ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೋತಿ ಮುಕ್ತ ಗ್ರಾಮವನ್ನಾಗಿಸಲು ಕೈಜೋಡಿಸಿ : ಎಡಿಸಿ ಮಹಮ್ಮದ್ ಜುಬೇರ

ಬಳ್ಳಾರಿ / ಕಂಪ್ಲಿ: ತಾಲೂಕಿನ ಎಮ್ಮಿಗನೂರು ಗ್ರಾಮದ ಗ್ರಾಪಂಯ ಕಛೇರಿ ಸಭಾಂಗಣದಲ್ಲಿ ಬುಧವಾರ ಪಿಂಚಣಿ ಮತ್ತು ಇ-ಪೋತಿ ಆಂದೋಲನ ಕಾರ್ಯಕ್ರಮ ನಡೆಯಿತು. ಅ. ಪ. ರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ ಮಾತನಾಡಿ, ಪೌತಿ ಖಾತಾ ಆಂದೋಲನದ ಮೂಖೇನ ನಿಮ್ಮ ಜಮೀನಿನ ದಾಖಲಾತಿಗಳನ್ನು ಸರಿಪಡಿಸಿಕೊಳ್ಳಿ. ಎಮ್ಮಿಗನೂರು ಗ್ರಾಮ ಹೋಬಳಿಗೆ ಅರ್ಹತೆ ಹೊಂದಿದೆ. 361 ರೈತರ ಪಹಣಿಗಳು ಪೋತಿಯಲ್ಲಿದೆ. ಇದರಿಂದ ವ್ಯವಹಾರ ಸೇರಿದಂತೆ ನಾನಾ ಸೌಲಭ್ಯಗಳಿಗೆ ಅಡೆತಡೆಯಾಗಲಿದೆ. ವಾರಸುದಾರರ ಹೆಸರಿನಲ್ಲಿದ್ದರೆ, ಸರ್ಕಾರಿ ಸೌಲಭ್ಯಗಳು ದೊರಕಲು ಸಾಧ್ಯ. ಕಛೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ವಿಶೇಷ ಆಂದೋಲನ ಕೈಗೊಂಡಿದೆ. ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದು, ಇ-ಪೋತಿ ಮತ್ತು ಪಿಂಚಣಿಗಳ ಸಮಸ್ಯೆಗಳನ್ನು ಪರಿಹರಿಸಲಾಗುವುದು. ಸರ್ಕಾರ ಮನೆ ಬಾಗಿಲಿಗೆ ಬಂದಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜೀವಂತ ಸದಸ್ಯರಿಗೆ ಮಾತ್ರ ಸರ್ಕಾರಿ ಸೌಲಭ್ಯಗಳು ಬರಲಿವೆ. ವಂಶವೃಕ್ಷ ಮತ್ತು ಮರಣ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ. ಪೋತಿ ಮುಕ್ತ ಗ್ರಾಮವನ್ನಾಗಿಸಬೇಕು ಎಂದರು. ನಂತರ ತಹಶೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ, ಈಗಾಗಲೇ ಎಮ್ಮಿಗನೂರು ಗ್ರಾಮದಲ್ಲಿ 168 ಪೋತಿ ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ಇಂದಿನ ಆಂದೋಲನದಲ್ಲಿ ಹೊಸದಾಗಿ 51 ಪೋತಿ ಅರ್ಜಿಗಳು ಬಂದಿದೆ. 4ಜನ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ನೀಡಿದೆ. ಈಗ 3 ಹೊಸ ಅರ್ಜಿಗಳು ಬಂದಿವೆ. ಪ್ರತಿಯೊಂದು ಅರ್ಜಿಗಳನ್ನು ಹಂತ ಹಂತದಲ್ಲಿ ಆದಷ್ಟು ಬೇಗ ಪರಿಹರಿಸಲಾಗುವುದು ಎಂದರು. ತದ ನಂತರ ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪ್ರಮಾಣ ಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಆರ್‌ಐ ಜಗದೀಶ, ಪಿಡಿಒ ಶೇಷಗಿರಿ, ಮುಖಂಡರಾದ ಬರ‍್ಗಿ ಮಹೇಶಗೌಡ, ವೆಂಕಟರಾಜು, ವಿಎಗಳಾದ ಮಂಜುನಾಥ, ಮಹ್ಮದ್ ಹಬ್, ಮಂಜುನಾಥ ಸೇರಿದಂತೆ ಗ್ರಾಮದ ರೈತರು ಮತ್ತು ಮಹಿಳೆಯರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!