
ದೆಹಲಿ: ಮನುಷ್ಯನ ಸ್ವಭಾವಗಳಲ್ಲಿ ಅನೇಕ ಪ್ರಬೇಧಗಳಿವೆ ಅವುಗಳಲ್ಲಿ ಸ್ವಾರ್ಥ ಮನೋಭಾವವು ಯಾವುದೇ ಸಂಘಟನೆಯ ಮುಂಚೂಣಿಗೆ ಮಾರಕವಾಗಿದೆ ಹಾಗಾಗಿ ನಾವು ಸ್ವಾರ್ಥ ಬಿಟ್ಟು ಸಂಘಟಿತರಾಗಿ ನಮ್ಮ ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ದೆಹಲಿಯಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ದೇಶದ ವಿವಿಧ ಭಾಗಗಳಿಂದ ಆಗಮಿಸಿದ ವಿಕಲಚೇತನರು ತಮ್ಮಲ್ಲಿರುವ ಮಹತ್ವಾಕಾಂಕ್ಷೆಯ ಪ್ರಭಲ ಸೂಚಕರಾಗಿ ಇಂದು ಭಾಗವಹಿಸಿದ್ದು ನಮ್ಮ ಸಂಘಟನೆಯಲ್ಲಿ ಸೇರಿರುವ ಇಪ್ಪತ್ತೆರಡು ಸಾವಿರ ಸದಸ್ಯರಲ್ಲಿ 86 ಕ್ಕೂ ಹೆಚ್ಚು ಮಂದಿ ಅಜೀವ ಸದಸ್ಯರಾಗಿ ಪ್ರೋತ್ಸಾಹ ನೀಡಿರುವುದು ವಿಕಲಚೇತನರಲ್ಲಿರುವ ಶೋಷಣೆ ಮುಕ್ತ ವಾತಾವರಣದ ಮನೋಭಾವದ ಹೋರಾಟದ ಕಿಡಿಯಾಗಿದ್ದು ನಾವು ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ ಎಂದು ಅವರು ಕರೆ ನೀಡಿದರು. ಸಂಘಟನೆಯ ಉಪಾಧ್ಯಕ್ಷ ಶ್ರೀ ರಾಜಕುಮಾರ ಬಿರಾದಾರ ಅವರು ಸರ್ವ ಸದಸ್ಯರನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀ ವಿಕ್ರಮ ಶ್ರೀವಾಸ್ತವ ಅವರು ವಾರ್ಷಿಕ ವರದಿಯನ್ನು ಓದಿ ಹೇಳಿದರು.
ಶ್ರೀ ಮಧುರ ಮಿಶ್ರ ಅವರು ವಾರ್ಷಿಕ ಲೆಕ್ಕ ಪತ್ರಗಳನ್ನು ಕೋಶಾಧಿಕಾರಿಯ ಪರವಾಗಿ ಸಭೆಗೆ ಮಂಡಿಸಿದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಹರಿಯಾಣ ರಾಜ್ಯದ ವಿಶ್ರಾಂತ ವಿಕಲಚೇತನರ ಆಯುಕ್ತ ಶ್ರೀ ರಾಜಕುಮಾರ್ ಮಕ್ಕಾದ ಅವರು ವಿಕಲಚೇತನರಲ್ಲಿರುವ ವಿವಿಧ ಜಾಗೃತಿ ಮನೋಭಾವಗಳನ್ನು ವಿಕಲಚೇತನರು ಸಲ್ಲಿಸಿರುವ ಮನವಿ ಪ್ರಕಾರ ವಿವರಿಸುತ್ತಾ ವಿಕಲಚೇತನರಿಗೆ ಆಯಾಯ ಸರಕಾರಗಳು ನ್ಯಾಯ ಒದಗಿಸುವಲ್ಲಿ ಸಹಕರಿಸುವ ಅಗತ್ಯವಿದೆ ಎಂದರಲ್ಲದೆ ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವೇ ಎಂದು ಇದೇ ಸಂಧರ್ಭದಲ್ಲಿ ಪ್ರಶ್ನಿಸಿದರು.
ಸಂಸ್ಥೆಯ ನಿರ್ದೇಶಕರಲ್ಲೊಬ್ಬರಾದ ಶ್ರೀ ಪ್ರವೀಣ ಬಾಸಿನ್ ಅವರು ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.




















