ಬಳ್ಳಾರಿ / ಕಂಪ್ಲಿ : ವರ್ಷಕ್ಕೊಮ್ಮೆ ಚಳಿಗಾಲದಲ್ಲಿ ಮಾತ್ರ ನೆನಪಿಗೆ ಬರುವ 443 ಕೋಟಿ ರೂ. ವೆಚ್ಚದ ಸುವರ್ಣ ಸೌಧವೀಗ ರಾಜಕೀಯ ಶಕ್ತಿ ಕೇಂದ್ರದ ಜತೆಗೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸದ ಕೇಂದ್ರವಾಗಿ ಬದಲಾಗಿದೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಂಪ್ಲಿಯ ರಾಜ್ಯಶಾಸ್ತ್ರದ ವಿಭಾಗದಿಂದ ಎರಡು ದಿನಗಳ (ದಿನಾಂಕ 15, 16 ನೇ ಡಿಸೆಂಬರ್ 25 ರ ಶೈಕ್ಷಣಿಕ ಪ್ರವಾಸವನ್ನು ಕೈಗೊಳ್ಳಲಾಯಿತು. ಈ ಪ್ರವಾಸದಲ್ಲಿ ಕೊಪ್ಪಳ, ಗದಗ, ಹುಬ್ಬಳ್ಳಿ ಮತ್ತು ಬೆಳಗಾವಿಯ ಪ್ರವಾಸಿ ತಾಣಗಳನ್ನು ವೀಕ್ಷಿಸಲಾಯಿತು. ಈ ಪ್ರವಾಸದ ಮುಖ್ಯ ಕೇಂದ್ರ ಬಿಂದುವಾಗಿದ್ದ ಸುವರ್ಣಸೌಧದ ವಿಧಾನಸಭೆಯ ಚಳಿಗಾಲದ ಅಧಿವೇಶನವನ್ನು ವಿದ್ಯಾರ್ಥಿಗಳು ನೇರವಾಗಿ ವೀಕ್ಷಿಸಿ ಸಂಭ್ರಮಿಸಿದರು.
ವಿಶೇಷ ಶಿಲ್ಪ ವಿನ್ಯಾಸದಲ್ಲಿರುವ ಸೌಧದ ವಿಶಾಲ ಆವರಣ, ವಿಧಾನಸಭೆ (ಕೆಳಮನೆ), ವಿಧಾನ ಪರಿಷತ್ (ಮೇಲ್ಮನೆ) ಸಭಾಂಗಣ, ಎರಡೂ ಸದನದ ವೀಕ್ಷಕರ ಗ್ಯಾಲರಿ, ಸೆಂಟ್ರಲ್ ಹಾಲ್, ಬಾಂಕ್ವೆಟ್ ಹಾಲ್, ಸೌಧದ ಮುಖ್ಯ ಪ್ರವೇಶ ದ್ವಾರ, ಸಚಿವಾಲಯದ ಕಚೇರಿಗಳನ್ನು ವೀಕ್ಷಿಸಬಹುದು. ಶೈಕ್ಷಣಿಕ ಪಠ್ಯದಲ್ಲಿ ಬರುವ ಮೇಲ್ಮನೆ, ಕೆಳಮನೆ, ಜಂಟಿ ಸದನ, ಸಭಾಪತಿ, ಸಭಾಧ್ಯಕ್ಷ, ಮುಖ್ಯಮಂತ್ರಿ, ಸಚಿವರು, ಶಾಸಕರು ಮತ್ತು ಸೌಧದೊಳಗೆ ಭದ್ರತಾ ವ್ಯವಸ್ಥೆ ಕೈಗೊಳ್ಳುವ ಪ್ರಾಯೋಗಿಕವಾಗಿ ತಿಳಿದುಕೊಂಡರು.
ಇದಕ್ಕೆ ಸಹಕರಿಸಿದ ಮಾನ್ಯ ಶಾಸಕರಾದ ಶ್ರೀ ಜೆ.ಎನ್.ಗಣೇಶ ಅವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಸಿದರು. ಮಾನ್ಯ ಶಾಸಕರಿಗೆ ಕಾಲೇಜು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳನ್ನು ತಿಳಿಸಿದರು. ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ ರಾಜ್ಯಶಾಸ್ತ್ರದ ಮುಖ್ಯಸ್ಥರಾದ ರಾಜ್ಮಾ ಟಿ. ಎಮ್. ಆರ್. ಅವರಿಗೆ ಹಾಗೂ ಈ ಪ್ರವಾಸದ ಯಶಸ್ಸಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಕಾರಣಕರ್ತರಾದ ಪ್ರತಿಯೊಬ್ಬರಿಗೂ ಈ ಮೂಲಕ ಮನಃಪೂರ್ವಕವಾಗಿ ಧನ್ಯವಾದಗಳು ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಶ್ರೀನಿವಾಸ ರೆಡ್ಡಿ ಅವರು ಹರ್ಷ ವ್ಯಕ್ತಪಡಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















