ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾರ್ಖಾನೆ ಮಾಲೀಕರ ವಿರುದ್ಧ ಕಿಡಿ ಕಾರಿದ ಪ್ರಮೋದ್ ಮುತಾಲಿಕ್

ರೈತರು ಬೀದಿಯಲ್ಲಿ ಕುಂಡ್ರವಂತೆ ಮಾಡಿದ್ದು ಸರ್ಕಾರದ ಅಪರಾಧ ಎಂದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಮುತಾಲಿಕ್

ಬೆಳಗಾವಿ/ ಮೂಡಲಗಿ : ರೈತರು ಬೀದಿಯಲ್ಲಿ ಕುಂಡ್ರವಂತೆ ಮಾಡಿದ್ದು ಸರ್ಕಾರದ ಅಪರಾಧ, ರೈತರು ಇಡೀ ದೇಶಕ್ಕೆ ಅನ್ನ ನೀಡುವಂತಹ ಅನ್ನದಾತನನ್ನು ಹೋರಾಟ ಮಾಡುವಂತೆ ಮಾಡಿದ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ನನ್ನ ಧಿಕ್ಕಾರ ಎಂದು ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಏಳನೇ ದಿನದ ರೈತರ ಹೋರಾಟದ ವೇದಿಕೆಯಲ್ಲಿ ಮಾತನಾಡಿದವರು, ಕಬ್ಬಿಗೆ 3500 ರೂ, ನೀಡಬೇಕೆಂದು ರೈತರು ನಿರಂತರವಾಗಿ ಹಗಲು ರಾತ್ರಿ ಹೋರಾಟ ಮಾಡುತ್ತಿದ್ದಾರೆ ಆ ಹೋರಾಟಕ್ಕೆ ಶ್ರೀರಾಮ ಸೇನೆ ಬೆಂಬಲವನ್ನು ಸೂಚಿಸುತ್ತದೆ ಎಂದು ಹೇಳಿದರು.

ರಾಜಕಾರಣಿಗಳಿಗೆ ರೈತರ ಮತ ಬೇಕು ಆದರೆ ರೈತರ ಕಷ್ಟ ಬೇಡ್ವಾ ಎಂದು ರಾಜಕಾರಣಿಗಳ ವಿರುದ್ಧ ಹರಿಹಾಯ್ದರು, ರೈತರು ಸುಮ್ಮನೆ 3500 ರೂ, ದರ ನಿಗದಿ ಮಾಡಿ ಅಂತ ಹೇಳುತ್ತಿಲ್ಲ ಕಬ್ಬು ಬೆಳಗ್ಗೆ ಆಗುವ ಖರ್ಚಿನ ಲೆಕ್ಕಾಚಾರ ಹಾಕಿ ಅವರಿಗೆ ಆಗುತ್ತಿರುವ ಕಷ್ಟಗಳನ್ನು ಅರಿತು ಇವತ್ತು ಬೀದಿಗಿಳಿದು ಹೋರಾಟ ಮಾಡುವಂತಹ ಪರಿಸ್ಥಿತಿ ಉದ್ಭವವಾಗಿದ್ದು, ಹೋರಾಟಕ್ಕೂ ಕೂಡ ಕಾರ್ಖಾನೆ ಮಾಲೀಕರು ಮೀನಾಮೇಷ ಹಾಕುತ್ತಿರುವುದರಿಂದ ಕಾರ್ಖಾನೆ ಮಾಲೀಕರ ವಿರುದ್ಧ ಕಿಡಿ ಕಾರಿದರು.

ವರದಿಗಾರರು ವಿಲ್ಸನ್ ಡವಳೇಶ್ವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!