ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೆಳಗಾವಿ ಚಲೋ | ವಿಕಲಚೇತನರ ರಾಜ್ಯ ಮಟ್ಟದ ಹೋರಾಟಕ್ಕೆ ಬೆಳಗಾವಿ ಸಜ್ಜು.

ಯಾದಗಿರಿ/ಗುರುಮಠಕಲ್ : ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಡಿಪಿ ಟಾಸ್ಕ್ ಫೋರ್ಸ್‌ನ ನೇತೃತ್ವದಲ್ಲಿ “ವಿಕಲಚೇತನರ ರಾಜ್ಯ ಮಟ್ಟದ ಹೋರಾಟ”ದ ಭಾಗವಾಗಿ ಆರೈಕೆದಾರ ಹಾಗೂ ವಿಕಲಚೇತನರ ಪ್ರಮುಖ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಡಿ.14 ರಂದು ಗುರುಮಠಕಲ್ ತಾಲೂಕಿನ ಆರ್. ಪಿ. ಡಿ ಟಾಸ್ಕ್ ಪೋರ್ಸ್ ಸದಸ್ಯರು ಪಟ್ಟಣದ ಶ್ರೀ ಮಹಾತ್ಮಾ ಬಸವೇಶ್ವರ ವೃತ್ತದಲ್ಲಿ ಮಹಾತ್ಮಾ ಬಸವೇಶ್ವರ ಭಾವಚಿತ್ರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಬೆಳಗಾವಿಗೆ ಪ್ರಯಾಣ ಬೆಳೆಸಿದರು.

ವಿಕಲಚೇತನರು ಹಾಗೂ ಅವರ ಆರೈಕೆದಾರರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಕಲ್ಯಾಣ ಯೋಜನೆ, ಹಕ್ಕೊತ್ತಾಯಗಳ ಬೇಡಿಕೆಗಾಗಿ ಪ್ರತಿಭಟನೆ ಜರುಗಲಿದೆ.

ಬೆಳಗಾವಿ ಚಲೋ ಪ್ರತಿಭಟನೆಗೆ ಹೊರಟಿರುವ ಅರ್.ಪಿ.ಡಿ ತಾಲೂಕ ಅಧ್ಯಕ್ಷ ಸಿದ್ದನ ಗೌಡ ನಜರಾಪುರ ಸದಸ್ಯರಾದ ಹಣಮಂತ, ರಾಜಲಿಂಗಪ್ಪ ಸಜ್ಜನ, ಶರಣಪ್ಪ, ರಾಮುಲು ಎಂ.ಟಿ ಪಲ್ಲಿ, ಗೋಪಾಲ ರೆಡ್ಡಿ ಸಾಂಬ್ರಾ, ಮಲ್ಲೇಶ್ ಸಾಂಬ್ರಾ ಇವರಿಗೆ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಶಿವಾನಂದ ಬೂದಿ, ತಾಲೂಕ ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಲಾಲಪ್ಪ ತಲಾರಿ ರಾಜ್ಯ ಸರಕಾರ ವಿಕಲಚೇತನರ ಬೇಡಿಕೆಗಳನ್ನು ಆದಷ್ಟು ಬೇಗ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ವಿವಿಧ ಬೇಡಿಕೆ ಈಡೇರಲಿ ಎಂದು ಶುಭ ಕೋರಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!