ಮಂಡ್ಯ: ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳ ಆಶಯದಂತೆ ಭಗವದ್ಗೀತೆ ಅಭಿಯಾನವನ್ನು ಮಂಡ್ಯದಲ್ಲಿ ಶಿರಸಿ ಕೂರ್ಸೆ ಕಾಂಪೌಂಡ್ ನ ಸದ್ಯ ಮಂಡ್ಯ ನಿವಾಸಿ ಮಂಜುನಾಥ ಹೆಗಡೆ ದಂಪತಿಗಳು ಸಂಘಟಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ, ಕೊಳಲು ಪತ್ರಿಕೆ ಸಂಪಾದಕ ಶ್ರೀಪಾದು ಚಂದ್ರಶೇಖರ, ಲಕ್ಷ್ಮೀನಾರಾಯಣ, ವಿಶ್ವನಾಥ, ಡಾಕ್ಟರ್ ಬಿ ಕೆ ಸುರೇಶ, ಶೈಲಜಾ ಚಂದ್ರಶೇಖರ್ ಹಾಗೂ ಇನ್ನೂರು ವಿದ್ಯಾರ್ಥಿ ಗಳು ಭಾಗವಹಿಸಿದ್ದರು.
ಇದೇ ಸಂಧರ್ಭದಲ್ಲಿ ಸಭಿಕರ ಸಮ್ಮುಖದಲ್ಲಿ ಗೀತಾ ಸಂದೇಶ ಉಪನ್ಯಾಸ ನೀಡಿದ ಹೆಗಡೆಕಟ್ಟಾ, ಓಣಿಕೈನ ವಿದ್ವಾನ್ ಗ ನಾ ಭಟ್ಟರನ್ನು ಗೌರವಿಸಲಾಯಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್



















