ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

110ನೇ ಜಯಂತಿ ಆಚರಣೆಯ ಪೂರ್ವಭಾವಿ ಸಭೆ

ಚಾಮರಾಜನಗರ ಜಿಲ್ಲೆಯ
ಹನೂರು ತಾಲ್ಲೂಕಿನಲ್ಲಿ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಗಳ 110ನೇ ಜಯಂತಿಯನ್ನು ಡಿಸೆಂಬರ್ ತಿಂಗಳು 13ನೇ ತಾರೀಖು ವಿಜೃಂಭಣೆ ಜೊತೆಗೆ ಭಕ್ತಿ ಭಾವ ಶ್ರದ್ಧೆ ಮಾಡೋಣ ಎಂದು ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಜಯಂತಿ ಐತಿಹಾಸಿಕವಾಗಿ ಎಲ್ಲರೂ ಸಹಮತದೊಂದಿಗೆ ಧಾರ್ಮಿಕದ ಜೊತೆ ಸಾಮಾಜಿಕವಾಗಿ ವಿದ್ಯಾರ್ಥಿಗಳು ರೈತರು ಹಾಗೂ ಹಿಂದುಳಿದ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಅನುಕೂಲವಾಗುವ ರೀತಿ ಜಯಂತಿಯನ್ನು ಆಚರಣೆ ಮಾಡೋಣ ಎಂದು ನಿರ್ಧಾರ ಮಾಡಿದರು.

ಮಾಜಿ ಶಾಸಕ ಆರ್. ನರೇಂದ್ರ ಮಾತನಾಡಿ ಈ ಧಾರ್ಮಿಕ ಕಾರ್ಯಕ್ರಮ ನಮ್ಮ ತಾಲ್ಲೂಕಿನಲ್ಲಿ ಮಾಡುತ್ತಿರುವುದು ಹೆಚ್ಚಿನ ಖುಷಿ ನೀಡಿದೆ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಚಿವರನ್ನು ಒಳಗೊಂಡಂತೆ ಆಹ್ವಾನ ಮಾಡುವುದು ಒಳ್ಳೆದಾಗಿದೆ
ಹನೂರು ವಿಧಾನ ಸಭಾ ಕ್ಷೇತ್ರ ತುಂಬಾ ಹಿಂದೆ ಉಳಿದಿದ್ದು ಇನ್ನು ಕೂಡ ಅನೇಕ ಕೆಲಸಗಳು ಆಗಬೇಕಾಗಿದೆ ಮುಖ್ಯಮಂತ್ರಿ ಜಯಂತಿಗೆ ಬಂದರೆ ನಮ್ಮ ಕ್ಷೇತ್ರದ ಸಮಸ್ಯೆಗಳು ಕೂಡ ಬಗೆ ಹರಿಯಬಹುದು ಎಂದರು.
ನಮ್ಮ ಭಾಗದ ಸಮಸ್ಯೆಗಳನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಗಳ ಮುಖಾಂತರ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮತ್ರಿಗಳಿಗೆ ತಿಳಿಸಿದ್ದರೆ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುವುದು ನಿಶ್ಚಯ ಎಂದರು.
ಪೊನ್ನಚ್ಚಿ ಮಹದೇವಸ್ವಾಮಿ ಮಾತನಾಡಿ ಜಯಂತಿ ಆಚರಣೆಯನ್ನು ಅತ್ಯಂತ ಯಶಸ್ವಿ ಮಾಡಬೇಕು ಎನುವ ಉದ್ದೇಶದಿಂದ ಎಲ್ಲ ಸಮುದಾಯದ ಮುಖಂಡರಗಳನ್ನೂ ಸೇರಿಸಿ ಚರ್ಚಿಸಿ ಕಾರ್ಯ ಕ್ರಮ ಮಾಡಬೇಕು ಎನ್ನುವುದು ನಮ್ಮ ನಿರ್ಧಾರವಾಗಿತ್ತು
ಶ್ರಿಗಳು 19,20ಶತಮಾನದಲ್ಲಿ ನಮ್ಮ ಭಾಗಕ್ಕೆ ಅನ್ನ ದಾಸೋಹ ವಿದ್ಯಾ ದಾಸೋಹದಂತಹ ಅನೇಕ ಕೊಡುಗೆಗಳನ್ನು ಕೊಟ್ಟಂತವರು ವಿಕಲಚೇತನರಿಗೂ ವಿದ್ಯಾಧಾನ ಮಾಡಿದವರು ಅವರ ಜಯಂತಿಯನ್ನು ಅದ್ದೂರಿಯಾಗಿ ಮಾಡುವುದು ನಮ್ಮ ಹೆಮ್ಮೆ ಅಗಿದೆ ಎಂದರು

ಈ ಸಂದರ್ಭದಲ್ಲಿ ಸಾಲೂರು ಮಠದ ಶಾಂತಮಲ್ಲಿಕಾರ್ಜುನ್ ಸ್ವಾಮೀಜಿ , ಶಾಸಕರು ಎಂ ಆರ್ ಮಂಜುನಾಥ ಮಾಜಿ ಶಾಸಕಿ ಪರಿಮಳ ನಾಗಪ್ಪ , ಮುಖಂಡರಾದ ಉಮೇಶ ,ಅಜ್ಜಿಪುರ ಮುರ್ಡೇಶ್ವರ ,ನಿಶಾಂತ್ ,ಉದ್ದನೂರು ಪ್ರಸಾದ್ ಹಾಗೂ ಇನ್ನಿತರರು ಇದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!