ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿಕಲಚೇತನರ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವಾಗಲಿ.

ಬೆಳಗಾವಿ ಚಲೋ ಪ್ರತಿಭಟನೆ ಯಶಸ್ವಿ | ವಿಕಲಚೇತನರ ಸಮಗ್ರ ಅಭಿವೃದ್ಧಿ ಹಾಗೂ ಸಬಲಿಕರಣ ಪ್ರಮುಖ ಹಕ್ಕೊತ್ತಾಯ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ.

ಬೆಳಗಾವಿ: ಕರ್ನಾಟಕ ರಾಜ್ಯ ವಿಕಲಚೇತನ ಆರ್.ಪಿ.ಡಿ ಟಾಸ್ಕ್ ಫೋರ್ಸ್ ಸಮಿತಿ ರಾಜ್ಯದ ಸಮಸ್ತ ವಿಕಲಚೇತನರ ಪರವಾಗಿ ಏಕಲಚೇತನರ ಸಮಗ್ರ ಅಭಿವೃದ್ಧಿ ಹಾಗೂ ಸಬಲಿಕರಣ ಪ್ರಮುಖ ಹಕ್ಕೊತ್ತಾಯ ಈಡೇರಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು,
ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್. ಮುನಿಯಪ್ಪ ಅವರಿಗೆ ನಿನ್ನೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ವಿಕಲಚೇತನರನ್ನು ಶೈಕ್ಷಣಿಕ, ಸಾಮಾಜಿಕ, ಅರ್ಥಿಕ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಕ್ಕು ಮತ್ತು ಕಾಯ್ದೆ ಇನ್ನಷ್ಟು ಬಲಿಷ್ಠಗೊಳಿಸುವಂತೆ ಮನವಿ ನೀಡಿದರು.

ವಿಕಲಚೇತನರ ಪ್ರಮುಖ ಹಕ್ಕೊತ್ತಾಯಗಳು :

  1. ಕಾಂಗ್ರೇಸ್ ಸರ್ಕಾರದ ರಾಷ್ಟ್ರೀಯ ಪ್ರಣಾಳಿಕೆಯಲ್ಲಿ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ನಾಮನಿರ್ದೇಶನ ಸದಸ್ಯರನ್ನಾಗಿ ನೇಮಕ ಮಾಡಬೇಕು.
  2. ಕರ್ನಾಟಕ ರಾಜ್ಯದಲ್ಲಿ ವಿಕಲಚೇತನರ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿಯನ್ನು ಸ್ಥಾಪನೆ ಮಾಡಬೇಕು.
  3. ಕಳೆದ 5 ವರ್ಷಗಳಿಂದ 15 ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇಕಡಾ 5 ರ ಅನುದಾನವನ್ನು ಸಮುದಾಯ ಆಧಾರಿತ ಕಾರ್ಯಕ್ರಮಗಳಿಗೆ ಬಳಕೆ.
  4. ಸರ್ಕಾರಿಂದ ಶೇ. 75 ಕ್ಕಿಂತಲೂ ಹೆಚ್ಚಿನ ವಿಕಲಚೇತನರಿಗೆ ಜೀವಿತ ಕಾಲದಲ್ಲಿ ಒಮ್ಮೆಯಾದರೂ ಯಂತ್ರಚಾಲಿತ ವಾಹನ ನೀಡಬೇಕು.
  5. ವಿವಿಧ ಇಲಾಖೆಗಳಲ್ಲಿ ವಿಕಲಚೇತನರ ಪ್ರತ್ಯೇಕ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು.
  6. ಮಾನಸಿಕ ಅಸ್ವಸ್ಥರಿಗೆ ಪ್ರತಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ಹಾಗೂ ಅಪ್ತ ಸಮಾಲೋಚನೆ ಒದಗಿಸಬೇಕು. ಮತ್ತು ಇತರೆ ವಿಕಲಚೇತನರಿಗೆ ಸಿಗುವ ಎಲ್ಲಾ ಸೌಲಭ್ಯಗಳು ಮಾನಸಿಕ ಅಸ್ವಸ್ಥರಿಗೂ ಸಿಗುವಂತೆ ಕ್ರಮ ವಹಿಸಬೇಕು.
  7. ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮಾತು ಮತ್ತು ಶ್ರವಣ ದೋಷವುಳ್ಳ ವಿಕಲಚೇತನರ ವಿಶೇಷ ಶಾಲೆಗಳನ್ನು ಸ್ಥಾಪನೆ ಮಾಡಬೇಕು. ಮತ್ತು ಈಗಿರುವ ಎಲ್ಲಾ ಸರ್ಕಾರಿ ಸಾಮಾನ್ಯ ಶಾಲೆಗಳಲ್ಲಿ ವಿಶೇಷ ಶಿಕ್ಷಕರನ್ನು ನೇಮಕಾತಿ ಮಾಡುವ ಜೊತೆಗೆ ಎಲ್ಲಾ ರೀತಿಯ ಸುಲಭ ಲಭ್ಯತೆಯ ವ್ಯವಸ್ಥೆಯನ್ನು ಕಟ್ಟಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು.

ಸುಮಾರು 15 ಪ್ರಮುಖ ಬೇಡಿಕೆಗಳಿರುವ ಮನವಿಯನ್ನು ರಾಜ್ಯಧ್ಯಕ್ಷ ಸುರೇಶ್ ಬಂಡಾರಿ ನೇತೃತ್ವದಲ್ಲಿ ನೀಡಲಾಯಿತು, ಈ ಸಂದರ್ಭದಲ್ಲಿ ಶ್ರೀಮತಿ ಎಂ. ವಿಜಯಲಕ್ಷ್ಮೀ ,ಗಿರೀಶ, ಮಹ್ಮದ್ ಜಾಫರ್ ,ಕು, ಉಮಾ ನಾಯಕ್ , ಶ್ರೀ ಹನುಮಂತರಾಯ ಕುಳಗೇರಿ, ವೀರುಪಾಕ್ಷಯ್ಯ ಕಾಳಾಪದ, ಶ್ರೀ ಮೋದಿನಪಾಲಾ ಜಾಗೀರದಾರ, ಶ್ರೀಮತಿ ಗಾಯತ್ರಿ ಎಸ್ ಸುತಾರ್, ಸಿದ್ದನ್ ಗೌಡ ರಾಜ್ಯದ ವಿವಿಧೆಡೆಯಿಂದ ಬಂದಿರುವ ಅರ್.ಪಿ.ಡಿ ಟಾಸ್ಕ್ ಫೋರ್ಸ್ ಸದಸ್ಯರು ಹಾಜರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!