರ ಪ್ಲಾಟುಗಳನ್ನು ಹಣ ಕೊಟ್ಟಿರುವ ಸದಸ್ಯರಿಗೆ ಡ್ರಾ ಮಾಡಿ ವಿತರಿಸಬೇಕು ಎಂದು ತೀರ್ಮಾನಿಸಿ ಹಿರಿಯರು ಮತ್ತು ಸದಸ್ಯರು ಕೂಡಿಕೊಂಡು ಅವರ ಹೆಸರಿಗೆ ಎನ್.ಎ ಮಾಡಿದ್ದಾರೆ ಇಲ್ಲಿಯವರೆಗೆ ಲೆಕ್ಕ ಪತ್ರಗಳನ್ನು ನೀಡಿಲ್ಲ, ಇದರ ಬಗ್ಗೆ ವಾರ ಪತ್ರಿಕೆ, ಪಾಕ್ಷಿಕ ಪತ್ರಿಕೆ, ದಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದರೂ ಸುಮ್ಮನಿದ್ದಾರೆ, ಸರ್ವೆ ನಂಬರ ೨೨೨ ರ ಜಮೀನು ಮಾಲಿಕರು ಇವರಿಗೆ ಮುಂಗಡ ಒಂದು ಲಕ್ಷ ರೂ. ಕೊಟ್ಟವರು ಯಾರು? ಇದನ್ನು ತಿಳಿಯಲಾರದೆ ಪ್ರಥಮ ಹಂತದಲ್ಲಿ ನಯಾ ಪೈಸೆ ಕೊಡಲಾರದವರು ಪ್ಲಾಟುಗಳನ್ನು ನುಂಗಿ ನೀರು ಕುಡಿದಿದ್ದಾರೆ, ಇವರದು ತಪ್ಪಿಲ್ಲವೆಂದರೆ ಇದುವರೆಗೂ ಬಹಿರಂಗವಾಗಿ ಸಭೆಯ ಲೆಕ್ಕ ಪತ್ರಗಳನ್ನು ಏಕೆ ನೀಡಲಿಲ್ಲ ? ಇಂತಹ ಭ್ರಷ್ಟಾಚಾರದಲ್ಲಿ ನಿರತರಾದ ವ್ಯಕ್ತಿ ಹಾಗೂ ಇವರ ಕುಟುಂಬದವರ ಮನೆಯನ್ನು ಲೋಕಾಯುಕ್ತರು ಸಮಯ ನೋಡಿ ದಾಳಿ ಮಾಡಿದಾಗ ಇವರ ಭ್ರಷ್ಟಾಚಾರ ಹೊರ ಬರಲು ಸಾಧ್ಯವಾಗುತ್ತದೆ ಎಂದು ರೈತ ಮುಖಂಡ ಹೋರಾಟಗಾರ ಶರಣಬಸಪ್ಪ ದಾನಕೈ ಅವರು ಮಾಧ್ಯಮದವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಸಮಾಜ, ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜ, ದೇಶಕ್ಕಾಗಿ ನಾನು ಏನು ಕೊಟ್ಟೆ ,ನನ್ನ ಕೊಡುಗೆ ಏನು ಎಂಬುದನ್ನು ತಿಳಿಯಲಾರದವರು ಇವರು ಸಮಾಜ ಉದ್ದಾರಕರೆ? ಯುವಕರೆ, ಜಾಗೃತರಾಗಿರಿ, ಬಾಯಿ ಇದ್ದರೂ ಮೂಖರಂತೆ, ಕಣ್ಣು ಇದ್ದರೂ ಕುರುಡರಂತೆ, ಕಿವಿಯಿದ್ದರೂ ಕಿವುಡರಂತೆ ಅಗಿದೆ ನಮ್ಮ ಸಮಾಜದ ಪರಿಸ್ಥಿತಿ ಇನ್ನು ಮುಂದೆ ಭ್ರಷ್ಟಾಚಾರಿಗಳನ್ನು ಇವರನ್ನು ಯಾವುದೇ ಸಭೆ ಸಮಾರಂಭಗಳಿಗೆ ಕರೆಯಬೇಡಿ , ಮುಂದಿನ ದಿನಗಳಲ್ಲಿ ಇವರಿಗೆ ತಕ್ಕ ಪಾಠವನ್ನು ಕಲಿಸಬೇಕು ಅಂದಾಗ ಇವರು ಜಾಗೃತಿ ಹೊಂದಲು ಸಾದ್ಯ , ನಾವೆಲ್ಲರೂ ಹೋರಾಟದ ಹಾದಿಯಲ್ಲಿ ಸಾಗಿದಾಗ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಲ್ಲವೆ?
ಎಂದು ಕರ್ನಾಟಕ ರಾಜ್ಯ ಹಸಿರು ಸೇನೆ ಹಾಗೂ ರಾಜ್ಯ ರೈತ ಸಂಘ ( ವಾಸುದೇವ ಮೇಟಿ ಬಣದ ) ಯಲಬುರ್ಗಾ ತಾಲೂಕಾ ಅಧ್ಯಕ್ಷ ಶರಣಬಸಪ್ಪ ದಾನಕೈ ಆಗ್ರಹಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















