ಜಾತಿವಾದದ ಬಳ್ಳಿ ಎಲ್ಲೆಲ್ಲೂ
ಹಬ್ಬುತಿದೆ ನೋಡಾ,
ಸೀಮಿತ ಆಲೋಚನೆಯ ಸ್ವಾರ್ಥಿಗಳು ನಾವಾಗಿಹೆವು ನೋಡಾ, ದೂರದೃಷ್ಟಿ ಇಲ್ಲದ
ಮಂದಿ ನಾವಾಗಿಹೆವು ನೋಡಾ
ಅಧಿಕಾರ ಲಾಲಸೆಗೆ ಜೋತು ಬಿದ್ದವರು ನಾವು ನೋಡಾ,
ಶಿವ ಶಿವಾ!
ಪಂಪ ಮಹಾಕವಿ ಹೇಳಿದ
“ಮಾನವ ಕುಲಂ ತಾನೊಂದೇ ವಲಂ”
ಮಾತೀಗ ಅರ್ಥ ಕಳೆದುಕೊಂಡಿದೆ ಅಯ್ಯಾ,
ಒಂದೊಂದು ಕುಲವೂ
ಸಹಸ್ರಾರು ಕುಲಂ ಆಗಿಹುದಯ್ಯ!
ಶಿವ ಶಿವಾ!

-ಶಿವಪ್ರಸಾದ್ ಹಾದಿಮನಿ, ಕೊಪ್ಪಳ.




















