ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯುವಕರಿಗೆ ಹಿರಿಯರ ಕಿವಿ ಮಾತು

ಯುವಕರು ಸ್ವಾಮಿ ವಿವೇಕಾನಂದರ ಆದರ್ಶಗಳಂತೆ ಶಿಸ್ತು, ಗುರಿ, ಧೈರ್ಯ, ಮತ್ತು ದೇಶಪ್ರೇಮದೊಂದಿಗೆ ಶ್ರಮವಹಿಸಬೇಕು, ಸೋಮಾರಿತನ ಬಿಟ್ಟು, ಸ್ವಾವಲಂಬಿಗಳಾಗಿ, ಜಾಗೃತಿ ಮೂಡಿಸಬೇಕು, ಮತ್ತು ಕೋಪ ನಿಯಂತ್ರಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಅವರು ಕಲಿಯುವ ಆಸಕ್ತಿ, ಸಕಾರಾತ್ಮಕ ಮನೋಭಾವ, ಮತ್ತು ಸಮಾಜದ ಬಗ್ಗೆ ಚಿಂತನೆ ಹೊಂದಿರಬೇಕು.

ದೊಡ್ಡವರಿಂದ ಕಲಿಯುವುದು ಸಾಕಷ್ಟಿರುತ್ತದೆ, ಆರೋಗ್ಯ ನೆಮ್ಮದಿ ಜೀವನ, ವೈಯಕ್ತಿಕ ಬದುಕು, ಯಶಸ್ಸು, ಸಂಬಂಧ ಇವುಗಳಿಗೆ ಅವರು ನೀಡುವ ಬೆಲೆಯನ್ನು ನಾವೆಲ್ಲಾ ಕಲಿಯಬೇಕಿದೆ. ಇಲ್ಲಿ ಯುವ ಜನತೆಗೆ ಆರೋಗ್ಯಯುತ ಮತ್ತು ಖುಷಿ ಜೀವನ ನಡೆಸಲು 40 ವರ್ಷ ಮೇಲ್ಪಟ್ಟ ವಯಸ್ಕರರು ಮತ್ತು ವಯಸ್ಸಾದವರು ತಮ್ಮ ಅನುಭವದ ಮೇರೆಗೆ ಮತ್ತು ಅವರು ನಡೆಸಿದ ಜೀವನದಲ್ಲಿ ಸಾಧಿಸಿದ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಉತ್ತಮ ಆಹಾರ

ಉತ್ತಮ ಆಹಾರ ಆರೋಗ್ಯಯುತ ಜೀವನದ ಗುಟ್ಟು ಅಂತಾರೆ ದೊಡ್ಡೋರು. ಈ ಇನ್‌ಸ್ಟಂಟ್‌ ಫುಡ್‌ಗಳನ್ನು ನೋಡಿದರೆ ಮೂಗು ಮುರಿಯುವ ಇವರು ಸತ್ವ ತುಂಬಿದ ಆಹಾರವೇ ಆರೋಗ್ಯದ ಕೀಲಿ ಎಂದು ನಂಬಿದ್ದಾರೆ. ಗುಣಮಟ್ಟದ ಆಹಾರ ನಮ್ಮಲ್ಲಿ ದಿನವೀಡಿ ಚೈತನ್ಯ, ಉತ್ಸಾಹ ತುಂಬಿಸಲು ಸಹಾಯ ಮಾಡುತ್ತದೆ.

ಮೌಖಿಕ ಆರೈಕೆ

ಕಡೆಗಾಲದವರೆಗೂ ಆರೋಗ್ಯ ಚೆನ್ನಾಗಿರಬೇಕು ಅಂದರೆ ಮೌಖಿಕ ಆರೈಕೆ ಮುಖ್ಯ ಎನ್ನುತ್ತಾರೆ ವಯಸ್ಸಾದವರು. ತಮ್ಮ ಒಸಡುಗಳನ್ನು ತೊಳೆಯಲು ಉಪ್ಪು ನೀರನ್ನು ಮತ್ತು ಮೃದುವಾದ ಟೂತ್‌ಪೇಸ್ಟ್ ಮತ್ತು ಮೃದುವಾದ ಬ್ರಷ್ ಅನ್ನು ಬಳಸುವುದರಿಂದ ಹಿಡಿದು, ದಿನಕ್ಕೆ ಎರಡು ಬಾರಿ ಬ್ರಷ್‌ ಮಾಡುವವರೆಗೂ ತಮ್ಮ ಓರಲ್‌ ಹೆಲ್ತ್‌ ಬಗ್ಗೆ ಕಾಳಜಿ ವಹಿಸುತ್ತಾರಂತೆ ಹಿರಿಯರು.

ವ್ಯಾಯಾಮ

ವಯಸ್ಸಾದರೂ ಲಘು ವ್ಯಾಯಾಮ ಮಾಡುವ ಕೆಲ ವೃದ್ಧರು ವಯಸ್ಕರರಿಗೆ ಹೇಳುತ್ತಾರೆ. ಇದು ಹಿಂದಿನಿಂದಲೂ ಅನುಸರಿಸಿರುವ ಆರೋಗ್ಯದ ಸಿಕ್ರೇಟ್‌ ಎಂದಿದ್ದಾರೆ. ದಿನಕ್ಕೆ ಇಂತಿಷ್ಟು ಸಮಯ ದೇಹ ದಂಡಿಸಬೇಕು, ಇದು ನಮಗೆ ಹುರುಪು ನೀಡುವುದರ ಜೊತೆಗೆ ಕಾಯಿಲೆಗಳಿಂದ ದೂರ ಮಾಡುತ್ತದೆ ಎನ್ನುತ್ತಾರೆ.

ಯುವಕರ ಪ್ರಮುಖ ಗುಣಗಳು:

ಶಿಸ್ತು ಮತ್ತು ಪರಿಶ್ರಮ : ಸೋಮಾರಿತನವನ್ನು ಬಿಟ್ಟು ಶಿಸ್ತಿನಿಂದ ಕೆಲಸ ಮಾಡಬೇಕು, ಗುರಿ ಮುಟ್ಟುವವರೆಗೆ ನಿಲ್ಲಬಾರದು.

ಸ್ವಾಮಿ ವಿವೇಕಾನಂದರ ಆದರ್ಶಗಳು: “ಏಳಿ, ಎಚ್ಚರಗೊಳ್ಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ” ಎಂಬ ಸಂದೇಶವನ್ನು ಪಾಲಿಸಬೇಕು. ಪರಾವಲಂಬಿಗಳಾಗದೆ, ತಮ್ಮ ಬದುಕಿಗೆ ತಾವೇ ಶಿಲ್ಪಿಗಳಾಗಿರಬೇಕು.

ಜಾಗೃತಿ ಮತ್ತು ಜವಾಬ್ದಾರಿ: ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತರಾಗಿರಬೇಕು, ಭ್ರಷ್ಟಾಚಾರದಂತಹ ಪಿಡುಗಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು.
ಕೋಪ ನಿಯಂತ್ರಣ: ಕೋಪದ ಕೈಗೆ ಬುದ್ಧಿ ಕೊಟ್ಟು ಭವಿಷ್ಯ ಹಾಳು ಮಾಡಿಕೊಳ್ಳಬಾರದು, ನಿರ್ಧಾರಗಳನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಬೇಕು.

ಆರ್ಥಿಕ ಸ್ವಾತಂತ್ರ್ಯ: ಕೌಶಲ್ಯಗಳನ್ನು ಕಲಿಯುವ ಮೂಲಕ ಮತ್ತು ಉದ್ಯಮಶೀಲರಾಗುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು.

ನಾಗರಿಕ ಜವಾಬ್ದಾರಿ: ದೇಶದ ಅಭಿವೃದ್ಧಿಯಲ್ಲಿ ಭಾಗವಹಿಸಬೇಕು ಮತ್ತು ದೇಶದ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡಬೇಕು.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಯುವಕರು ದೇಶದ ಪ್ರಗತಿಗೆ ಶ್ರಮಿಸುವ, ಜ್ಞಾನಾರ್ಜನೆ ಮಾಡುವ, ಮತ್ತು ಸಮಾಜಕ್ಕೆ ಕೊಡುಗೆ ನೀಡುವ ಶಕ್ತಿಯಾಗಿರಬೇಕು.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ 45 ಸೆಕೆಂಡುಗಳಿಗೊಮ್ಮೆ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಾವೆಲ್ಲರೂ ಕೈಜೋಡಿಸಿ, ಖಿನ್ನತೆ, ಉದ್ರಿಕ್ತತೆ ಮತ್ತು ಆತ್ಮಹತ್ಯಾ ಪ್ರವೃತ್ತಿಯಿಂದ ಬಳಲುತ್ತಿರುವವರ ಬಳಿ ತಲುಪಿ, ಅವರನ್ನು ಗುಣಮುಖಗೊಳಿಸಲು ಸಹಾಯ ಮಾಡಬೇಕು. ಧ್ಯಾನ, ಸುದರ್ಶನ ಕ್ರಿಯೆ, ಉಸಿರಾಟದ ಪ್ರಕ್ರಿಯೆಗಳು ಈ ಯುದ್ಧದಲ್ಲಿ ನಮಗೆ ಸಹಾಯಕವಾಗಿ ನಿಲ್ಲಬಲ್ಲವು. ಉತ್ತಮ ಮಾನಸಿಕ ಆರೋಗ್ಯಕ್ಕೆ ಇದು ಅತ್ಯಾವಶ್ಯಕ. ಉತ್ತಮ ಮಾನಸಿಕ ಆರೋಗ್ಯವು ಪ್ರತಿಯೊಬ್ಬ ವ್ಯಕ್ತಿಯ, ಪ್ರತಿಯೊಬ್ಬ ಯುವಕರ ಜನ್ಮಸಿದ್ಧ ಹಕ್ಕು.

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!