ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ನೆಲೆಸಿರುವ ಕರ್ನಾಟಕದ ರಾಜ್ಯದ ಕನಕದಾಸ ಭಕ್ತರ ಬಳಗದಿಂದ ಕನಕದಾಸರ 538ನೇ ಜಯಂತಿ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದ ಹಾಲುಮತ ಪೂಜ್ಯರಾದ ಸರೂರಿನ ಶ್ರೀ ಶ್ರೀ ಶಾಂತಮಯಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ ಅದೇ ರೀತಿಯಾಗಿ ಸುರೇಶ್ ಮಹರಾಜ್ ಹಾಗೂ ರಾಜ್ಯದ ರಾಜಕೀಯ ಮುಖಂಡರು ಮತ್ತು ತೆಲಂಗಾಣ ರಾಜ್ಯದ ನಮ್ಮ ಸಮಾಜದ ಎಂಎಲ್ಸಿಗಳಾದ ಎಗ್ಗೆ ಮಲ್ಲೇಶಮ ಹಾಗೂ ಶಾಸಕರು ಸಮಾಜದ ಅಧ್ಯಕ್ಷರು ಸಂಘಟನೆಯ ವಿವಿಧ ಪದಾಧಿಕಾರಿಗಳು ಆಗಮಿಸಲಿದ್ದಾರೆ ಹಾಗೆ ಕರ್ನಾಟಕದಿಂದ ಅಲ್ಲಿ ನಿಲ್ಲಿಸಿರುವ ಕನಕದಾಸರ ಭಕ್ತರ ಬಳಗವು ಪ್ರತಿ ವರ್ಷವೂ ಹೈದರಾಬಾದಿನಲ್ಲಿ ಸತತ 12ನೇ ವರ್ಷದಿಂದ ಕನಕದಾಸ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ ಆದರೆ ಪ್ರತಿವರ್ಷ ವಿಭಿನ್ನ ಸಂಸ್ಕೃತಿಕ ಕಾರ್ಯಕ್ರಮ ಡೊಳ್ಳು ಕುಣಿತ ಕನಕದಾಸರ ಕೀರ್ತನೆಗಳು ಕನಕದಾಸರ ಭಾವಚಿತ್ರದೊಂದಿಗೆ ಮೆರವಣಿಗೆ ಹಾಗೂ ವಿಶೇಷ ಕರ್ನಾಟಕದ ರಾಜಕೀಯ ವ್ಯಕ್ತಿಗಳಿಗೆ ಕನಕದಾಸರ ಚರಿತ್ರೆ ಕುರಿತು ಮಾತನಾಡುವ ಉಪನಾಶಕರಿಗೆ ಕರ್ನಾಟಕದಿಂದ ಕರೆದು ಅಲ್ಲಿ ನೆಲೆಸಿರುವ ಕರ್ನಾಟಕ ಕನಕದಾಸರ ಭಕ್ತರಿಗೆ ತಿಳಿಸುವಂತ ಕಾರ್ಯಕ್ರಮವನ್ನು ಮಾಡಿಕೊಂಡು ಬರುವಂತಹ ಎಲ್ಲಾ ಕನಕದಾಸರ ಭಕ್ತರ ಬಳಗದವರಿಗೆ ಈ ವರ್ಷ ಕರ್ನಾಟಕದಿಂದ ಮುಖ್ಯ ಅತಿಥಿಯಾಗಿ ಬೀದರ್ ನಿಂದ ಬಾಲಾಜಿ ಜಬಾಡೆ ಅವರಿಗೆ ಆಹ್ವಾನಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ಕೋರುತ್ತೇನೆ ಎಂದು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.



















