ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಚಟುವಟಿಕೆಗಳ ಮೂಲಕ ರಾಜ್ಯಕ್ಕೆ ಪ್ರಸಿದ್ದಿಯಾಗಲಿ : ಸಾಹಿತಿ ಅಕ್ಬರ್ ಸಿ.ಕಾಲಿಮಿಚಿ೯ ಆಶಯ

ಕೊಪ್ಪಳ : ಚುಟುಕು ಸಾಹಿತ್ಯ ಪರಿಷತ್
ಚಟುವಟಿಕೆಗಳು ಕೇಂದ್ರ ಸಮಿತಿ ಮೈಸೂರಿಗಿಂತ ಕೊಪ್ಪಳ ಹೆಚ್ಚಿನ ಜನಪ್ರಿಯತೆ ಪಡೆಯುವಂತೆ ಸಂಘಟಕರು ಶ್ರಮಿಸಬೇಕೆಂದು ಹಿರಿಯ ಸಾಹಿತಿ ಅಕ್ಬರ್ ಸಿ. ಕಾಲಿಮಿಚಿ೯ ಹೇಳಿದರು.

ನವೆಂಬರ್ ೯ ರಂದು ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿರುವ ೧೧ನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ ಸವಾ೯ಧ್ಯಕ್ಷರಾದ ವೀರಣ್ಣ ವಾಲಿ ಅವರಿಗೆ ಅಧಿಕೃತ ಆಹ್ವಾನ ನೀಡುವ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಅವಧಿ ಹಾಗೂ ಅಧಿಕಾರ ಹಂಚಿಕೆ ಬಹಳ ಪ್ರಮುಖವಾಗಿದ್ದು ಇದರಿಂದ ಸ್ಥಳೀಯ ಸಾಹಿತ್ಯ ಆಸಕ್ತರಿಗೆ ಅಕ್ಷರ ಮಾತೆ ಕಾಯ೯ ಚಟುವಟಿಕೆಗಳಿಗೆ ಎಲ್ಲರನ್ನೂ ತೊಡಗಿಸಿದಂತಿದೆ. ಆಧುನಿಕ ದಿನಮಾನಗಳಲ್ಲಿ ಸಾಹಿತ್ಯೇತರ ಚಟುವಟಿಕೆಗಳು ಅವಸಾನದಂಚಿಗೆ ತಲುಪಿದ್ದು ವಿಷಾದಕರ ನಡುವೆ ಕೊಪ್ಪಳದಲ್ಲಿ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಪಣ ತೊಟ್ಟು ೧೧ ನೆಯ ಸಮ್ಮೇಳನ ಹಮ್ಮಿಕೊಂಡಿದ್ದು ಸಂತಸದ ಬೆಳವಣಿಗೆ ಆಗಿದೆ ಹಿರಿಯ ಸಾಹಿತಿ ವೀರಣ್ಣ ವಾಲಿ ಅವರು
ಸರಳ ಹಾಗೂ ಚಿಂತನಾ ಶೀಲ ವ್ಯಕ್ತಿಯಾಗಿದ್ದು ಇವರ ಆಯ್ಕೆ ಸೂಕ್ತವಾಗಿದೆ ಇವರ ಸವಾ೯ಧ್ಯಕ್ಷತೆಯಲ್ಲಿ ನಾಡು ನುಡಿ ಹಾಗೂ ಕೊಪ್ಪಳ ಜಿಲ್ಲೆಯ ಬೇಕು ಬೇಡಿಕೆಗಳ ಈಡೇರಿಕೆಗೆ ಸಮ್ಮೇಳನ ಉತ್ತಮ ವೇದಿಕೆಯಾಗಿ ಬೆಳಕು ಚೆಲ್ಲಲಿ ಬರುವ ದಿನಗಳಲ್ಲಿ ಚುಟುಕು ಸಾಹಿತ್ಯದ ಮೂಲಕ ಯುವ ಪೀಳಿಗೆ ಆಸಕ್ತಿಯನ್ನು ಪ್ರೋತ್ಸಾಹಿಸಿ ಬೆಂಬಲಿಸಿ ನಾಡಿಗೆ ಅಮೂಲ್ಯ ರತ್ನಗಳನ್ನು ಕೊಡುಗೆ ನೀಡಲಿ ಎಂದು ಹಾರೈಸಿದರು. ವೀರಣ್ಣ ವಾಲಿ ದಂಪತಿಗಳನ್ನು ಸತ್ಕರಿಸಿ ಗೌರವಿಸಲಾಯಿತು.
ಸಮ್ಮೇಳನದ ಗೌರವಾಧ್ಯಕ್ಷರಾಗಿ ಸನ್ಮಾನ ಸ್ವೀಕರಿಸಿದ ಹಿರಿಯ ಸಾಹಿತ್ಯಾಸಕ್ತರಾದ ಎಂ.ಬಿ. ಅಳವಂಡಿ ದ್ವಿತೀಯ ಮಾತನಾಡಿ, ಚುಟುಕು ಸಾಹಿತ್ಯ ಬರೆಯುವ ಯುವಕರಿಗೆ ಹಾಗೂ ಸಮ್ಮೇಳನ ಯಶಸ್ವಿಗೆ ತಾವು ತನು ಮನ ಧನ ನೀಡುವುದಾಗಿ ಘೋಷಿಸಿದರು. ಸಮ್ಮೇಳನಾಧ್ಯಕ್ಷ ವೀರಣ್ಣ ವಾಲಿ ಮಾತನಾಡಿ, ಸಹಸ್ರಾರು ಜನರಿಗೆ ಕನ್ನಡ ಹಾಗು ಚುಟುಕು ಸಾಹಿತ್ಯಜಾಗೃತಿ ಆಂದೋಲನ ಮೂಲಕ ತಿಳುವಳಿಕೆ ನೀಡಲು ಶ್ರಮಿಸೋಣ, ಕನ್ನಡದ ಎಲ್ಲಾ ಮನಸ್ಸುಗಳು ಸಮ್ಮೇಳನಕ್ಕೆ ಅದ್ಧೂರಿ ಮೆರಗು ನೀಡಬೇಕೆಂದು ಕೋರಿದರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಡಾ. ಮಹಾಂತೇಶ್ ನೆಲಾಗಣಿ, ತಾಲೂಕು ಅಧ್ಯಕ್ಷ ಸಾಹಿತಿಗಳಾದ ಮೈಲಾರಪ್ಪ ಉ೦ಕಿ, ಶಿವಪ್ರಸಾದ್ ಹಾದಿಮನಿ,
ಅಕ್ಕಮಹಾದೇವಿ ಅಂಗಡಿ, ರವಿ ಎಸ್.
ಹಿರೇಮನಿ, ಎ.ಪಿ. ಅಂಗಡಿ, ಉಪನ್ಯಾಸಕ ರಾಘವೇಂದ್ರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!