ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಳ್ಳು ಅಮವಾಸ್ಯೆ ನಿಮಿತ್ಯ ಹೊಲದಲ್ಲಿನ ಬನ್ನಿಮರಕ್ಕೆ ವಿಶೇಷ ಪೂಜೆ

ಗದಗ ಜಿಲ್ಲೆಯ ಗದಗ ತಾಲೂಕಿನ ಕದಡಿಯಲ್ಲಿ ಹಿಂಗಾರು ಪೈರುಗಳ ನಡುವೆ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿ ” ಹುಲ್ಲಲಿಗೋ ಚಲಾಂಮ್ರಿಗೋ ” ಎನ್ನುತ್ತಾ ಭೂಮಿ ತಾಯಿಗೆ ಚರಗ ಚೆಲ್ಲುವ ಮೂಲಕ ರೈತಾಪಿ ಕುಟುಂಬದವರು ಎಳ್ಳು ಅಮವಾಸ್ಯೆಯನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಿದರು.
ಮನೆಯಲ್ಲಿ ತಯಾರಿಸಿದ ಉಂಡಗಡಬು, ಪುಂಡಿ ಪಲ್ಯೆ, ಕುಚ್ಚಿದ ಮೆಣಸಿನಕಾಯಿ ಪಲ್ಲೆ, ಎಳ್ಳು ಹಚ್ಚಿದ ರೊಟ್ಟಿ, ಸಜ್ಜೆ, ಜೋಳದ ರೊಟ್ಟಿ ಸೇರಿದಂತೆ ನಾನಾ ಬಗೆಯ ಚಟ್ನಿ, ಮಡಿಕೆಕಾಳು, ಹೆಸರ ಕಾಳು, ಎಣ್ಣೆಗಾಯಿ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಮೊಸರು, ಕರಿದ ಕಡಬು, ಹಪ್ಪಳ, ಸಂಡಿಗೆ, ಮಿರ್ಚಿ, ಬಜ್ಜಿ, ಉಪ್ಪಿನಕಾಯಿ ಸೇರಿದಂತೆ ನಾನಾ ತರಹದ ಅಡುಗೆಗಳನ್ನು ಹಿಂದಿನ ದಿನ ರೈತಾಪಿ ಮಹಿಳೆಯರು ರಾತ್ರಿಯಲ್ಲಾ ತಯಾರಿಸಿ ದೊಡ್ಡ ಬುತ್ತಿ ಗಂಟು ಕಟ್ಟಿಕೊಂಡು ಕುಟುಂಬದವರು ಸಾಮೂಹಿಕವಾಗಿ ಕುಳಿತು ಊಟ ಸವಿದರು.
ನಂತರ ಹೊಲದ ತುಂಬೆಲ್ಲಾ ಸುತ್ತಾಡಿ ಬೆಳದ ಪೈರಿನ ಜೊತೆಗೆ ಸೆಲ್ಪಿ ಪೋಟೋ ಕ್ಲಿಕ್ಕಿಸಿ ಸಂತಸ ಅನುಭವಿಸಿದರು.
ಹಿರಿಯ ರೈತರಿಗೆ ಭೂಮಿ ಪೂಜೆ ಸಲ್ಲಿಸಿದ ಧನ್ಯತೆಯಾದರೆ, ಮಕ್ಕಳು ಕಡಲೆ ಗಿಡವನ್ನು ಕಿತ್ತುಕೊಂಡು ಕಡಲೆ ತಿಂದ ಸಂಭ್ರಮದಲ್ಲಿದ್ದರು.
ರೈತ ಮಹಿಳೆಯರು ಬಣ್ಣ ಬಣ್ಣದ ಸೀರೆ ಉಟ್ಟುಕೊಂಡು ತಂದೆ-ತಾಯಿ, ಅಣ್ಣ-ತಮ್ಮ, ಬೀಗರು-ಬಿಜ್ಜರು ಹಾಗೂ ಸ್ನೇಹಿತರನ್ನು ಕರೆದುಕೊಂಡು , ಎತ್ತು ಚಕ್ಕಡಿ, ಟ್ರ್ಯಾಕ್ಟರ್ ಗಳನ್ನು ಸಿಂಗರಿಸಿಕೊಂಡು ಹೊಲಕ್ಕೆ ಹೋಗುವ ಗ್ರಾಮೀಣ ಸೊಗಡು ಎಲ್ಲೆಡೆ ಎದ್ದು ಕಾಣುತಿತ್ತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!