ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪಿ.ಎನ್. ಕೃಷ್ಣಮೂತಿ೯ ರವರಿಂದ ಸಮುದಾಯ ಭವನ ನಿರ್ಮಾಣ

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕು ಮಾವತ್ತೂರು ಅರಸಮ್ಮ ದೇವಸ್ಥಾನದ ಪಕ್ಕದಲ್ಲಿ ಪಿ.ಎನ್. ಕೃಷ್ಣಮೂತಿ೯ ರವರಿಂದ ಸಮುದಾಯ ಭವನ ನಿರ್ಮಾಣ.
ಕ್ಷೇತ್ರದ ಜನರ ಅನುಕೂಲಕಾಗಿ 70 ಲಕ್ಷಕ್ಕೂ ಹೆಚ್ಚು ವೆಚ್ಚದ ಭವ್ಯವಾದ ಎರಡು ಅಂತಸ್ತಿನ ಕಟ್ಟಡ ಎರಡು ತಿಂಗಳಲ್ಲಿ ಸಿದ್ಧತೆ.

ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಇತಿಹಾಸ ಪ್ರಸಿದ್ಧ ಹಾಗೂ ಭಾಗದ 32 ಹಳ್ಳಿಗಳ ಶಕ್ತಿ ದೇವತೆ ಮಾವತೂರು ಅರಸಮ್ಮ ದೇವಸ್ಥಾನದ ಬಳಿ ಪಿ.ಎನ್. ಕೃಷ್ಣಮೂತಿ೯ ಕುಟುಂಬದಿಂದ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಪಿ.ಎನ್. ಕೃಷ್ಣಮೂತಿ೯ ರವರು ಮಾತನಾಡಿ ಅರಸಮ್ಮ ದೇವಿ ನಮ್ಮ ಮನೆ ದೇವರು, ನಾವು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನಮ್ಮ ತಾಯಿಯವರು ನಮ್ಮ ಜಮೀನಿನಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನು ಇಟ್ಟು ಪೂಜೆ ಮಾಡುತ್ತಿದ್ದರು. ವರ್ಷದಲ್ಲಿ ಒಂದು ಬಾರಿ ಬಂದು ಮಾವತ್ತೂರು ಅರಸಮ್ಮ ದೇವಿಗೆ ನಮ್ಮ ತಂದೆ ತಾಯಿ ಜೊತೆಯಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಿದ್ದೆ. ಅರಸಮ್ಮ ದೇವಿ ಎಂದರೆ ನಮ್ಮ ತಂದೆ ತಾಯಿಗೆ ಇಷ್ಟವಾದ ದೇವರು. ಈ ಊರಿನ ಹಾಗೂ ಸುತ್ತಮುತ್ತಲಿರುವ ಜನರು ಕೂಡ ಬಹಳ ವಿಶ್ವಾಸದಿಂದ ನನ್ನ ಜೊತೆ ಇರುತ್ತಾರೆ. ಹಿಂದೆ ನಾನು ಜಿಲ್ಲಾ ಪಂಚಾಯಿತಿ ಸದಸ್ಯ ಆಗಿದ್ದಾಗ ಹಲವಾರು ಹಳ್ಳಿಗಳಲ್ಲಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು. ಈಗಲೂ ಕೂಡ ಶಾಶ್ವತವಾಗಿವೆ. ಇದೆ ದೇವಸ್ಥಾನದ ಕಾಂಪೌಂಡ್ ಕೂಡ ನಿರ್ಮಾಣ ಮಾಡಿದ್ದೆ. ಈ ಭಾಗದ ಜನರ ಹಾಗೂ ಭಕ್ತರ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣ ಮಾಡಿ ಎಂದು ಈ ಭಾಗದ ಜನರ ಬಹಳ ದಿನಗಳಿಂದ ಬೇಡಿಕೆಯಾಗಿತ್ತು. ಅದರಂತೆ ಸಮುದಾಯ ಭವನ ನಿರ್ಮಾಣ ಹಂತದಲ್ಲಿ ಇದ್ದು, ಕೊರಟಗೆರೆ ವಿಧಾನಸಭಾ ಕ್ಷೇತ್ರದ ಪ್ರತಿ 6 ಹೋಬಳಿಗಳಲ್ಲಿ ಎರಡು ಸಮುದಾಯ ಭವನವನ್ನು ಕಟ್ಟುವ ಹಾಗೂ ಬಡವರ ಅನುಕೂಲಕ್ಕಾಗಿ ಕೆಲಸವನ್ನು ಮಾಡಬೇಕೆಂದು ನನ್ನ ಕನಸು. 20 ವರ್ಷಗಳ ಕಾಲ ರಾಜಕೀಯ ಸೇವೆ.

ಅರಸಮ್ಮ ದೇವಿಯ ದೇವಸ್ಥಾನ ಬಳಿ ನೂತನ ಸಮುದಾಯ ಭವನದ ಮೇಲ್ಚಾವಣಿ ಪೂಜೆ ಪ್ರಾರಂಭ:

ಪಿ. ಎನ್. ಕೃಷ್ಣಮೂರ್ತಿ ಕುಟುಂಬದವರು ಮೊದಲು ಅರಸಮ್ಮ ದೇವಿಯ ಪೂಜೆ ಸಲ್ಲಿಸಿ. ನಂತರ ತಮ್ಮ ಸ್ವಂತ ಹಣದಿಂದ ಎಪ್ಪತ್ತು ಲಕ್ಷಕ್ಕೂ ಹೆಚ್ಚು ಹಣ ಬಳಸಿ ಸಮುದಾಯ ಭವನದ ಕೆಳ ಹಂತದ ಕೆಲಸ ಮುಗಿದಿದ್ದು. ನಂತರ ಮೇಲ್ಛಾವಣಿ ಪ್ರಾರಂಭಕ್ಕಾಗಿ ಕುಟುಂಬದವರಿಂದ ಪೂಜೆ ಸಲ್ಲಿಸಿ ಪ್ರಾರಂಭ ಮಾಡಲಾಗಿತ್ತು

ಸಮುದಾಯ ಭವನ ಕಟ್ಟಡಕ್ಕೆ ಕಾರ್ಯಕರ್ತರಾದ ಸಿದ್ದಲಿಂಗಯ್ಯ ಹೆಸರು.

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ವಾತಾವರಣ ಸೃಷ್ಟಿಯಾಗಿದ್ದು. ಪಿ.ಎನ್. ಕೃಷ್ಣಮೂರ್ತಿ ರವರಿಗೆ ಕೊರಟಗೆರೆ ವಿಧಾನಸಭಾ ಕ್ಷೇತ್ರ ಹೊಸದೇನಲ್ಲ. ಅವರು ಕಳೆದ 20 ವರ್ಷಗಳಿಂದ ಕ್ಷೇತ್ರದ ಜನರ ನಾಡಿ-ಮಿಡಿತ ಅರಿತಿದ್ದು. ಕೊರಟಗೆರೆ ಹಲವಾರು ಕಾರ್ಯಕ್ರಮಗಳು ಹಾಗೂ ದೊಡ್ಡ ಮಟ್ಟದ ದಸರಾ ಹಬ್ಬದ ಸಂದರ್ಭದಲ್ಲಿ ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರ ಮುಂದಿನ ದಿನಗಳಲ್ಲಿ ಜನರಲ್ ಆದರೆ ನಾನು ಚುನಾವಣೆ ನಿಲ್ಲುವುದು ಶತಸಿದ್ಧ ಎಂದು ಹೇಳಿದರು.

ವರದಿ. ಪ್ರಸನ್ನಕುಮಾರ್. ಎಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!