ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮಾಸ್ಟರ್ ರಾಜಣ್ಣ ನಿಧನರಾಗಿದ್ದಾರೆ. ಕೊಟ್ಟ ಗ್ರಾಮದ ಮಚ್ಚೆ ಕರಿಯಪ್ಪನವರ ಮಗನಾಗಿದ್ದ ರಾಜಣ್ಣ ಕೆಲವು ವರ್ಷಗಳ ನಂತರ ಶಿರಾ ನಗರಕ್ಕೆ ಸ್ಥಳಾಂತರಗೊಂಡರು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾಗಿ ನೇಮಕಗೊಂಡುರು ಹೊನ್ನಗೊಂಡನಹಳ್ಳಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜಣ್ಣರು ಸಮುದಾಯದ ಏಳಿಗೆ ಸಮುದಾಯದ ಬೆಳವಣಿಗೆ ಸಮುದಾಯದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಕೊಂಡರು ಇವರು ಮಾತಂಗ ನೌಕರರ ಬಳಗದಲ್ಲಿ ಸದಾ ಕಾಲ ಹಸನ್ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು ಸಮುದಾಯದ ನೌಕರರ ಬಳಗದ ಸ್ನೇಹಿತರು ಹಾಗೂ ಸಮುದಾಯದ ಯುವಕರಿಗೆ ಮಾರ್ಗದರ್ಶನ ಸಮುದಾಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಇನ್ನೂ ಮುಂತಾದ ಚಟುವಟಿಕೆಗಳಲ್ಲಿ ಮಾದಿಗ ಸಮುದಾಯದ ಏಳಿಗೆಗಾಗಿ ಮಾದಿಗ ಸಮುದಾಯದ ಅಭಿವೃದ್ಧಿಗಾಗಿ ಮಾದಿಗ ನೌಕರ ಬಳಗದ ಸ್ನೇಹಿತರಿಗೆ ಮಾರ್ಗದರ್ಶನ ಮಾದಿಗ ಸಮುದಾಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದ ರಾಜಣ್ಣರು ಕೆಲವು ವರ್ಷಗಳ ನಂತರ ಮಧುಗಿರಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಹೀಗೆ ಸಮುದಾಯದ ಒಡನಾಡಿಗಳೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದ ರಾಜಣ್ಣನವರು ಗುರುವಾರ ರಾತ್ರಿ ನಿಧನರಾಗಿದ್ದಾರೆ .ಇವರ ನಿಧನದಿಂದ ಮಾದಿಗ ಮಾತಂಗ ನೌಕರರ ಬಳಗ ಹಾಗೂ ಮಾದಿಗ ಸಮುದಾಯಕ್ಕೆ, ಸಂಬಂಧಿಕರು, ಸ್ನೇಹಿತರು ಎಲ್ಲರೂ ಸಹ ನಿಧನದಿಂದ ಸಮುದಾಯಕ್ಕೆ ತುಂಬಲಾಗದ ನಷ್ಟವಾಗಿದೆ . ಶಿರಾ ತಾಲೂಕಿನ ಮಾದಿಗ ಸಮುದಾಯ ಮಾದಿಗ ಮಾತಂಗ ನೌಕರರ ಬಳಗ ಮುಂತಾದ ಸ್ನೇಹಿತರು ಇವರ ನಿಧಾನಕ್ಕೆ ಸಂತಾಪ ಸೂಚಿಸಿದರು .
ವರದಿಗಾರರು ಕೊಟ್ಟ ಕರಿಯಣ್ಣ



















