ಬಾಗಲಕೋಟೆ/ ಹುನಗುಂದ: ಮಾಜಿ ಸಚಿವ, ಜನನಾಯಕ ಲಿಂ. ಎಸ್. ಆರ್. ಕಾಶಪ್ಪನವರ ಅವರ ಜನ್ಮ ಅಮೃತ ಮಹೋತ್ಸವ ೨೦೨೬ ಫೆಬ್ರವರಿ ತಿಂಗಳಲ್ಲಿ ನಡೆಯುವುದು. ಈ ನಿಮಿತ್ತ ಅವರ ಕುರಿತು ಸಂಸ್ಮರಣ ಗ್ರಂಥ ತರಲು ನಿರ್ಧರಿಸಿದೆ. ಅದರ ಸಂಪಾದಕ ಮಂಡಳಿ ಸಭೆ ಮಂಗಳವಾರ ನಗರದಲ್ಲಿ ನಡೆಯಿತು.
ಪ್ರಧಾನ ಸಂಪಾದಕ ಎಸ್ಕೆ ಕೊನೆಸಾಗರ ಕಾರ್ಯಕ್ರಮ ಮತ್ತು ಗ್ರಂಥ ಕುರಿತು ವಿವರ ನೀಡಿ, ೫೦೦ ಪುಟಗಳ ಗ್ರಂಥ ತರಲಾಗುವುದು. ಅವರ ಸಮಕಾಲೀನ ರಾಜಕೀಯ ಮುಖಂಡರು, ಒಡನಾಡಿಗಳು, ಪತ್ರಕರ್ತರು ಹಾಗೂ ಸಂಬಂಧಿಗಳಿಂದ ಲೇಖನಗಳನ್ನು ಬರೆಸಲಾಗುತ್ತಿದೆ ಎಂದರು.
ಸಂಪಾದಕ ಮಂಡಳಿಯ ಸದಸ್ಯರು ಹಾಗೂ ಹಿರಿಯರಾದ ಮಹಾಂತೇಶ ಅವಾರಿ, ಸಿದ್ದಲಿಂಗಪ್ಪ ಬೀಳಗಿ, ಡಾ .ನಾಗರಾಜ ನಾಡಗೌಡರ, ಸಂಗಣ್ಣ ಗದ್ದಿ, ಡಾ.ಮುರ್ತುಜಾ ಒಂಟಿ, ಶರಣಪ್ಪ ಹೂಲಗೇರಿ, ದಾನೇಶ್ವರಿ ಸಾರಂಗಮಠ ಮತ್ತು ಡಾ.ಶ್ರೀಧರ ಗೌಡರ ಹಾಜರಿದ್ದು ಗ್ರಂಥ ಮತ್ತು ಕಾರ್ಯಕ್ರಮ ಸ್ವರೂಪ ಕುರಿತು ಹೇಳಿದರು.
- ಕರುನಾಡ ಕಂದ ಪತ್ರಿಕೆ



















