ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಚನಗಳು ವ್ಯಕ್ತಿತ್ವ ವಿಕಸಿತಗೊಳಿಸುತ್ತವೆ : ಎಂ. ಬಿ. ಒಂಟಿ

ಬಾಗಲಕೋಟೆ/ ಹುನಗುಂದ: ಅನೇಕ ಮಾನವೀಯ ಮೌಲ್ಯಗಳ ಆಗರವಾಗಿರುವ ಬಸವಾದಿ ಶರಣರ ವಚನಗಳು ವ್ಯಕ್ತಿತ್ವವನ್ನು ವಿಕಸಿತಗೊಳಿಸುತ್ತವೆ ಎಂದು ಹನುಗುಂದದ ಕನ್ನಡ ಪ್ರಾಧ್ಯಾಪಕ ಡಾ. ಮುರ್ತುಜಾ ಒಂಟಿ ಹೇಳಿದರು.

ಪಟ್ಟಣದ ಶ್ರೀ ಗಜ್ಜನ ಮಠದ ಪೂಜ್ಯಶ್ರೀ ಲಿಂ ಮ ನಿ ಪ ಮುರುಗೇಂದ್ರ ಮಹಾಸ್ವಾಮಿಗಳವರ 60ನೇ ಪುಣ್ಯ ಸ್ಮರಣೋತ್ಸವ ವಿಶೇಷ ಉಪನ್ಯಾಸ, ಹಾಗೂ ಮಹಾಶಿವ ಶರಣೆ ವರದಾನಿ ಗುಡ್ಡಾಪುರ ದಾನಮ್ಮ ದೇವಿಯ ಪುರಾಣ ಪ್ರವಚನದ ನಿಮಿತ್ಯ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ವಚನ ವಿಶ್ಲೇಷಣಾ ಕಾರ್ಯಕ್ರಮ ನ್ಯಾಯ ನಿರ್ಣಾಯಕರಾಗಿ ಆಗಮಿಸಿ ಮಾತನಾಡಿದ ಅವರು ಮಾತನಾಡಿ ಸಕಲ ಜೀವಿಗಳಿಗೆ ಒಳಿತನ್ನು ಬಯಸುವ ವಿಶ್ವವಿಶಾಲ ಭಾವನೆಯನ್ನು ಹೊಂದಿದ್ದ ಶರಣರ ಚಿಂತನೆಗಳು, ನುಡಿದಂತೆ ನಡೆದು ತೋರಿಸಿದ ಅವರ ಅದರ್ಶ ಎಲ್ಲರಿಗೂ ಮಾದರಿಯಾಗಬೇಕು ಎಂದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕು ಎಂದು ಅವರು ಅಭಿಪ್ರಾಯಪಟ್ಟರು.
ವಚನ ಸಾಹಿತ್ಯದಲ್ಲಿರುವ ಸಾತ್ವಿಕ ವಿಚಾರಗಳನ್ನು ತಾತ್ವಿಕ ಸಂದೇಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 12 ನೆಯ ಶತಮಾನದಲ್ಲಿ ಸಮಾನತೆಯ ಅಡಿಪಾಯದ ಮೇಲೆ ಕಲ್ಯಾಣ ಸಮಾಜವನ್ನು ನಿರ್ಮಿಸಿದ ಮಹಾನ್ ದಾರ್ಶನಿಕ ಬಸವಣ್ಣನವರ ದೂರದೃಷ್ಟಿ ಅವರ ಶ್ರೇಷ್ಠತೆಯ ಪ್ರತೀಕ ಎಂದರು. ವಚನಗಳು ಇಂದಿನ ಯುವಕರಿಗೆ ಸ್ಫೂರ್ತಿಯ ಸೆಲೆಗಳಾಗಿವೆ ಎಂದು ಅವರು ಹೇಳಿದರು. ಜಗತ್ತಿನಲ್ಲಿಯೇ ನಿಜವಾದ ಸಂಪತ್ತಾದ. ಜ್ಞಾನದ ಹಸಿವು ಇರುವ ವಿದ್ಯಾರ್ಥಿಗಳು ಮಾತ್ರ ದೊಡ್ಡ ಸಾಧನೆ ಮಾಡಬಲ್ಲರು ಎಂದು ಹೇಳಿದರು. ಇಂದಿನ ಮೊಬೈಲ್ ಯುಗದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮನಸ್ಸಿಗೆ ನೆಮ್ಮದಿ ನೀಡುವುದಲ್ಲದೇ ಅಂತರಂಗದಲ್ಲಿ ಅರಿವಿನ ಬೆಳಕು ಮೂಡಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ಥಳೀಯ ಪುರಸಭೆ ಸದಸ್ಯ ಮಹೇಶ ಬೆಳ್ಳಿ ಹಾಳ ಪ್ರಾಸ್ತಾವಿಕವಾಗಿ ಮಾತನಾಡಿ ಗಚ್ಚಿನ ಮಠದ ಅಮರೇಶ್ವರ ದೇವರು ಮುಂದಾಳತ್ವದಲ್ಲಿ ಅವರ ಶಾಖಾ ಮಠವಾದ ಮರಿದೇವರ ಮಠವನ್ನು 40 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಜೀರ್ಣೋದ್ಧಾರ ಗೊಳಿಸಿದ್ದಾರೆ ಮಠದ ಲೋಕಾರ್ಪಣೆ ಕಾರ್ಯಕ್ರಮವು ಕಾರ್ಯಕ್ರಮವು ಶೀಘ್ರದಲ್ಲೇ ನೆರವೇರಲಿದೆ ಭಕ್ತರ ಹೃದಯವನ್ನು ಗೆದ್ದ ಅಮರೇಶ್ವರ ದೇವರು ಎಂದು ಹೇಳಿದರು ಮೆಗಲುಪೇಟೆಯ ಹಿರಿಯರು, ಶ್ರೀ ಮಠದ ಅಮರೇಶ್ವರ ದೇವರನ್ನು ಸನ್ಮಾನಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮೇಗಲ್ ಪೇಟೆಯ ಹಿರಿಯರಾದ ಪರಸಪ್ಪ ಆಲೂರ ಬಸು ಹೂನ್ನಳ್ಳಿ ಮಲ್ಲಣ್ಣ ಲೆಕ್ಕಿಹಾಳ ಭರವಪ್ಪ ಬೆಣ್ಣಿ, ಶ್ರೀ ಮಠದ ವತಿಯಿಂದ ಸನ್ಮಾನಿಸಲಾಯಿತು ಪ್ರಾರ್ಥಿಸಿದರು, ಗವಾಯಿ ಹನುಮಂತ ಕುಮಾರ್ ಮೇಟಿ ಪ್ರಾರ್ಥಿಸಿದರು ಮಹೇಶ್ ಬೆಳ್ಳಿಹಾಳ ಸ್ವಾಗತಿಸಿದರು. ಡಾ. ಶಿವಗಂಗಾ ರಂಜನಿಗಿ ಶಿಕ್ಷಕಿ ಗೀತಾ ತಾರಿವಾಳ, ನಿರೂಪಿಸಿದರು, ಅರುಣೋದಯ ದುದ್ಗಿ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!