ಕೊಪ್ಪಳ/ ಯಲಬುರ್ಗಾ: ಪಲ್ಸ್ ಪೋಲಿಯೋ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ಅಂಗವಾಗಿ ಶ್ರೀ ದ್ಯಾಮಮ್ಮದೇವಿ ದೇವಸ್ಥಾನದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಲಸಿಕೆ ಹಾಕುವ ಮೂಲಕ ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ೫ ವರ್ಷದ ಎಲ್ಲಾ ಮಕ್ಕಳು ಆರೋಗ್ಯದಿಂದ ಇರಬೇಕಾದರೆ ಮಕ್ಕಳಿಗೆ ಪೋಲಿಯೋ ಹನಿ ಲಸಿಕೆ ಹಾಕಿಸಿ ಬರುವ ರೋಗಗಳಿಂದ ದೂರವಿದ್ದು, ಆರೋಗ್ಯದಿಂದ ಇರುವುದಕ್ಕೆ ಸಾಧ್ಯ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಯಲಬುರ್ಗಾ ತಾಲೂಕ ಅಧ್ಯಕ್ಷ ಶರಣಬಸಪ್ಪ ದಾನಕೈ, ಅಂಗನವಾಡಿ ಕಾರ್ಯಕರ್ತೆ ಸಾವಿತ್ರಿ ಅಂಬಲಿ, ಆಶಾ ಕಾರ್ಯಕರ್ತೆ ಗಿರಿಜಾ ಚಳಿಗೇರಿ, ಅಂಗನವಾಡಿ ಕಾರ್ಯರ್ತೆ ಗೌರಮ್ಮ ಬೇಲೇರಿ, ಮೇಲ್ವಿಚಾರಕಿ ಶಿಲ್ಪಾ, ಆರೋಗ್ಯ ಇಲಾಖೆ ಅಧಿಕಾರಿಯ ಅಧಿಕಾರಿಗಳಾದ ಡಾ. ಜಯಣ್ಣ ಕುರಿ, ರವಿಕುಮಾರ ಡಿ.ಎಚ್ , ಕೃಷ್ಣಾ ಜಿ ನಾಯಕ್ ಹಾಗೂ ಮುಖಂಡರಾದ ಶರಣಪ್ಪ ಗೌಡ ಉಳಗಡ್ಡಿ, ಚಂದ್ರಶೇಖರ ಕಮ್ಮಾರ, ಪ್ರಶಾಂತ ಬಡಿಗೇರ ಹಾಗೂ ಮಕ್ಕಳು, ಪಾಲಕರು ಭಾಗವಹಿಸಿ ಪೋಲಿಯೋ ಲಸಿಕೆ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ತಂಡದ ಸಂಖ್ಯೆಯಲ್ಲಿ ಬರುವ ಮಕ್ಕಳ ಸಂಖ್ಯೆ ೧೪೫ ಇದ್ದು, ಮನೆಗಳ ಸಂಖ್ಯೆ ೩೨೩ ಇದ್ದು ಎಲ್ಲಾ ಮಕ್ಕಳಿಗೂ ಪೋಲಿಯೋ ಹನಿ ಹಾಕುವ ,ಹಾಕಿಸುವ ಕಾರ್ಯ ಜರುಗಿತು.
- ಕರುನಾಡ ಕಂದ ಪತ್ರಿಕೆ.




















