ಚಾಮರಾಜನಗರ :ಗುಂಡ್ಲುಪೇಟೆಯ ಮದ್ದಾನೆೇಶ್ವರ ಶಾಲೆಯ ಹಿಂಭಾಗದ ಸರ್ಕಾರಿಯ ರಸ್ತೆಯ ಮಧ್ಯ ಭಾಗದಲ್ಲಿ ಅಧಿಕೃತವಾಗಿ ಶೆಡ್ಡು ನಿರ್ಮಾಣವಾಗುತ್ತಿದ್ದು ಗುಂಡ್ಲುಪೇಟೆ ಸಾರ್ವಜನಿಕರು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸಂಘಟನೆಯ ಮುಖಂಡರೆಲ್ಲಾ ಒಂದು ದಿನದ ಮುಂಚೆ ಸಭೆ ಸೇರಿ ಗುರುವಾರ ಅಂದರೆ ದಿ. 4:12:2025 ರಂದು ಸಂಘಟನೆಯು ಉಗ್ರವಾದ ಹೋರಾಟವನ್ನು ಹಮ್ಮಿಕೊಂಡಿದ್ದು ಪ್ರತಿಭಟನೆ ಮಾಹಿತಿಯನ್ನು ತಿಳಿದ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಪ್ರತಿಭಟನೆ ಮುಂಚೆಯೇ ಬೆಳಗಿನ ಜಾವ ಜೆಸಿಬಿ ಮುಖಾಂತರ ತೆರವುಗೊಳಿಸಿದ್ದಾರೆ ಆದರೂ ಸಹ ಪುರಸಭೆ ಆವರಣದಲ್ಲಿ ಎಲ್ಲಾ ನಮ್ಮ ಸದಸ್ಯರು ಜಮಾಯಿಸಿದ ಕಾರಣ ಪುರಸಭೆಯ ಮುಖ್ಯ ಅಧಿಕಾರಿಗಳ ಕಚೇರಿ ಒಳಗಡೆ ಬಳಿ ವಾಗ್ವಾದ ನಡೆದು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದವರ ಮೇಲೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಯಿತು ಮುಂದೆ ಈಗಾಗಲೇ ಇರುವ ರೀತಿ ನೋಡಿಕೊಳ್ಳುತ್ತೇನೆ ದಯಮಾಡಿ ನಮಗೆ ಕೆಲಸ ಮಾಡಲು ಅನುವು ಮಾಡಿಕೊಡಿ ಮುಂದೆ ತುಂಬಾ ಎಚ್ಚರ ವಹಿಸುತ್ತೇನೆ ನಮ್ಮ ಪದಾಧಿಕಾರಿಗಳ ಮನವೊಲಿಸಿದರು.
ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರು ಶ್ರೀ ಬಸವರಾಜ್ ಎಂ ಪಡುಕೋಟೆಯವರು ಅನ್ಯಾಯದ ವಿರುದ್ಧ ಸದಾ ನಮ್ಮ ಸಂಘಟನೆಯಿಂದ ಧ್ವನಿ ಎತ್ತುತ್ತೇವೆ ಎಂದು ಹೇಳಿ ಬನ್ನಿ ಎಂದರು. ಇದು ನಮ್ಮ ಕರ್ನಾಟಕ ಸೇನೆಯ ಹೋರಾಟದ ಪ್ರತಿಫಲವಾಗಿ ಸಿಕ್ಕಂತ ಜಯ ಇದಾಗಿದೆ ಜಿಲ್ಲಾಧ್ಯಕ್ಷ ಸುರೇಶ್ ನಾಯಕ್ ತಾಲೂಕು ಅಧ್ಯಕ್ಷರು ಶ್ರೀನಿವಾಸ್ ನಾಯಕ್ ಗೌರವಾಧ್ಯಕ್ಷರು ಸೋಮೇಶ್ ಗುಂಡ್ಲುಪೇಟೆ ಟೌನ್ ಅಧ್ಯಕ್ಷರಾದಂತಹ ಎಟಿ ರಘು ತೆರ ಕಣಾoಬಿ ಹೋಬಳಿ ಪ್ರಧಾನ ಕಾರ್ಯದರ್ಶಿಗಳು ಬಂಗಾರ ಸ್ವಾಮಿ ವಿಶ್ವಕರ್ಮ ಕೋಡಳ್ಳಿ ಘಟಕದ ಅಧ್ಯಕ್ಷರು ಕೃಷ್ಣ ಹಾಗೂ ಮನು ಇನ್ನು ಹಲವು ಸದಸ್ಯರು ಭಾಗವಹಿಸಿದ್ದರು..
ವರದಿ ಗುಂಡ್ಲುಪೇಟೆ ಕುಮಾರ್



















