ತೊಗರಿಯ ನಾಡು ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸುಂಠಾಣ ಮಠದ ವಾಲ್ ಪೋಸ್ಟರ್ ಬಿಡುಗಡೆ ಮಾಡಿದ ಶ್ರೀಗಳು.
ಸೂಗೂರ ಶಾಖಾಮಠದ ಸುಂಠಾಣ ಗುರುಭವನ ಲೋಕಾರ್ಪಣೆ, ಹಾಗೂ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಮತ್ತು ಮಠದ ಪೀಠಾಧಿಪತಿಗಳಿಗೆ ನಾಡಿನ ಭಕ್ತರಿಂದ ತುಲಾಭಾರ ಕಾರ್ಯಕ್ರಮದ ವಾಲ್ ಪೋಸ್ಟರ್ ಬಿಡುಗಡೆ.
ಕಾಳಗಿ: ತಾಲೂಕಿನ ಸುಗೂರ ಶ್ರೀಗುರುರುದ್ರಮುನೀಶ್ವರ ಹಿರೇಮಠ ಸುಂಠಾಣ ಶಾಖಾಮಠದ ನೂತನ ಗುರುಭವನ ಲೋಕಾರ್ಪಣೆ ಪೂಜ್ಯರಿಗೆ ತುಲಾಭಾರ ಹಾಗೂ ಕಲಬುರಗಿ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ವಾಲ್ ಪೋಸ್ಟರ್ ಸುಂಠಾಣ ಗ್ರಾಮದ ಭಕ್ತರ ಸಮ್ಮುಖದಲ್ಲಿ ಶ್ರೀ ರುದ್ರಮುನೀಶ್ವರ ಹಿರೇಮಠ, ಸೂಗೂರ, ಸುಂಠಾಣ ಶಾಖಾ ಮಠದ ಪೂಜ್ಯ ಶ್ರೀ ಷ, ಬ್ರ ಡಾ. ಚನ್ನರುದ್ರಮುನಿ ಶಿವಾಚಾರ್ಯರು ಬಿಡುಗಡೆ ಮಾಡಿದರು.
ಪುರಾಣ ಪ್ರವಚನ 18 ಜನವರಿ 2026 ರಿಂದ ಫೆಬ್ರವರಿ 7 ರ ವರೆಗೆ, ಗಡಿಗೌಡಗಾಂವ ಶ್ರೀ ಹಾವಗಲಿಂಗೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಡಾ.ಶಾಂತವೀರ ಶಿವಾಚಾರ್ಯರು ನಡೆಸಿಕೊಡಲಿದ್ದಾರೆ. ಹೀಗಾಗಿ ಸೂಗೂರ, ಸುಂಠಾಣ ಸೇರಿದಂತೆ ಸುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಗುರುಭವನ ಲೋಕಾರ್ಪಣೆ ಸೇವಾ ಸಮಿತಿಯವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸದಾಶಿವ ಪಾಟೀಲ್, ಕಾಶೀನಾಥ ಮಾಲಿ ಬಿರಾದಾರ, ರೈತಮುಖಂಡ ವೀರಣ್ಣ ಗಂಗಾಣಿ, ಅಮಿತ ಪಾಟೀಲ್, ಗುಂಡಯ್ಯ ಗುತ್ತೇದಾರ, ವಿನೋದ್ ಭಂಡಾರಿ, ಸಂತೋಷ್ ರಾಥೋಡ, ಶಿವಕುಮಾರ ಕೋರಿ, ಶಂಕರ ಬಿರಾದಾರ, ಅನಿಲ ಇಟಗಿ, ಹನುಮಂತ ಬಶೆಟ್ಟಿ, ಸೂರ್ಯಕಾಂತ ಪೂಜಾರಿ, ಬಾಬು ಬಶೆಟ್ಟಿ, ಹಣಮಂತ ದೊಡ್ಡಮನಿ, ಉಮ್ಮಕಾಂತ ಇಟಗಿ ದಿಲೀಪ್ ಕಾಳೆ ಸೇರಿದಂತೆ ಗ್ರಾಮದ ತಾಯಂದಿರು, ಪ್ರಮುಖರು ಉಪಸ್ಥಿತರಿದ್ದರು.
ವರದಿ ಎಸ್ ವಿ ಗಂಗಾಣಿ.



















