ಹನೂರು: ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ಮಹಾಪರಿನಿರ್ವಾಣ ದಿನವನ್ನು ಹನೂರು ಪಟ್ಟಣದ ಅತಿಥಿ ಗೃಹದಲ್ಲಿ ಮುಂಬತ್ತಿ ಹಚ್ಚಿ ಮೌನಾಚರಣೆ ಮಾಡುವುದರ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು . ಇದೇ ಸಂದರ್ಭದಲ್ಲಿ ಶ್ರೀಮತಿ ಚೈತ್ರಾ ತಹಸೀಲ್ದಾರ್ ರವರು ಇಓ ಉಮೇಶ್ ರವರು ರಾಹುಲ್ ಕಂದಾಯ ಇಲಾಖೆ ಚಲವಾದಿ ಮಹಾಸಭಾಧ್ಯಕ್ಷರು ಬಸವರಾಜು ಪ್ರಜಾ ವಿಮೋಚನಾ ಚಳುವಳಿ ಅಧ್ಯಕ್ಷರು ಮಹಾಲಿಂಗ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ಗಳಾದ ಪ್ರಕಾಶ್ ರಮೇಶ್ ಮಧುಸೂದನ್ ಗುರುರಾಜು ಕಾವ್ಯ ಲಿಂಗರಾಜು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ವರದಿ ಉಸ್ಮಾನ್ ಖಾನ್



















