ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹಾಳಾಗಿರುವ ರಸ್ತೆ ಶೀಘ್ರ ದುರಸ್ತಿ ಮಾಡುವಂತೆ ಸ್ಥಳೀಯರ ಆಗ್ರಹ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಿಂದ ಮಾರುತಿನಗರ – ಗಂಗಾವತಿ – ರಾಯಚೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಶೀಘ್ರ ದುರಸ್ತಿ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ನೋಂದಾಯಿತ. ದೆಹಲಿ ರೈತ ಸಂಘದ ಜಿಲ್ಲಾಧ್ಯಕ್ಷರು ದೊಡ್ಡ ಬರಮಣ್ಣ ಮಾತನಾಡಿ ಡಣಾಪುರದಿಂದ ಮಾರುತಿ ನಗರಕ್ಕೆ ಹೋಗಬೇಕಾದರೆ ಸುಮಾರು 3 ಕಿ. ಮೀ. ಸಂಚಾರ ಮಾಡಬೇಕು ರಸ್ತೆ ಸಂಪೂರ್ಣ ಹಾಳಾಗಿದೆ ಈ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾದರೂ ಗುತ್ತಿಗೆದಾರ ಕಾಮಗಾರಿ ಪೂರ್ಣ ಮಾಡಿಲ್ಲ, ಕಲ್ಲು ಮಣ್ಣಿನಿಂದ ಕೂಡಿದ ಈ ರಸ್ತೆಯಲ್ಲಿ ಸಂಚಾರ ಮಾಡಲು ಹರ ಸಾಹಸ ಪಡುವಂತಾಗಿದೆ. ಹೆಬ್ಬಾಳ ಗ್ರಾಮದಿಂದ ಒಬ್ಬ ಗರ್ಭಿಣಿಯನ್ನು ಆಟೋದಲ್ಲಿ ಗಂಗಾವತಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾದರೆ ರಸ್ತೆಯಲ್ಲೇ ಹೆರಿಗೆಯಾದ ಘಟನೆ ಕೂಡಾ ನಡೆದಿದ್ದು, ರಸ್ತೆಯಲ್ಲಿ ಅನೇಕರು ಬಿದ್ದು ಗಾಯಗೊಂಡಿದ್ದಾರೆ ಹಿಂದೆಯೂ ಸಹ ಗುತ್ತಿಗೆದಾರನಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟರೂ ಸಹ ಯಾವುದೇ ಕ್ರಮ ವಹಿಸಿಲ್ಲ ಇನ್ನು ಎರಡು ಮೂರು ದಿನದಲ್ಲಿ ಈ ರಸ್ತೆಯನ್ನು ಸರಿ ಮಾಡದೆ ಹೋದರೆ ನಮ್ಮ ನಮ್ಮ ರೈತ ಸಂಘಟನೆಯವರು ಮತ್ತು ಸ್ಥಳೀಯರು ಸೇರಿಕೊಂಡು ರಸ್ತೆಯನ್ನು ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ
ಪಕೀರಪ್ಪ, ಟಿ ರಾಘಪ್ಪ , ವೀರನಾಗಪ್ಪ ,
ಸಣ್ಣೆಪ್ಪ ,ನಾಗಾರಾಜ ,ಈರಣ್ಣ ,ರಾಜೇಶ ,ಪ್ರಮುಖರಾದ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ವೆಂಕೋಬ ಪೂಜಾರ್, ತಾಯಪ್ಪ ಅಗ್ಗದ್, ನಾಗರಾಜ್ ಕುಲಕಣಿ, ರುದ್ರೇಶ್ ನಾಗನಹಳ್ಳಿ ಸೇರಿದಂತೆ ಇತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!