ಕಲಬುರಗಿ : ಚಿತ್ತಾಪುರದಲ್ಲಿ ರಾಷ್ಟ್ರಕೂಟರ ಕುಲದೇವತೆಯಾದ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ, ಪ್ರತಿವರ್ಷದಂತೆ ಈ ವರ್ಷವೂ ದೀಪೋತ್ಸವ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಕಂಬಳೇಶ್ವರ ಶ್ರೀಗಳು ಚಾಲನೆ ನೀಡಿ ಆಶೀರ್ವಚನ ನೀಡಿದರು.
ಅರ್ಚಕರಾದ ಶ್ರೀ ಶಿವಕುಮಾರ್ , ಭೀಮಣ್ಣ ಮತ್ತು ಶರಣು ಪೂಜಾರಿಯವರು ಶ್ರೀಗಳಿಗೆ ಸನ್ಮಾನಿಸಿ ಗೌರವಿಸಿದರು. ಸರ್ವ ಶಾಸ್ತ್ರಿಗಳು, ದುರ್ಗಾ ವಾಹಿನಿ, ಮತ್ತು ಮಾತೃ ಶಕ್ತಿ ಮಾತೆಯರು, ಬೋಲೆನಾಥ್ ಭಜನಾ ಮಂಡಳಿಯವರು ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ವರದಿ ಮಂಜುನಾಥ ಶಾಸ್ತ್ರಿ ,ಚಿತ್ತಾಪುರ



















