ಬೀದರ್/ ಬಸವಕಲ್ಯಾಣ : ಸಹ ಶಿಕ್ಷಕಿ ಶ್ರೀಮತಿ ಶ್ರೀದೇವಿ ಯವರು ಸರ್ಕಾರಿ ಪ್ರೌಢ ಶಾಲೆ ಗೌರ ತಾ॥ ಬಸವಕಲ್ಯಾಣ -ಜಿ|| ಬೀದರ್ ಈ ಪ್ರೌಢ ಶಾಲೆಯಲ್ಲಿ 2012 ರಿಂದ ಸೇವೆ ಸಲ್ಲಿಸುತ್ತಿದ್ದರು. ಶಾಲೆಗೆ ಬಂದಾಗಿನಿಂದ ಇವರು ಬೋಧಿಸುವ ಪಾಠ ಯಾವ ಮಕ್ಕಳಿಗೂ ಅರ್ಥವಾಗುತ್ತಿಲ್ಲ. ವಿಷಯದ ಬಗ್ಗೆ ಕೇಳಲು ಹೋದಾಗ ಹೋದಾಗ ಮಕ್ಕಳಿಗೆ ತರಗತಿಯಲ್ಲಿಯೆ ಅವಾಚ್ಯ ಶಬ್ದಗಳಿಂದ ಬೈದು ಅವಮಾನಿಸುತ್ತಿದ್ದರು. ಇವರ ಬೋಧನೆ ಬಗ್ಗೆ ಗ್ರಾಮಸ್ಥರು ಅನೇಕ ಸಲ ಮೇಲಾಧಿಕಾರಿಗಳಿಗೆ ಹಾಗೂ ಇಲ್ಲಿನ ಮುಖ್ಯೋಪಾಧ್ಯಾಯರಿಗೆ ದೂರನ್ನು ನೀಡಿದರೂ ಯಾವುದೇ ರೀತಿಯ ಬದಲಾವಣೆ ಆಗಿರುವುದಿಲ್ಲ. ಸದರಿ ಶಿಕ್ಷಕಿಯರು ಬಸವಕಲ್ಯಾಣ ತಾಲೂಕಿನ ಸಾವಿತ್ರಿಬಾಯಿ ಸಂಘದ ಅಧ್ಯಕ್ಷರಾಗಿದ್ದರು. ಇವರಿಂದಾಗಿ ಗ್ರಾಮಸ್ಥರಿಗೆ ಮತ್ತು ಇಲಾಖೆಯ ಅಧಿಕಾರಿಗಳಿಗೆ ಯಾವುದೇ ಕಿಮ್ಮತ್ತು ಕೊಡದೆ ಮನಬಂದಂತೆ ಹೀಯಾಳಿಸಿ, ಬೈದು ಅವಮಾನಿಸುತ್ತಿದ್ದರು.
ಆದ್ದರಿಂದ ಸದರಿ ಶಿಕ್ಷಕಿಯರನ್ನು ಅಮಾನತ್ತು ಮಾಡಿ ಶಾಲೆಯ ಮಕ್ಕಳ ಭವಿಷ್ಯ ಕಾಪಾಡಬೇಕೆಂದು ವಿನಂತಿಸಿರುವುದರಿಂದ ಪ್ರಾಥಮಿಕ ವಿಚಾರಣೆ ನಡೆಸಿ ಸದರಿ ಶಿಕ್ಷಕಿಯರು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಗಳು 2021 (ತಿದ್ದುಪಡಿ ನಿಯಮ) ಗಳನ್ನು ಹಾಗೂ ನಿಯಮ 1,2 ಮತ್ತು 3 ಉಲ್ಲಂಘಿಸಿ ನೌಕರನಲ್ಲದ ರೀತಿಯಲ್ಲಿ ವರ್ತಿಸಿರುತ್ತಾರೆ.
ಈ ವಿಷಯಗಳನ್ನು ಮುಖ್ಯ ಗುರುಗಳು, ಸಹ ಶಿಕ್ಷಕರು,ಎಸ್.ಡಿ.ಎಂ.ಸಿ. ಅಧ್ಯಕ್ಷರ ಹೇಳಿಕೆಯಿಂದ ಸಾಬಿತಾಗಿರುವ ವರದಿಯನ್ನು ಬಸವಕಲ್ಯಾಣದ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಸಿದ್ಧವೀರಯ್ಯಾ ರುದನೂರ ರವರು ಸಲ್ಲಿಸಿರುವ ಪ್ರಯುಕ್ತ ಶ್ರೀ ಸುರೇಶ ಹೆಚ್.ಜಿ. ಮಾನ್ಯ ಉಪ ನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೀದರ ರವರು ಆದೇಶ ಪತ್ರ ಸಂಖ್ಯೆ ಇತಿ:ಆಡಳಿತ:ದೂರು:ಶಿಸ್ತುಕ್ರಮ:58:2024-25:5098ದಿನಾಂಕ 03-11-2025 ರಂತೆ ಶಿಕ್ಷಕಿಯರಾದ ಶ್ರೀಮತಿ ಶ್ರೀದೇವಿ ರವರನ್ನು ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.
ಶ್ರೀಮತಿ ಶ್ರೀದೇವಿ ಶಿಕ್ಷಕಿಯರನ್ನು ಅಮಾನತ್ತುಗೊಳಿಸಿ ಶಾಲೆಯ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿದಕ್ಕೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೀದರ, ಮಾನ್ಯ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಬೀದರ ಹಾಗೂ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬಸವಕಲ್ಯಾಣರವರಿಗೆ ಸರ್ಕಾರಿ ಪ್ರೌಢ ಶಾಲೆ ಗೌರ ತಾ| ಬಸವಕಲ್ಯಾಣದ ಎಸ್.ಡಿ.ಎಂ.ಸಿ., ಗ್ರಾಮಸ್ಥರು ಹಾಗೂ ಪಾಲಕರಿಂದ ಅನಂತ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ



















