ಬಳ್ಳಾರಿ / ಕಂಪ್ಲಿ: ವಿದ್ಯಾರ್ಥಿಗಳು ನಿಷ್ಠೆ,ಶ್ರದ್ಧೆಯಿಂದ ವಿದ್ಯಾಬ್ಯಾಸ ಮಾಡಿದರೆ ಸಾಧನೆ ಮಾಡುವುದು ಅಸಾಧ್ಯವಲ್ಲ ಎಂದು ಖ್ಯಾತ ವೈದ್ಯ ಡಾ. ಕಾರ್ತಿಕಗೌಡ ಹೇಳಿದರು.
ಪಟ್ಟಣದ ವಿದ್ಯಾವರ್ಧಕ ಸಂಘದ ಭಾರತಿ ಶಿಶು ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಡಶಾಲೆ, ಶ್ರೀಮತಿ ಪ್ರೇಮಿಬಾಯಿ ದುರ್ಗಾಲಾಲಜಿ ಹುಂಡಿಯಾ ಆಂಗ್ಲಮಾಧ್ಯಮ ಪ್ರಾಥಮಿಕ ಹಾಗೂ ಬಾಲಕೀಯರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ಆತ್ಮೀಯ ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಶಿಕ್ಷಕರು ಉತ್ತಮ ಬುನಾದಿಯನ್ನು ಹಾಕಿದರೆ, ಮುಂದೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಪಡೆಯಲು ಸಾಧ್ಯ. ಎಂದರು. ಸಿಆರ್‌ಪಿ ರೇಣುಕಾರಾಧ್ಯ ಮಾತನಾಡಿ, ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಿದರೆ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಎಂದರು. ಸಂಸ್ಥೆಯ ಕಾರ್ಯದರ್ಶಿ ಜವೇರಿಲಾಲ್ ಬಾಗ್ರೇಚಾ ವರದಿ ಮಂಡಿಸಿದರೆ, ಅಧ್ಯಕ್ಷರಾದ ಕಲ್ಗುಡಿ ವಿಶ್ವನಾಥ ಶಾಲೆಯ ಸಾಧನೆಗಳನ್ನು ವಿವರಿಸಿದರು. ವಿದ್ಯಾರ್ಥಿಗಳಾದ ಜಿ.ಪ್ರಾರ್ಥನಾ, ಯಶಸ್.ಎಸ್. ಜೆ.ಐಶ್ವರ್ಯ, ಸಿ.ನಿರ್ಮಲಾ, ನಾಗಸಾಯಿ ಸುಪ್ರೀತಾ, ಹಾಗೂ ಡಿ.ಕಾವೇರಿ ಇವರಿಗೆ ನಗದು ಬಹುಮಾನ ನೀಡಿ ಗೌರವಿಸಿದರು.
ಡಾ.ಕಾರ್ತಿಕಗೌಡ, ಡಾಮಂಜುನಾಥ್, ಡಾ.ಭರತ್ ಪದ್ಮಶಾಲಿ, ರೋಶನ್ ಬಾಗ್ರೇಚ್, ಮಲ್ಲಿಕಾ ಹಿರೇಮಠ ಮತ್ತು ಎನ್.ಹಬೀಬ್ ರೆಹಮಾನ್ ಗೌರವಿಸಲಾಯಿತು.ಸಲಹೆಗಾರರಾದ ಅರವಿ ಬಸವನಗೌಡ, ಗಡಾದ್ ಸಿದ್ರಾಮಪ್ಪ, ಪದಾಧಿಕಾರಿಗಳಾದ ಎಸ್.ಅನಿಲ್ ಕುಮಾರ್, ಗಡಾದ್ ಪ್ರಸಾದ್, ಶಾಂತಿಲಾಲ್ ಸಿಂಘ್ವಿ, ಬಾಬುಲಾಲ್ ಜೈನ್, ಚೇತನ್ ಹುಂಡಿಯಾ, ಅಂಚೆ ಮೆಹಬೂಬ್, ರಾಕೇಶ್ ಬಾಗ್ರೇಚಾ, ಅಮೃತ್ ಲಾಲ್, ಉಗಾದಿ ಶಿವರಾಜ,ಮುಖ್ಯ ಶಿಕ್ಷಕರಾದ ಶ್ಯಾಮ ಸುಂದರರಾವ್, ಕೇಶವ, ವಿರೂಪಾಕ್ಷಪ್ಪ ಸಹಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















