ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರದ್ಧಾ–ಭಕ್ತಿ ವೈಭವದಲ್ಲಿ ಶ್ರೀಮಠ | ಸಂಗಮೇಶ್ವರ ಸ್ವಾಮಿಗಳ ಪುಣ್ಯ ಸ್ಮರಣೆಗೆ ಭಾವಪೂರ್ಣ ನಮನ.

ಯಾದಗಿರಿ/ಗುರುಮಠಕಲ್ : ಹಳೆಯ ಸ್ಮೃತಿಗಳ ಮೌನ ಮುದ್ರಿಯಲ್ಲಿ, 600 ವರ್ಷಗಳ ಪವಿತ್ರ ಐತಿಹಾಸ್ಯದಿಂದ ಮಿಂಚುತ್ತಿರುವ ಗುರುಮಠಕಲ್ ಖಾಸಮಠ ಇಂದು ಅಪರೂಪದ ಭಕ್ತಿ ಮಹೋತ್ಸವವನ್ನು ನೋಡಿತು. ಮಾನವೀಯ ಮೌಲ್ಯಗಳ ಪ್ರಜ್ವಲನೆಯಾಗಿದ್ದ ಲಿಂಗೈಕ್ಯ ಶ್ರೀ ಮನಿಪ್ರ ಸಂಗಮೇಶ್ವರ ಸ್ವಾಮಿಗಳ 26ನೇ ಪುಣ್ಯಸ್ಮರಣೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಮಠದ 9ನೇ ಪೀಠಾಧಿಪತಿಗಳಾಗಿ ಜನಪದ ಪ್ರೀತಿ ಮತ್ತು ಸರಳತೆಯ ಮಾದರಿಯಾಗಿದ್ದ ಶ್ರೀಗಳು, ಬದುಕಿನ ಎಲ್ಲಾ ಹಂತದಲ್ಲಿಯೂ ಅಧ್ಯಾತ್ಮ ಮತ್ತು ಕೃಷಿ ಕಾಯಕ, ಸಮಾಜ ಸೇವೆಯನ್ನೇ ಆಳವಾಗಿ ಆರಾಧಿಸಿದರು. ಸುಮಾರು 40 ವರ್ಷಗಳ ಕಾಲ ಖಾಸಮಠದ ಸೇವೆಯಲ್ಲಿ ತೊಡಗಿ, ಗಡಿಭಾಗದಲ್ಲಿ ವಿದ್ಯಾಸಂಸ್ಥೆ ಪ್ರಾರಂಭಿಸಿ ಕನ್ನಡದ ವೈಭವ ಎಲ್ಲೆಡೆ ಹರಡಿಸಿದ ಶ್ರೀಗಳ ವಿಚಾರಧಾರೆ, ಪ್ರತಿ ದಿನ ತ್ರಿಕಾಲ ಪೂಜೆಗೆ ಜೀವನ ಅರ್ಪಿಸಿದ್ದ ಶ್ರೀಗಳ ಆದರ್ಶಗಳು ಇಂದಿಗೂ ಜೀವಂತ ಎಂದು ಖಾಸಮಠದ ಈಗಿನ ಶ್ರೀಗಳಾದ ಶ್ರೀ ಮನಿಪ್ರ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು. .

ತದ ನಂತರ ನೂತನ ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು ಸೇರಿದಂತೆ ಶ್ರೀಮಠಕ್ಕೆ ಸೇವೆ ನೀಡಿದವರನ್ನು, ಸಾಮಾಜಿಕ ಸೇವೆ ನೀಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬೆನಕನಹಳ್ಳಿ ಕೇದಾರ ಶ್ರೀಗಳು, ವಿವಿಧ ಸಮಾಜದ ಮುಖಂಡರು ಹಾಗೂ ಗ್ರಾಮೀಣ ಭಾಗದ ನೂರಾರು ಭಕ್ತರು ಇಂದಿನ ಪವಿತ್ರ ಪುಣ್ಯಸ್ಮರಣೆಯಲ್ಲಿ ಭಾಗಿಯಾದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!