
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣ ಹಾಗೂ ಕಿಂತಾಲಕೇರಿ ಮಾರ್ಗವಾಗಿ ಹಾದುಹೋಗಿರುವ ಸಿಮೆಂಟ್ ರಸ್ತೆಯು ವಾಹನ ಸವಾರರಿಗೆ ಅಪಾಯಕ್ಕೆ ಅಹ್ವಾನ ನೀಡುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಳ್ಳದೆ ಇರುವುದು ವಿಪರ್ಯಾಸವೇ ಸರಿ ಕಣ್ಣಿದ್ದೂ ಕುರುಡಾಗಿ ಕುಳಿತಿರುವ ಅಧಿಕಾರಿಗಳು. ಜನರ ಹಾಗೂ ಸಂಘಟನೆಗಳ ಕಣ್ಣೊರೆಸುವ ನಾಟಕ 2022 ರಿಂದಲೂ ನಡೆಯುತ್ತಾ ಬಂದಿದ್ದು ಇನ್ನೂ ಅದಕ್ಕೆ ತಕ್ಕ ಪರಿಹಾರ ಕೊಡಲು ಸಾಧ್ಯವಾಗುತ್ತಿಲ್ಲ ಈ ಸಮಸ್ಯೆಗೆ ಪರಿಹಾರ ಯಾವಾಗ? ಯಾರದಾದರೂ ಪ್ರಾಣ ಪಕ್ಷಿ ಹಾರಿ ಹೋದ ಮೇಲಾ ಅಥವಾ ಅಧಿಕಾರಿಗಳ ಕೈ ಬೆಚ್ಚಗಾದ ಮೇಲಾ ಅಂತಹ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳುತ್ತಾ ಬಂದಿರುತ್ತದೆ. ಇಂದು ಅಂತಹದೇ ಮತ್ತೊಂದು ಘಟನೆ ಮರುಕಳಿಸಿದ್ದು ಬೈಕ್ ಸವಾರನೊಬ್ಬ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಇದಕ್ಕೆ ಹೊಣೆ ಯಾರು ದಿನನಿತ್ಯ ಬೈಕ್ ಸವಾರರು ಪಾದಚಾರಿಗಳು ಬಿದ್ದು ಗಾಯಗೊಳ್ಳುತ್ತಿದ್ದಾರೆ ಇನ್ನದರೂ ಇದಕ್ಕೆ ಶೀಘ್ರ ಪರಿಹಾರ ಕೊಡದಿದ್ದರೆ ಮುಂದಾಗುವ ಅನಾಹುತಗಳಿಗೆ ಸಂಬಂಧಪಟ್ಟ ಇಲಾಖೆಗಳು ಅವರ ಕುಟುಂಬದ ಸಂಪೂರ್ಣ ಜವಾಬ್ದಾರಿ ಹಾಗೂ ಕುಟುಂಬಕ್ಕೆ ಶಾಶ್ವತ ಪರಿಹಾರ ಕೊಡಬೇಕಾದೀತು.
ವರದಿ ವಿನಾಯಕ ಆಚಾರಿ



















