ಆಶೀರ್ವಚನ ನೀಡುತ್ತಿರುವ ಹುಬ್ಬಳ್ಳಿ ಹೊಸೂರ ನ ಚಂದ್ರಶೇಖರ ಮಹಾಸ್ವಾಮಿಗಳು.
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕಂದಗಲ್ಲ ಗ್ರಾಮದ ವಿಶ್ವ ಚೇತನ ಪಬ್ಲಿಕ್ ಸ್ಕೂಲ್ ಶಾಲೆಯ ” ಗುರುಮಹಾಂತ ರಂಗಮಂದಿರ ” ದಲ್ಲಿ ಶ್ರೀ ಗಳ ಆಶೀರ್ವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪಂಡಿತರು ವಾಗ್ಮಿಗಳು ಹತ್ತಾರು ಭಾಷೆಗಳನ್ನು ಕರಗತ ಮಾಡಿಕೊಂಡು ಹಲವಾರು ರಾಷ್ಟ್ರಗಳನ್ನು ಸುತ್ತಿರುವ ಪರಮಪೂಜ್ಯ ಜಗದ್ಗುರುಗಳಾದ ಪೂಜ್ಯಶ್ರೀ ಚಂದ್ರಶೇಖರ ಮಹಾಸ್ವಾಮಿಗಳು ಅಕ್ಕಿಹೊಂಡ, ಹೊಸೂರು, ಹುಬ್ಬಳ್ಳಿ ಇವರು ವಹಿಸಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಯನ್ನು ವಿದ್ಯೆ ಕಳಿಸಿದ ಗುರುಗಳನ್ನು ಸದಾ ಸ್ಮರಿಸುತ್ತಿರಬೇಕು ಅವರಿಗೆ ಗೌರವ ನೀಡಬೇಕು ಸದಾಕಾಲ ಅವರ ಸೇವೆಯೊಂದಿಗೆ ನಿಮ್ಮ ಜೀವನವನ್ನು ಸಾರ್ಥಕಪಡಿಸಿಕೊಳ್ಳುವುದರ ಜೊತೆಗೆ ಉತ್ತಮ ವಿದ್ಯೆ ಹೊಂದಿ ನಮ್ಮ ದೇಶದ ಉತ್ತಮ ಪ್ರಜೆಗಳಾಗಬೇಕು, ವಿದ್ಯೆಯಿಂದ ಜೀವನ ಸಮೃದ್ದಿ ಇದ್ದು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದು ಆಶೀರ್ವಚನ ನೀಡಿದರು. ಶಾಲೆಯ ಸಂಸ್ಥಾಪಕರಾದ ಸಂಗಣ್ಣ ಎಸ್ ಹವಾಲ್ದಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಗಳ ಪಾದಪೂಜೆಯನ್ನು ಕು. ಆದರ್ಶ ಹವಾಲ್ದಾರ್ ನೆರವೇರಿಸಿ ಆಶೀರ್ವಾದ ಪಡೆದರು. ಕಾರ್ಯಕ್ರಮದ ನಿರೂಪಣೆ ಗುರುಮಾತೆ ಕು. ಭವ್ಯಶ್ರೀ ಭಂಡಾರಿ. ಸ್ವಾಗತ ಗುರುಗಳಾದ ಕು. ಅಜಯ್ ಹೆಚ್. ವಂದನಾರ್ಪಣೆ ಗುರುಮಾತೆ ಕು. ನಂದಿನಿ ನಾಯ್ಕ ಮಾಡಿದರು ಶಾಲೆಯ ಎಲ್ಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು, ಪಾಲಕವೃಂದ, ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















