ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೋಡಬಂಡಾ ರಥೋತ್ಸವ ಸಂಪನ್ನ

ಗುರುಮಠಕಲ್/ಬೋಡಬಂಡಾ: ನ. 05 ತಾಲೂಕಿನ ಬೋಡಬಂಡಾ ಗ್ರಾಮದಲ್ಲಿ ಬುಧವಾರ ಶ್ರೀಲಕ್ಷ್ಮೀ ತಿಮ್ಮಪ್ಪ ದೇವರ ರಥೋತ್ಸವ ಸಂಪನ್ನಗೊಂಡಿತು.

ಬೆಳಿಗ್ಗೆಯಿಂದ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಹೋಮ, ಅಭ್ಯಂಗ ಸ್ನಾನ, ಕಲ್ಯಾಣೋತ್ಸವ ಹಾಗೂ ರಥೋತ್ಸವ, ಉಂಜಲ ಸೇವೆ ಸಾಂಪ್ರದಾಯಿಕವಾಗಿ ಮಧ್ಯಾಹ್ನದವರೆಗೆ ಜರುಗಿದವು.

ಸಾಯಂಕಾಲದ ಕೈ ಕುಸ್ತಿ ಪಂದ್ಯಗಳು ಜರುಗಿದವು, ಕೈ ಕುಸ್ತಿ ಪಂದ್ಯದಲ್ಲಿ ನೆರೆಯ ತೆಲಂಗಾಣ ರಾಜ್ಯ ಸೇರಿದಂತೆ ಸುತ್ತಮುತ್ತಲಿನ ಪಟುಗಳು ಪಾಲ್ಗೊಂಡರು, ಅಸಂಖ್ಯಾತ ಭಕ್ತರನ್ನು ಹೊಂದಿರುವ ಬೋಡಬಂಡಾ ಸುಕ್ಷೇತ್ರಕ್ಕೆ ಬೆಳಿಗ್ಗೆಯಿಂದ ನೂರಾರು ಭಕ್ತರು ಕಾರ್ಯಕ್ರಮಗಳ ದರ್ಶನ ಪಡೆದು ಪುನೀತರಾದರು. ಕೈ ಕುಸ್ತಿ ಪಂದ್ಯಗಳ ಮುಕ್ತಾಯದೊಂದಿಗೆ 16ನೇಯ ಜಾತ್ರಾ ಮಹೋತ್ಸವ ಸಂಪನ್ನ ಗೊಂಡಿತು.

ಕಾರ್ಯಕ್ರಮದಲ್ಲಿ ಖಾಸಾಮಠದ ಶ್ರೀಗಳು ಸೇರಿದಂತೆ ವಿವಿಧ ಮಠದ ಶ್ರೀಗಳು ಭಾಗವಹಿಸಿದರು, ದೇವಸ್ಥಾನ ಜೀರ್ಣೋದ್ಧಾರ ಸಮೀತಿಯ ಮಣಿಕಂಠ ರಾಥೋಡ್, ಅಯ್ಯಪ್ಪ ರಾಥೋಡ್ ಹಾಗೂ ರಾಜು ರಾಥೋಡ್ ದೇವಸ್ಥಾನದ ಸದ್ಭಕ್ತರು ಭಾಗವಹಿಸಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!