ಬಾಗಲಕೋಟೆ -ಮುಧೋಳ : ನಮ್ಮ ನಾಡಿನ ನೆಲ. ಜಲ. ಸಂಸ್ಕೃತಿ. ಪರಂಪರೆಯನ್ನು ಸಕಾರಾತ್ಮಕವಾಗಿ ಪರಿಚಯಿಸುವ ಗ್ರಾಮೀಣ ಪ್ರದೇಶದ ಸೊಗಡನ್ನು ಪ್ರತಿಬಿಂಬಿಸುವ ಜನಪದ ಕಾರ್ಯಕ್ರಮಗಳು ಇನ್ನೂ ಗಟ್ಟಿಯಾಗಿವೆ .ಅಂತಹ ವೈಶಿಷ್ಟ ಪೂರ್ಣವಾದ “ಮನೆಯಂಗಳದಲ್ಲಿ ಸಂಸ್ಕೃತಿ ಸಂಭ್ರಮ” ಉಡದಟ್ಟಿ ಉತ್ಸವ-2025 ಎಂಬ ವಿಶಿಷ್ಟವಾದ ಕಾರ್ಯಕ್ರಮವನ್ನು ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಗುರುಪರಂಪರೆ ಹಿರಿಯ ಸೇವಾ ಧುರೀಣ ಶಿವಪ್ಪ ಗೌಡ್ರು ಪವಾಡಶಟ್ಪಿ [ಪೋಲಿಸ್ ಗೌಡರ] ಅವರ ತೋಟದ ಮನೆಯಂಗಳದಲ್ಲಿ ಭವ್ಯ ವೇದಿಕೆಯಲ್ಲಿ ಸಂಸ್ಕೃತಿ ಸಂಭ್ರಮ -ಉಡದಟ್ಟಿ ಉತ್ಸವ 2025.ಸಾಂಸ್ಕೃತಿಕ ಕಾರ್ಯಕ್ರಮವನ್ನು ಸೋಮವಾರ ದಿ. 10, ರಂದು ಮುಂಜಾನೆ 10.30 ಕ್ಕೆ ಹಿರಿಯ ಸಾಹಿತಿಗಳು. ಕಲಾವಿದರು, ಆಧ್ಯಾತ್ಮಿಕ ಚಿಂತಕರು ಉತ್ಸವವನ್ನು ಹಮ್ಮಿಕೊಂಡಿದ್ದಾರೆ. ಈ ಉತ್ಸವದ ಪಾವನ ಸನ್ನಿಧಾನವನ್ನು ಇಂಚಲದ ಸಾಧು ಚಕ್ರವರ್ತಿ ಜಗದ್ಗುರು ಶ್ರೀ ಶಿವಾನಂದ ಭಾರತಿ ಮಹಾ ಸ್ವಾಮಿಗಳು ಅಲಂಕರಿಸುವರು. ಮರೇಗುದ್ದಿಯ ಡಾ. ಶ್ರೀನಿರುಪಾಧಿಶ್ವರ ಮಹಾಸ್ವಾಮಿಗಳು ಅಧ್ಯಕ್ಷತೆಯನ್ನು ವಹಿಸುವರು.
ರಬಕವಿಯ ಗುರುಸಿದ್ದೇಶ್ವರ ಶ್ರೀಗಳು, ಕುಳಲಿಯ ಶಂಕರಾನಂದ ಶ್ರೀಗಳು, ಶಿರೋಳದ ಯಮುನಾನಂದ ಗುರುಗಳು, ಕುಳಲಿಯ ಪಂಚಾಕ್ಷರಿ ಮಹಾಸ್ವಾಮಿಗಳು, ಮನಗೂಳಿಯ ನಾರಾಯಣ ಮಹಾರಾಜರು, ಮುಗಳಖೋಡದ ಶರಣಬಸವ ಶಾಸ್ತ್ರಿಗಳು ಸಮ್ಮುಖತ್ವವನ್ನು ವಹಿಸುವರು.
ಈ ಸಂದರ್ಭದಲ್ಲಿ ಶ್ರೀಗಳ ವಚನೋಪದೇಶ, ಪಾದಪೂಜೆ, ಗೌರವ ಸಮರ್ಪಣೆ ಜರುಗುವುದು. ಮೂಡಲಗಿಯ ಜೂನಿಯರ್ ಶಿವರಾಜ್ ಕುಮಾರ್ ತಂಡದಿಂದ ತತ್ವಪದಗಳ ಗಾಯನ, ವಿವಿಧ ಜನಪದ ಕಲಾ ತಂಡಗಳಿಂದ ಜನಪದ ಸಂಸ್ಕೃತಿ ಕಾರ್ಯಕ್ರಮಗಳು ಜರುಗುವವು. ಗುರುಕಿರಣ್, ನಂದನ, ಚೇತನ, ನಮ್ರತಾ, ಮಲ್ಲಿಕಾರ್ಜುನ ಪೂರ್ಣಿಮಾ ಉಡದಟ್ಟಿ ಉತ್ಸವಕ್ಕೆ ಸಾಕ್ಷಿಯಾಗುವರು ಈ ಸಂದರ್ಭದಲ್ಲಿ ಸಾಧಕರನ್ನು ಶರಣ ಸಂತ ಮಹಾಂತರನ್ನು ಗೌರವಿಸಲಾಗುವದು ಎಂದು ಗುರುಸೆವಾಧುರೀಣರಾದ ಬಸವರಾಜ್ ಹಾಗು ಚಂದ್ರಶೇಖರ್ ಸಹೋದರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















